ಬೆಂಗಳೂರು: ನಗರದಲ್ಲಿ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಇಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (NGT), ಕರ್ನಾಟಕ ರಾಜ್ಯ ಮಟ್ಟದ ಘನತ್ಯಾಜ್ಯ ನಿರ್ವಹಣೆ ಉಸ್ತುವಾರಿ ಸಮಿತಿಯ ಅಧ್ಯಕ್ಷರು, ನಿವೃತ್ತ ನ್ಯಾಯಾಧೀಶರಾದ ಸುಭಾಷ್ ಬಿ. ಆದಿ ಜೊತೆ ಪಾಲಿಕೆ ಅಧಿಕಾರಿಗಳ ಸಭೆ ನಡೆಯಿತು.
ಇಂದೋರ್ ನಗರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿ ಮಾಡುವ ವಿಧಾನ ಕುರಿತು ಇಂದೋರ್ ಪ್ರತಿನಿಧಿಗಳ ತಂಡ ಪ್ರಾತ್ಯಕ್ಷಿಕೆ ನೀಡಿತು. ಕಸ ವಿಲೇವಾರಿ ಮಾಡುವ ಪ್ರಕ್ರಿಯೆ, ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯ ಒಂದೇ ವಾಹನದಲ್ಲಿ ಕೊಂಡೊಯ್ಯುವ ವಾಹನ, ತ್ಯಾಜ್ಯ ಸಂಸ್ಕರಣಾ ಘಟಕ, ಲಿಚೆಟ್ ಪ್ಲಾಂಟ್, ರಾಜಕಾಲುವೆಗಳಲ್ಲಿ ಮಿನಿ ಎಸ್.ಟಿ.ಪಿ ಘಟಕ ಅಳವಡಿಕೆ, ಸೋರುವ ಭಯೋಮಿತನೈಸೇಷನ್, ಆಟೋ ಟಿಪ್ಪರ್ಗಳಿಗೆ ಜಿ.ಪಿ.ಎಸ್ ಹಾಗೂ ಆರ್.ಎಫ್.ಐ.ಡಿ ಕಾರ್ಡ್ ಅಳವಡಿಸಿರುವ, ಕಸ ಗುಡಿಸುವ ಯಂತ್ರಗಳು, ಟ್ರಾನ್ಸ್ಫರ್ ಸ್ಟೇಷನ್ಸ್ ಸೇರಿದಂತೆ ಇನ್ನಿತ ಮಾದರಿಯ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು.
ಇಂದೋರ್ನಲ್ಲಿ ಅಳವಡಿಸಿಕೊಂಡಿರುವ ಕೆಲ ಅಂಶಗಳನ್ನು ನಗರದಲ್ಲಿ ಅಳವಡಿಸಿಕೊಂಡು ಯೋಜನೆ ಜಾರಿ ತರಲು ಸುಭಾಷ್ ಬಿ. ಆದಿ ತಿಳಿಸಿದರು. ಅದಕ್ಕೆ ಮೇಯರ್ ಪ್ರತಿಕ್ರಿಯಿಸಿ, ಈಗಾಗಲೇ ಪ್ರಾಯೋಗಿಕವಾಗಿ 5 ವಾರ್ಡ್ಗಳಲ್ಲಿ ಯೋಜನೆ ಜಾರಿ ತರಲಾಗುತ್ತಿದೆ. ಅದು ಯಶಸ್ವಿಯಾದ ಬಳಿಕ ಹಂತ ಹಂತವಾಗಿ ಎಲ್ಲಾ ವಾಡ್ಗಳಲ್ಲಿ ಯೋಜನೆ ಜಾರಿಗೊಳಿಸಿ, ಬೆಂಗಳೂರನ್ನು ಸ್ವಚ್ಛ ನಗರವನ್ನಾಗಿಸಲು ಕ್ರಮ ವಹಿಸಲಾಗುವುದು ಎಂದರು.