ಬೆಂಗಳೂರು: ನಗರದ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯಲ್ಲಿನ ಅಮೇಜಾನ್ ಗೋಡೌನ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕದ್ದ ಲಾಕರ್ನ್ನು ಇಂದು ಡಾಗ್ ಸ್ಕ್ವಾಡ್ನಿಂದ ಟ್ರೇಸ್ ಮಾಡಲಾಗಿದೆ.
ಜುಲೈ 17ರ ತಡರಾತ್ರಿ ಗೋಡನ್ಗೆ ಕನ್ನ ಹಾಕಿದ್ದ ಕಳ್ಳರು, 10 ಲಕ್ಷ ರೂ. ತುಂಬಿದ್ದ ಲಾಕರ್ ಹೊತ್ತೊಯ್ದಿದ್ದರು. ಲಾಕರ್ ಓಪನ್ ಮಾಡಲು ಆಗದೆ ಪರದಾಡಿದ್ದ ಕಳ್ಳರು, ಗೋಡೌನ್ನ 500 ಮೀಟರ್ ದೂರದ ಪೊದೆಯೊಂದರಲ್ಲಿ ಎಸೆದು ಪರಾರಿಯಾಗಿದ್ದರು.
ಈ ಸಂಬಂಧ ಸಂಪಿಗೆಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸ್ಥಳಕ್ಕೆ ಬಂದ ಶ್ವಾನ ಲಕ್ಷ್ಮೀ, ಇನ್ಟ್ಯಾಕ್ಟ್ ಪ್ರಾಪರ್ಟಿ ರಿಕವರಿ ಮಾಡಲಾಗಿದೆ.