ETV Bharat / city

ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಕನ್ನಡ ಕಲರವ: 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮಾಚರಣೆ - ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಇಂದು 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಪದ್ಮಶ್ರೀ ಪುಶಸ್ತಿ ಪುರಸ್ಕೃತ ಹಾಗೂ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆಗಮಿಸಿದ್ದರು.‌ ಈ ಸಮಾರಂಭದಲ್ಲಿ 'ನಮ್ಮ ಮೆಟ್ರೋ- ವರ್ಷದ ಕನ್ನಡಿಗ 2021ರ' ಪುಶಸ್ತಿಯನ್ನ ಮೊದಲ ಬಾರಿಗೆ ಸಾಹಿತಿ ಕುಂಬಾರ ವೀರಭದ್ರಪ್ಪ ಅವರಿಗೆ ನೀಡುವ ಮೂಲಕ ಗೌರವಿಸಲಾಯಿತು.

kannada-rajyotsava-celebration
ಕನ್ನಡ ರಾಜ್ಯೋತ್ಸವ
author img

By

Published : Nov 30, 2021, 7:16 AM IST

ಬೆಂಗಳೂರು: ನಮ್ಮ ಮೆಟ್ರೋ ರೈಲು ಹಾಗೂ ಬಿಎಂಆರ್‌ಸಿಎಲ್ ಕನ್ನಡ ಸಂಘದಿಂದ ಇಂದು 66ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಪದ್ಮಶ್ರೀ ಪುಶಸ್ತಿ ಪುರಸ್ಕೃತ ಹಾಗೂ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಆಗಮಿಸಿದ್ದರು.‌

kannada-rajyotsava-celebration
ಸಾಹಿತಿ ಕುಂಬಾರ ವೀರಭದ್ರಪ್ಪನವರಿಗೆ 'ನಮ್ಮ ಮೆಟ್ರೋ- ವರ್ಷದ ಕನ್ನಡಿಗ 2021ರ' ಪುಶಸ್ತಿ ಪ್ರದಾನ

ಅಥಿತಿಗಳಿಗೆ ಕರ್ನಾಟಕದ ಪ್ರಸಿದ್ಧ ಜಾನಪದ ಕಲೆಯಾದ ವೀರಗಾಸೆ ಹಾಗೂ ಡೊಳ್ಳು ಕುಣಿತದ ಮೂಲಕ ಆಹ್ವಾನಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಸಿನಿ ಕಲಾವಿದೆ ಸುಧಾ ನರಸಿಂಹರಾಜು ಹಾಗೂ ಹಾಸ್ಯ ಕಲಾವಿದ ಮಿಮಿಕ್ರಿ ಗೋಪಿ ಕೂಡ ಉಪಸ್ಥಿತರಿದ್ದರು.

ಈ ಸಮಾರಂಭದಲ್ಲಿ 'ನಮ್ಮ ಮೆಟ್ರೋ- ವರ್ಷದ ಕನ್ನಡಿಗ 2021ರ' ಪುಶಸ್ತಿಯನ್ನ ಮೊದಲ ಬಾರಿಗೆ ಕನ್ನಡ ಸಾಹಿತ್ಯದ ಖ್ಯಾತ ಕಾದಂಬರಿಕಾರರು, ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪುರಸ್ಕೃತರು ಹಾಗೂ ನೃಪತುಂಗ ಪ್ರಶಸ್ತಿ ವಿಜೇತರಾದ ಕುಂಬಾರ ವೀರಭದ್ರಪ್ಪ ಅವರಿಗೆ ನೀಡುವ ಮೂಲಕ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರು, ನೌಕರವರ್ಗ ಹಾಗೂ ಸಂಘದ ಅಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.. ಜೊತೆಗೆ ಸಂಸ್ಥೆಯ ನೌಕರರಿಂದ ಮತ್ತು ಕುಟುಂಬಸ್ಥರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು‌ ಕೂಡ ಹಮ್ಮಿಕೊಳ್ಳಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.