ಬೆಂಗಳೂರು: ಮೇ 15ರಂದು ಥಾಮಸ್ ಕಪ್ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ಭಾರತ ಬ್ಯಾಡ್ಮಿಂಟನ್ ತಂಡದ ಪ್ರಮುಖ ಆಟಗಾರ ಲಕ್ಷ್ಯ ಸೇನ್ ಸೋಮವಾರ ರಾತ್ರಿ ಬೆಂಗಳೂರಿಗೆ ಮರಳಿದರು. ಕೇಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಅವರನ್ನು ಕುಟುಂಬ ಸದಸ್ಯರು ಆತ್ಮೀಯವಾಗಿ ಸ್ವಾಗತಿಸಿದರು.
-
Karnataka: Badminton player Lakshya Sen arrives at Kempegowda International Airport, Bengaluru, after India created history as they lifted the Thomas Cup for the very first time on May 15
— ANI (@ANI) May 16, 2022 " class="align-text-top noRightClick twitterSection" data="
"It's a really proud moment for India; everyone came together as a team," says Lakshya Sen pic.twitter.com/gvZiSsl4s4
">Karnataka: Badminton player Lakshya Sen arrives at Kempegowda International Airport, Bengaluru, after India created history as they lifted the Thomas Cup for the very first time on May 15
— ANI (@ANI) May 16, 2022
"It's a really proud moment for India; everyone came together as a team," says Lakshya Sen pic.twitter.com/gvZiSsl4s4Karnataka: Badminton player Lakshya Sen arrives at Kempegowda International Airport, Bengaluru, after India created history as they lifted the Thomas Cup for the very first time on May 15
— ANI (@ANI) May 16, 2022
"It's a really proud moment for India; everyone came together as a team," says Lakshya Sen pic.twitter.com/gvZiSsl4s4
ಬಳಿಕ ಮಾತನಾಡಿದ ಲಕ್ಷ್ಯ ಸೇನ್, 'ಇದು ನಿಜವಾಗಿಯೂ ದೇಶಕ್ಕೆ ಹೆಮ್ಮೆಯ ಕ್ಷಣ. ಎಲ್ಲರೂ ತಂಡವಾಗಿ ಒಗ್ಗೂಡಿದ್ದೇವೆ. ಫೈನಲ್‌ನಲ್ಲಿ ಸಂಪೂರ್ಣ ವಿಭಿನ್ನ ವಾತಾವರಣವಿತ್ತು. ನಾನು ಮೊದಲ ಪಂದ್ಯದಲ್ಲಿ ಸೋತಿದ್ದರಿಂದ ಪಂದ್ಯದಲ್ಲಿ ಉತ್ತಮ ಆರಂಭ ಹೊಂದಿರಲಿಲ್ಲ. ಎರಡು ಮತ್ತು ಮೂರನೇ ಪಂದ್ಯದಲ್ಲಿ ಚೆನ್ನಾಗಿ ಆಡಿದೆ. ಕೊನೆಯ ಲೆಗ್‌ನಲ್ಲಿ ಭಯಭೀತನಾಗಿದ್ದೆ. ಆದರೆ ಆತುರವನ್ನು ತೋರಿಸಲಿಲ್ಲ.
ಪಂದ್ಯಾವಳಿಯಲ್ಲಿ ನಾವು ಇಲ್ಲಿಯವರೆಗೆ ಹೋಗುತ್ತೇವೆ ಎಂದು ಭಾವಿಸಿರಲಿಲ್ಲ. ಆದರೆ ಒಂದು ವಿಷಯ ಖಚಿತವಾಗಿತ್ತು. ನಾವು ಯಾವುದೇ ತಂಡವನ್ನು ಸೋಲಿಸಬಹುದು ಎಂದು ತಿಳಿದಿತ್ತು. ನಮ್ಮ ಆಲೋಚನೆಯು ಒಂದು ಸಮಯದಲ್ಲಿ ಒಂದು ಪಂದ್ಯದ ಮೇಲೆ ಮಾತ್ರ ಕೇಂದ್ರೀಕರಿಸಿತ್ತು' ಎಂದು ಸೇನ್ ಹೇಳಿದರು.
ಇದನ್ನೂ ಓದಿ: ಥಾಮಸ್ ಕಪ್ ದಿಗ್ವಿಜಯ: ಲಕ್ಷ್ಯ ಸೇನ್ಗೆ ₹5 ಲಕ್ಷ ಬಹುಮಾನ ಘೋಷಿಸಿದ ಸಿಎಂ