ETV Bharat / city

ಪೌರತ್ವ (ತಿದ್ದುಪಡಿ) ಕಾಯ್ದೆ ವಿವಾದ: ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಸಿಎಂ ಚಾಲನೆ - Citizenship Amendment Act Controversy

ಬಿಜೆಪಿ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಜನಜಾಗೃತಿ ಮೂಡಿಸಲು ನೀಡಿರುವ ಕರೆ ಹಿನ್ನೆಲೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದರು.

B S Yediyurappa
B S Yediyurappa
author img

By

Published : Jan 5, 2020, 3:02 PM IST

ಬೆಂಗಳೂರು: ಬಿಜೆಪಿ ಪೌರತ್ವ (ತಿದ್ದುಪಡಿ) ಕಾಯ್ದೆ ಕುರಿತು ಜನಜಾಗೃತಿ ಮೂಡಿಸಲು ನೀಡಿರುವ ಕರೆ ಹಿನ್ನೆಲೆ ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದರು.

ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಚಾಲನೆ ನೀಡಿದ ಸಿಎಂ

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಸಂತನಗರ 42 ನೇ ಬೂತ್​ನಲ್ಲಿ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದರು. ಈ ವೇಳೆ ಸಂಸದ ಪಿ.ಸಿ.ಮೋಹನ್, ಅಭಿಯಾನದ ಸಂಚಾಲಕ ರವಿಕುಮಾರ್ ಸಿಎಂಗೆ ಸಾಥ್‌ ನೀಡಿದರು. ಬಳಿಕ ಮನೆ ಮನೆಗೆ ತೆರಳಿದ ಸಿಎಂ, ನಿವಾಸದ ಹಿರಿಯರನ್ನು ಕೂರಿಸಿಕೊಂಡು ಪೌರತ್ವ (ತಿದ್ದುಪಡಿ) ಕಾಯ್ದೆ ಬಗ್ಗೆ ವಿವರಣೆ ನೀಡಿದರು. ನಾಗರಿಕರಲ್ಲಿ ಗೊಂದಲ‌ ಸೃಷ್ಟಿ ಮಾಡುತ್ತಿರುವ ಬಗ್ಗೆ ವಿವರಿಸಿ ಕಾಯ್ದೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಪೌರತ್ವ ಕಾಯ್ದೆಯಿಂದ ಮುಸ್ಲಿಂ ಸಮುದಾಯಕ್ಕೆ ಯಾವುದೇ ಕೆಟ್ಟ ಪರಿಣಾಮ ಆಗುವುದಿಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿ ಕಾಲದಲ್ಲಿ ಕೂಡ ಕಾಯ್ದೆ ಇತ್ತು. ಆದರೆ ಈಗ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಬಾಂಧವರಲ್ಲಿ ಪೌರತ್ವ ಕಾಯ್ದೆಯಿಂದ ತೊಂದರೆಯಾಗುತ್ತದೆ ಎನ್ನುವ ಗೊಂದಲ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ. ಆದ್ದರಿಂದ ಮನೆ ಮನೆಗೆ ತೆರಳಿ ವಾಸ್ತವಾಂಶವನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ. ಇಂದು ಮನೆ ಮನೆಗೆ ಭೇಟಿ ನೀಡುವ ಅಭಿಯಾನ ಆರಂಭಗೊಂಡಿದ್ದು ದೇಶಾದ್ಯಂತ 3 ಕೋಟಿ ಮನೆಗಳಿಗೆ ಇವತ್ತಿನಿಂದ ತೆರಳಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತದೆ. ರಾಜ್ಯದಲ್ಲಿ 30 ಲಕ್ಷ ಮನೆಗಳಿಗೂ ತೆರಳಿ ಜಾಗೃತಿ ಮೂಡಿಸಲಿದ್ದೇವೆ ಎಂದರು.

ಜಮೀರ್ ಅಹಮದ್ ಪ್ರಧಾನಿ ಬಗ್ಗೆ ಬೇಜವಾಬ್ದಾರಿ ಮಾತುಗಳನ್ನು, ಅರ್ಥವಿಲ್ಲದ ಮಾತುಗಳನ್ನು ಹೇಳಿದ್ದಾರೆ. ಅವರ ಹೇಳಿಕೆಗೆ ನಾನು ಯಾವುದೇ ಉತ್ತರ ನೀಡಲ್ಲ, ಆದರೆ ನಾವು ನಿಮ್ಮ ಅಪ್ಪ ಅಮ್ಮನ ಮನೆಯ ವಿಳಾಸ ಕೇಳಲು ಬಂದಿಲ್ಲ. ನಾವು ಬಂದಿರುವುದು ಪೌರತ್ವ ಕಾಯ್ದೆಯಿಂದ ಯಾವುದೇ ಮುಸ್ಲಿಂ ಬಾಂಧವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಲು ಮಾತ್ರ. ದೇಶದ 130 ಕೋಟಿ ಜನರಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ಎಂದರು.

ಇನ್ನು ನಾವು ಕೇವಲ ಹಿಂದೂ ಸಮುದಾಯದ ಮನೆಗಳಿಗೆ ಹೋಗುತ್ತಿಲ್ಲ, ಮುಸ್ಲಿಂ ಸಮುದಾಯದವರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ. ಹಿಂದೂ-ಮುಸ್ಲಿಂ ಎಂದು ಬೇಧವಿಲ್ಲದೇ ಎಲ್ಲರ ಮನೆಗಳಲ್ಲಿ ತೆರಳಲಿದ್ದೇವೆ ಎಂದರು.

Intro:

ಬೆಂಗಳೂರು: ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಮೂಡಿಸಲು ಬಿಜೆಪಿ ನೀಡಿರುವ ಕರೆಯಂತೆ ರಾಜ್ಯದಲ್ಲಿ ಮನೆ ಮನೆ ಸಂಪರ್ಕ ಅಭಿಯಾನದ ಮೂಲಕ ಪೌರತ್ವ ಕಾಯ್ದೆಯನ್ನು ಬಗ್ಗೆ ಇರುವ ಗೊಂದಲ ನಿವಾರಿಸುವ ಅಭಿಯಾನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದ್ದಾರೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಸಂತನಗರ 42 ನೇ ಬೂತ್ ನಲ್ಲಿ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಸಿಎಂ ಚಾಲನೆ ನೀಡಿದರು.ಸಂಸದ ಪಿ.ಸಿ ಮೋಹನ್, ಅಭಿಯಾನದ ಸಂಚಾಲಕ ರವಿಕುಮಾರ್ ಸಿಎಂಗೆ ಸಾತ್ ನೀಡಿದರು.ಮನೆ ಮನಗೆ ತೆರಳಿದ ಸಿಎಂ ನಿವಾಸದ ಹಿರಿಯರನ್ನು ಕೂರಿಸಿಕೊಂಡು ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ವಿವರಣೆ ನೀಡಿದರು. ನಾಗರಿಕರಲ್ಲಿ ಗೊಂದಲ‌ ಸೃಷ್ಟಿ ಮಾಡುತ್ತಿರುವ ಬಗ್ಗೆ ವಿವರಿಸಿ ತಪ್ಪು ಕಲ್ಪನೆ ಬದಿಗೊತ್ತಿ ಕಾಯ್ದೆ ಬೆಂಬಲಕ್ಕೆ ಮನವಿ ಮಾಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಿಎಸ್ವೈ,
ಇಡೀ ದೇಶಾದ್ಯಂತ ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಯಾವುದೇ ದುಷ್ಪರಿಣಾಮ ಯಾವುದೇ ಮುಸ್ಲಿಂ ಸಮುದಾಯಕ್ಕೆ ಆಗುವುದಿಲ್ಲ ಜವಹರಲಾಲ್ ನೆಹರು ಕಾಲದಲ್ಲಿ ಇಂದಿರಾಗಾಂಧಿ ಕಾಲದಲ್ಲಿ ರಾಜೀವ್ ಗಾಂಧಿ ಕಾಲದಲ್ಲಿ ಕೂಡ ಕಾಯ್ದೆ ಇತ್ತು ಆದರೆ ಈಗ ಅಲ್ಪಸಂಖ್ಯಾತ ಸಮುದಾಯದ ಮುಸ್ಲಿಂ ಬಾಂಧವರಲ್ಲಿ ಪೌರತ್ವ ಕಾಯ್ದೆಯಿಂದ ತೊಂದರೆಯಾಗುತ್ತದೆ ಎನ್ನುವ ಗೊಂದಲ ಮೂಡಿಸುವ ಪ್ರಯತ್ನ ನಡೆಸಲಾಗುತ್ತಿದೆ ಆದ್ದರಿಂದ ಮನೆಮನೆಗೆ ತೆರಳಿ ವಾಸ್ತವಾಂಶವನ್ನು ತಿಳಿಸುವ ಪ್ರಯತ್ನ ಮಾಡಲಾಗುತ್ತಿದೆ ಇಂದು ಮನೆ ಮನೆಗೆ ಭೇಟಿ ನೀಡುವ ಅಭಿಯಾನ ಆರಂಭಗೊಂಡಿದ್ದು ದೇಶಾದ್ಯಂತ 3 ಕೋಟ ಮನೆಗಳಿಗೆ ಇವತ್ತಿಂದ ಮನೆಮನೆಗೆ ತೆರಳಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತದೆ ರಾಜ್ಯದಲ್ಲಿ 30 ಲಕ್ಷ ಮನೆಗಳಿಗೆ ತೆರಳಿ ಜಾಗೃತಿ ಮೂಡಿಸಲಿದ್ದೇವೆ ಎಂದರು.

ಜಮೀರ್ ಅಹಮದ್ ಪ್ರಧಾನಿ ಬಗ್ಗೆ ಬೇಜವಾಬ್ದಾರಿ ಮಾತುಗಳನ್ನು, ಅರ್ಥವಿಲ್ಲದ ಮಾತುಗಳನ್ನು ಹೇಳಿದ್ದಾರೆ. ಅವರ ಹೇಳಿಕೆಗೆ ನಾನು ಯಾವುದೇ ಉತ್ತರ ನೀಡಲ್ಲ ಆದರ ನಾವು ನಿಮ್ಮ ಅಪ್ಪ ಅಮ್ಮನ ಮನೆಯ ವಿಳಾಸ ಕೇಳಲು ಬಂದಿಲ್ಲ ನಾವು ಬಂದಿರುವುದು ಪೌರತ್ವ ಕಾಯ್ದೆಯಿಂದ ಯಾವುದೇ ಮುಸ್ಲಿಂ ಬಾಂಧವರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಲು ಮಾತ್ರ.ದೇಶದ 130 ಕೋಟಿ ಜನರಲ್ಲಿ ಯಾರಿಗೂ ತೊಂದರೆಯಾಗುವುದಿಲ್ಲ ತೊಂದರೆಯಾಗುವುದಿಲ್ಲ ಎಂದರು.

ನಾವು ಕೇವಲ ಹಿಂದೂ ಸಮುದಾಯದ ಮನೆಗಳಿಗೆ ಹೋಗುತ್ತಿಲ್ಲ, ಮುಸ್ಲಿಂ ಸಮುದಾಯದವರಲ್ಲೂ ಜಾಗೃತಿ ಮೂಡಿಸಲಾಗುತ್ತಿದೆ ಹಿಂದೂ-ಮುಸ್ಲಿಮ್ ಎಂದು ಬೇಧವಿಲ್ಲದೇ ಎಲ್ಲರ ಮನೆಗಳಲ್ಲಿ ತರಳಲಿದ್ದೇವೆ ಎಂದರು.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.