ETV Bharat / city

ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು: ಹೊಸ ಆವಿಷ್ಕಾರ ತಿಳಿಸಲು ಬಂದ ನೆರೆ ರಾಜ್ಯದ ವಿಜ್ಞಾನಿಗಳು

ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಲು ಹಾಗೂ ತಾವು ಕಂಡು ಹಿಡಿದ ನೂತನ ಆವಿಷ್ಕಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ವಿನೂತನ ಕಾರ್ಯಕ್ರಮ 'ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.

ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು
author img

By

Published : Nov 6, 2019, 7:09 PM IST

ಬೆಂಗಳೂರು: ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಲು ಹಾಗೂ ತಾವು ಕಂಡು ಹಿಡಿದ ನೂತನ ಆವಿಷ್ಕಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ವಿನೂತನ ಕಾರ್ಯಕ್ರಮ 'ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.

ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು
ಪ್ರಧಾನ ಮಂತ್ರಿಗಳ ಸಲಹೆಯ ಮೇರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನೆರವಿನೊಂದಿಗೆ ಹಾಗೂ ಸ್ಥಳೀಯ ಕೇಂದ್ರೀಯ ವಿದ್ಯಾಲಯಗಳ ಸಹಭಾಗಿತ್ವದಲ್ಲಿ ವಿಜ್ಞಾನ ಕುರಿತಾದ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಚೆನ್ನೈನಿಂದ ಮೂವರು ವಿಜ್ಞಾನಿಗಳನ್ನೊಳಗೊಂಡ ತಂಡವು ಬೆಂಗಳೂರಿಗೆ ಬಂದಿದ್ದರು.ಪ್ರತಿಯೊಬ್ಬ ಮಕ್ಕಳಲ್ಲೂ ಇರುವ ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ವಿಜ್ಞಾನದ ಬಗ್ಗೆ ಇನ್ನಷ್ಟು ಆಸಕ್ತಿ ಬರುವಂತೆ ಪ್ರೇರೇಪಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ವಿಜ್ಞಾನಿ ಮತ್ತು ಸಿಇಇಆರ್ ಘಟಕದ ಮುಖ್ಯಸ್ಥರೂ ಆದ ಡಾ.ಎ.ಎಸ್.ಶರ್ಮಾ ಹೇಳಿದರು.

Intro:KN_BNG_4_SCIENCE_CLASS_SCRIPT_7201801Body:ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು;
ಹೊಸ ಆವಿಷ್ಕಾರ ತಿಳಿಸಲು ಬಂದ ನೆರೆ ರಾಜ್ಯದ ವಿಜ್ಞಾನಿಗಳು..

ಬೆಂಗಳೂರು : ವಿಜ್ಞಾನದ ಹೊಸ ಆವಿಷ್ಕಾರಗಳನ್ನು ಪರಿಚಯಿಸಲು ಇದೀಗ ಸ್ವತಃ ವಿಜ್ಞಾನಿಗಳೇ ಶಾಲಾ-ಕಾಲೇಜುಗಳ ಕದ ತಟ್ಟುತ್ತಿದ್ದಾರೆಂದರೆ ಆಶ್ಚರ್ಯವೆನ್ನಿಸಬಹುದು. ಹೌದು. ತಾವು ಕಂಡು ಹಿಡಿದ ನೂತನ ಆವಿಷ್ಕಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ವಿನೂತನ ಕಾರ್ಯಕ್ರಮ 'ಜಿಗ್ಯಾಸ್' ಗೆ ಮಲ್ಲೇಶ್ವರಂನ ಕೇಂದ್ರೀಯ ವಿದ್ಯಾಲಯದಲ್ಲಿ ಚಾಲನೆ ನೀಡಲಾಯಿತು.

ಪ್ರಧಾನ ಮಂತ್ರಿಗಳ ಸಲಹೆಯ ಮೇರೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ನೆರವಿನೊಂದಿಗೆ ಹಾಗೂ ಸ್ಥಳೀಯ ಕೇಂದ್ರೀಯ ವಿದ್ಯಾಲಯಗಳ ಸಹಭಾಗಿತ್ವದಲ್ಲಿ ವಿಜ್ಞಾನ ಕುರಿತಾದ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಚೆನ್ನೈನಿಂದ ಮೂವರು ವಿಜ್ಞಾನಿಗಳನ್ನೊಳಗೊಂಡ ತಂಡವು ಬೆಂಗಳೂರಿಗೆ ಬಂದಿದೆ. ಬೆಂಗಳೂರು ವ್ಯಾಪ್ತಿಯಲ್ಲಿ ಬರುವ 7 ಕೆವಿಎಸ್ ಗಳ 350 ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ.

ಪ್ರತಿಯೊಬ್ಬ ಮಕ್ಕಳಲ್ಲೂ ಇರುವ ಕಲಿಕಾ ಸಾಮರ್ಥ್ಯವನ್ನು ಗುರುತಿಸಿ ವಿಜ್ಞಾನದ ಬಗ್ಗೆ ಇನ್ನಷ್ಟು ಆಸಕ್ತಿ ಬರುವಂತೆ ಪ್ರೇರೇಪಿಸುವ ಗುರಿ ಹೊಂದಲಾಗಿದೆ ಎಂದು ಕಾರ್ಯಕ್ರಮ ಉದ್ಘಾಟಿಸಿದ ವಿಜ್ಞಾನಿ ಮತ್ತು ಸಿಇಇಆರ್ ಘಟಕದ ಮುಖ್ಯಸ್ಥರೂ ಆದ ಡಾ.ಎ.ಎಸ್.ಶರ್ಮಾ ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಚೆನ್ನೈನ ಸಿಎಸ್ಐಆರ್ ನ ವಿಜ್ಞಾನಿ ಡಾ. ಎನ್.ಜಿ ಭಗವಾನ್, ವಿಜ್ಞಾನಿಗಳು ಮತ್ತು ವಿದ್ಯಾರ್ಥಿಗಳ ನಡುವೆ ಇರುವ ಅಂತರ ಕಡಿಮೆ ಮಾಡಿ ಶಾಲಾ ಮಟ್ಟದಿಂದಲೇ ಮಕ್ಕಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದರು. ಜೊತೆಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾದ ಹೊಣೆ ನಮ್ಮ ಮೇಲಿದೆ ಎಂದೂ ತಿಳಿಸಿದರು.

ಇನ್ನು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮಾತನಾಡಿ ಇದರಲ್ಲಿ ಹೊಸ ಹೊಸ ಟೆಕ್ನಾಲಜಿ, ಸಾಫ್ಟ್‌ವೇರ್ ಗಳ ಬಗ್ಗೆ ತಿಳಿಸಿಕೊಡಲಾಗ್ತಿದೆ.. ವಿಜ್ಞಾನಿಗಳಿಂದಲೇ ವಿಜ್ಞಾನದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಅಲ್ಲದೆ, ವಿದ್ಯಾರ್ಥಿಗಳಿಗಿರುವ ಕೆಲವೊಂದು ಡೌಟ್ ಗಳನ್ನು ತಜ್ಞರು ಕ್ಲಿಯರ್ ಮಾಡಿದರು ಎಂದರು.

ಕೆವಿಎಸ್ ಮಲ್ಲೇಶ್ವರಂ ನ ಪ್ರಾಂಶುಪಾಲರಾದ ಶ್ರೀಮತಿ ಭಾನುಮತಿ ಉಪಸ್ಥಿತಿಯಲ್ಲಿ ಡಾ.ರಾಮರಾಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಎರಡು ದಿನದ ಈ ಸಂವಾದ ಕಾರ್ಯಕ್ರಮವನ್ನು ಬಳಿಕ ಹುಬ್ಬಳ್ಳಿ-ಧಾರವಾಡ ಮತ್ತು ಮಂಗಳೂರಿನಲ್ಲೂ ಮುಂದುವರಿಸಲಾಗುವುದು.

ಕರ್ನಾಟಕ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದರೆ ಇಲ್ಲಿನ ಸರ್ಕಾರಿ ಶಾಲಾ ಮಕ್ಕಳಿಗಾಗಿ ವಿಜ್ಞಾನ ಕುರಿತಾದ ಇಂಥ ಉಪಯುಕ್ತ ಕಾರ್ಯಕ್ರಮವನ್ನು ರೂಪಿಸಲಾಗುವುದು ಎಂದು ವಿಜ್ಞಾನಿಗಳು ಇದೇ ವೇಳೆ ತಮ್ಮ ಇಂಗಿತ ವ್ಯಕ್ತಪಡಿಸಿದರು. ನಿನ್ನೆ ಆರಂಭವಾದ ವಿಜ್ಞಾನ ಸಂವಾದ ಕಾರ್ಯಕ್ರಮ ಇಂದು ಸಂಜೆಯವರೆಗೆ ನಡೆಯಲಿದ್ದು ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ.

KN_BNG_4_SCIENCE_CLASS_SCRIPT_7201801

Byte: ಜಯಂತ್, ಕೆವಿಎಸ್ ವಿದ್ಯಾರ್ಥಿ
Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.