ETV Bharat / city

ಮಹಿಳಾ ಸಾಧಕಿಯರಿಗೆ ಬೆಂಗಳೂರು ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ

ನಿಮ್ಮೆಲ್ಲರ ಸಾಧನೆ ವಿಶ್ವಕ್ಕೆಲ್ಲ ಮಾದರಿಯಾದದ್ದು. ನಿಮ್ಮೆಲ್ಲರ ಸಾಧನೆಯನ್ನು ಗುರುತಿಸಿ, ಬೆನ್ನುತಟ್ಟಿ ಪ್ರೋತ್ಸಾಹ ನೀಡುವುದರ ಜೊತೆಗೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಅತ್ಯಂತ ಶ್ಲಾಘನೀಯ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.

author img

By

Published : Mar 25, 2022, 6:40 AM IST

award Presentation to women excellencies
ಮಹಿಳಾ ಸಾಧಕಿಯರಿಗೆ ಬೆಂಗಳೂರು ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ

ಬೆಂಗಳೂರು: ಸಾಧಕರು ಎಂದರೆ ವಿಶ್ವ ಮಟ್ಟದ ಸಾಧಕರು, ಅವಕಾಶಗಳ ತವರು ಬೆಂಗಳೂರು ವಿಶ್ವಕ್ಕೆ ಸಲ್ಲುವಂತಹದ್ದು. ಇಂತಹ ನಗರದಲ್ಲಿ ಸಾಧನೆ ಮಾಡಿದ ಮಹಿಳೆಯರು ಅಪರೂಪ ಮತ್ತು ಬಹಳ ವಿಶೇಷವಾದದ್ದು ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ್ ಹೇಳಿದ್ದಾರೆ. ಬಿ ಪ್ಯಾಕ್, ಬಿ ಕ್ಲಿಪ್ ಹಳೆ ವಿದ್ಯಾರ್ಥಿ ಸಂಘ ಮತ್ತು ಶ್ರೀ ಕೃಷ್ಣ ವೆಲ್ ನೆಸ್ ಯೋಗ ಮತ್ತು ಸಾಂಸ್ಕತಿಕ ಕೇಂದ್ರದ ವತಿಯಿಂದ ಬೆಂಗಳೂರಿನ 100 ಮಹಿಳಾ ಸಾಧಕಿಯರಿಗೆ ಬೆಂಗಳೂರು ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಈ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ನಿಮ್ಮೆಲ್ಲರ ಸಾಧನೆ ವಿಶ್ವಕ್ಕೆಲ್ಲ ಮಾದರಿಯಾದದ್ದು. ನಿಮ್ಮೆಲ್ಲರ ಸಾಧನೆಯನ್ನು ಗುರುತಿಸಿ, ಬೆನ್ನುತಟ್ಟಿ ಪ್ರೋತ್ಸಾಹ ನೀಡುವುದರ ಜೊತೆಗೆ ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಅತ್ಯಂತ ಶ್ಲಾಘನೀಯ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿ ಕಿರಣ್ ಅವರು, ಹೇಗೆ ಪ್ರತಿ ಪುರುಷನ ಸಾಧನೆಯಿಂದ ಮಹಿಳೆ ಇರ್ಥಳೋ ಅದೇ ರೀತಿ ಮಹಿಳೆಯ ಸಾಧನೆ ಹಿಂದೆ ಪುರುಷನ ಬೆಂಬಲ ಇರುತ್ತದೆ. ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರು ಸಮಾನವಾಗಿ ಹೆಜ್ಜೆ ಹಾಕಬೇಕು. ಪುರುಷ ಮತ್ತು ಮಹಿಳೆ ನಡುವೆ ಸ್ಪರ್ಧೆ ಇರಬಾರದು ಸಹಕಾರ ಇರಬೇಕು. ಈಗಾಗಿದ್ದಲ್ಲಿ ಉತ್ತಮ ಮತ್ತು ಮೌಲ್ಯಯುತ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದು ಹೇಳಿದ್ರು.

ಬೆಂಗಳೂರು ಮಹಿಳಾ ಸಾಧಕಿಯರ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್, ಈಸ್ಟ್ ವೆಸ್ಟ್ ಕಾಲೇಜ್ ನ ಚೇರ್ ಮೆನ್ ರಶ್ಮಿ ರವಿಕಿರಣ್, ಶಾಸಕ ರಿಝ್ವಾನ್ ಆರ್ಶದ್, ಶಾಸಕಿ ಸೌಮ್ಯ ರೆಡ್ಡಿ, ಮಾಜಿ ಸಚಿವ ಸಂತೋಷ್ ಲಾಡ್, ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ, ಬಿ ಪ್ಯಾಕ್ ನ ಆನಂದ್ ಬೇಗೂರು ಮೊದಲಾದವರು ಉಪಸ್ಥಿತಿರಿದ್ದರು

ಇದನ್ನು ಓದಿ:ಅಂಬೇಡ್ಕರ್ ಅರ್ಥಶಾಸ್ತ್ರ ವಿವಿ: ಕಲ್ಯಾಣ ಕರ್ನಾಟಕದ ವಿದ್ಯಾರ್ಥಿಗಳಿಗೆ ಶೇ.8 ರಷ್ಟು ಸೀಟು ಮೀಸಲು

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.