ETV Bharat / city

ಬೆಂಗಳೂರು: ಚಿನ್ನಾಭರಣ ದೋಚಲು ಪರಿಚಯಸ್ಥನಿಂದಲೇ ವೃದ್ಧ ದಂಪತಿ ಮೇಲೆ ಅಟ್ಯಾಕ್ - ಚಿನ್ನಾಭರಣ ದೋಚಲು ಪರಿಚಯಸ್ಥನಿಂದಲೇ ವೃದ್ಧ ದಂಪತಿ ಮೇಲೆ ಅಟ್ಯಾಕ್

ಚಿನ್ನಾಭರಣದ ಆಸೆಗಾಗಿ ಪರಿಚಿತ ವೃದ್ಧ ದಂಪತಿ ಮೇಲೆ ಹಲ್ಲೆ ಮಾಡಿದ ಆರೋಪಿಯನ್ನು ಸ್ಥಳೀಯರೇ ಹಿಡಿದು ಪೊಲೀಸರ ವಶಕ್ಕೆ ನೀಡಿದ ಘಟನೆ ಸಿ.ಕೆ. ಅಚ್ಚುಕಟ್ಟು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Attack on an elderly couple for jewelry grab
ಲಕ್ಷ್ಮೀ ಹಲ್ಲೆಗೊಳಗಾದವರು
author img

By

Published : Mar 14, 2022, 9:37 PM IST

ಬೆಂಗಳೂರು: ಪರಿಚಯಸ್ಥನಿಂದಲೇ ವೃದ್ಧೆಯ ಮೇಲೆ ಡ್ರ್ಯಾಗರ್​ನಿಂದ ಹಲ್ಲೆ ಮಾಡಿ ಚಿನ್ನಾಭರಣ ದೋಚಲು ಮುಂದಾಗಿ ಸ್ಥಳೀಯರ ಕೈಗೆ ಸಿಕ್ಕಿಹಾಕಿಕೊಂಡಿದ್ದಾನೆ. ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾ.12ರಂದು ಘಟನೆ ನಡೆದಿದ್ದು, ಷಣ್ಮುಗಂ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಖಾಸಗಿ ಶಾಲೆಯ ನಿವೃತ್ತ ಪ್ರಾಂಶುಪಾಲರಾಗಿದ್ದ ರಾಮಾನುಚಾರ್ಯ ಮತ್ತು ಲಕ್ಷ್ಮೀ ಅವರ ಮನೆಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ. ದಂಪತಿಗೆ ಷಣ್ಮುಗಂ ಪರಿಚಿತನಾಗಿದ್ದ. ಮಾ.12 ರಂದು ಮನೆಗೆ ಬಂದು ಮಾತನಾಡುತ್ತಾ ಇದ್ದಾಗ ರಾಮಾನುಚಾರ್ಯ ಅವರು ಹಣ್ಣು ತರಲು ಅಂಗಡಿಗೆ ತೆರಳಿದ ವೇಳೆ ಲಕ್ಷ್ಮೀ ಅವರ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ದೋಚಲು ಪ್ರಯತ್ನಿಸಿದ್ದಾನೆ.

ಬ್ಯುಸಿನೆಸ್ ಮಾಡಿ ಕೈ ಸುಟ್ಟುಕೊಂಡಿದ್ದ ಷಣ್ಮುಗಂ ವೃದ್ಧ ದಂಪತಿಯನ್ನು ಟಾರ್ಗೆಟ್ ಮಾಡಿಕೊಂಡಿದ್ದ. ಲಕ್ಷ್ಮೀ ಅವರ ಮೇಲೆ ಡ್ರ್ಯಾಗರ್​ನಿಂದ ಚುಚ್ಚಿ ಹಲ್ಲೆ ಮಾಡಿದ್ದಾನೆ ಆಗ ರಾಮಾನುಚಾರ್ಯ ಮನೆಗೆ ಮರಳಿದ್ದಾರೆ, ಅವರಿಗೂ ಚುಚ್ಚಿದ್ದಾನೆ. ಈ ಸಂದರ್ಭದಲ್ಲಿ ಸ್ಥಳೀಯರಿಗೆ ತಿಳಿದು ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಬಂಧಿಸಿದ್ದಾರೆ. ನಂತರ ಗಾಯಗೊಂಡವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ. ರಾಮಾನುಜಚಾರ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಲಕ್ಷ್ಮಿ ಅವರ ಸ್ಥಿತಿ ಗಂಭೀರವಾಗಿದೆ.

ಇದನ್ನೂ ಓದಿ: ತೋಟಗಾರಿಕ ಸಹಾಯಕ ನಿರ್ದೇಶಕ ಸೇರಿ ಇಬ್ಬರು ರೆಡ್​ ಹ್ಯಾಂಡಾಗಿ ಎಸಿಬಿ ಬಲೆಗೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.