ETV Bharat / city

ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪೊಲೀಸರಿಂದ ಮೌಲ್ಯಮಾಪನ ರಿಜಿಸ್ಟ್ರಾರ್​ ವಿಚಾರಣೆ - Dharwad University senior professor sent Police Custody

Assistant lecturer recruitment scam: ಆರೋಪಿ ಸೌಮ್ಯಾ ನೀಡಿದ ಮಾಹಿತಿ‌ ಮೇರೆಗೆ ಪೊಲೀಸರು ಧಾರವಾಡ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ನಾಗರಾಜ್ ಅವರ ವಿಚಾರಣೆ ನಡೆಸಿದ್ದಾರೆ.

Dharwad University senior professor
ಧಾರವಾಡ ವಿವಿ ಹಿರಿಯ ಪ್ರಾಧ್ಯಾಪಕ ನಾಗರಾಜ್
author img

By

Published : Apr 27, 2022, 1:45 PM IST

Updated : Apr 28, 2022, 10:55 PM IST

ಬೆಂಗಳೂರು: ಸಹಾಯಕ ಪ್ರಾಧ್ಯಾಪಕ ಪ್ರಶ್ನೆಪತ್ರಿಕೆ ಸೋರಿಕೆ‌ ಪ್ರಕರಣ ಬಗೆದಷ್ಟು ಆಳವಾಗುತ್ತಿದೆ‌. ಪ್ರಕರಣದಲ್ಲಿ ಬಂಧಿತ ಆರೋಪಿ ಸೌಮ್ಯ ಅವರನ್ನು ವಿಚಾರಣೆಗೊಳಪಡಿಸಿದ್ದ ಪೊಲೀಸರು, ಇವರು ನೀಡಿದ ಮಾಹಿತಿ‌ ಮೇರೆಗೆ ಮಲ್ಲೇಶ್ವರಂ‌ ಪೊಲೀಸರು ಮೌಲ್ಯಮಾಪನ ರಿಜಿಸ್ಟ್ರಾರ್ ಅವರ ವಿಚಾರಣೆ ನಡೆಸಿದ್ದಾರೆ.

ಧಾರವಾಡ ವಿಶ್ವವಿದ್ಯಾಲಯ ಮೌಲ್ಯಮಾಪನ ವಿಭಾಗದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ‌ನಾಗರಾಜ್ ಅವರಿಗೆ ಪ್ರಶ್ನೆಪತ್ರಿಕೆ ತಯಾರಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚನೆ ನೀಡಿತ್ತು. ಇದರಂತೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸುವಾಗ ಭೂಗೋಳಶಾಸ್ತ್ರದ ಅತಿಥಿ ಉಪನ್ಯಾಸಕಿಯಾಗಿದ್ದ ಸೌಮ್ಯ ಅವರಿಗೆ ಪ್ರಶ್ನೆಗಳನ್ನು ಸಿದ್ಧಪಡಿಸಲು ನಾಗರಾಜ್ ಹೇಳಿದ್ದರಂತೆ. ಇದರಂತೆ 17 ಪ್ರಶ್ನೆಗಳನ್ನ ಸಿದ್ದಪಡಿಸಿ ಸೌಮ್ಯ‌ ನೀಡಿದ್ದರು. ಇದರಲ್ಲಿ 12 ಪ್ರಶ್ನೆಗಳನ್ನು‌ ಉಳಿಸಿಕೊಂಡಿದ್ದರು.‌ ಸದ್ಯ ನಾಗರಾಜ್ ಅವರನ್ನು ವಶಕ್ಕೆ‌ ಪಡೆದುಕೊಂಡು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

ಆರೋಪಿ ಸೌಮ್ಯ ಹಿನ್ನೆಲೆ: ಮೂಲತಃ ಮೈಸೂರಿನ ನಿವಾಸಿಯಾಗಿರುವ ಆರೋಪಿ ಸೌಮ್ಯ, ರಂಗಸ್ವಾಮಿ ಶಿವಮ್ಮ ದಂಪತಿಯ ಮೂವರು ಮಕ್ಕಳಲ್ಲಿ‌ ಕೊನೆಯ ಪುತ್ರಿ. 2007-2010ರಲ್ಲಿ ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು. ಬಳಿಕ ಭೂಗೋಳ ಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದರು. 2013ರಿಂದ 2015ರವರೆಗೆ ಕೆಆರ್ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು.

ನಂತರ ಮಾನಸ ಗಂಗೋತ್ರಿ ಮೈಸೂರು ವಿಶ್ವ ವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದರು. 2019ರಿಂದ 20ರವರೆಗೆ ಭೂಗೋಳ ಶಾಸ್ತ್ರದಲ್ಲಿ‌‌ ಪಿಹೆಚ್​​ಡಿ ಅಧ್ಯಯನ ಮಾಡಿದ್ದರು. ನಂತರ ಮಾನಸ ಗಂಗೋತ್ರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು. ಮೈಸೂರಿನಲ್ಲಿ‌ ಪಿಹೆಚ್​​ಡಿ ಅಧ್ಯಯನ ಮಾಡುತ್ತಿದ್ದ ಸೌಮ್ಯಳಿಗೆ ನಾಗರಾಜ್ ಮಾರ್ಗದರ್ಶಕರಾಗಿದ್ದರು. ಹೀಗಾಗಿ ಶಿಷ್ಯೆ ಸೌಮ್ಯಗೆ ಕೆಲ ಪ್ರಶ್ನೆಗಳನ್ನ ಸಿದ್ಧಪಡಿಸಿ ಕಳಿಸುವಂತೆ ಸೂಚಿಸಿದ್ದರಂತೆ.

ಅದರಂತೆ ಸೌಮ್ಯ 17 ಪ್ರಶ್ನೆಗಳನ್ನ ಸಿದ್ಧಪಡಿಸಿ ಕಳುಹಿಸಿದ್ದರು. ಈ ಪೈಕಿ 12 ಪ್ರಶ್ನೆಗಳನ್ನು ನಾಗರಾಜ್ ಯಥಾವತ್ತಾಗಿ ಉಳಿಸಿಕೊಂಡಿದ್ದರು. ಗುರುಗಳಿಗೆ ಕಳಿಸಿದ್ದ ಪ್ರಶ್ನೆಗಳನ್ನ ಪರೀಕ್ಷೆಗೂ ಅರ್ಧ ಗಂಟೆ ಮೊದಲು ಸೌಮ್ಯ ಸ್ನೇಹಿತೆಯರಿಗೆ ಕಳುಹಿಸಿದ್ದರಂತೆ. ಸದ್ಯ ಇದೇ ಆಯಾಮದಲ್ಲಿ ಪೊಲೀಸರು ವಿಚಾರಣೆ ತೀವ್ರಗೊಳಿಸಿದ್ದಾರೆ.

ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ‌ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ : ಮಹಿಳಾ ಆರೋಪಿ ಬಂಧನ

Last Updated : Apr 28, 2022, 10:55 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.