ETV Bharat / city

ಅಪ್ಪು ಅಂತ್ಯಕ್ರಿಯೆ ಸುಗಮ.. ಗೃಹ ಸಚಿವರಿಗೆ ಕೃತಜ್ಞತಾ ಪತ್ರ ಬರೆದ ಪುನೀತ್ ರಾಜ್​​ಕುಮಾರ್​​​​ ಪತ್ನಿ ಅಶ್ವಿನಿ - ashwini puneeth rajkumar

ಅಂತ್ಯಸಂಸ್ಕಾರದ ಸಂದರ್ಭದಲ್ಲಿ ನೀಡಿದ ಸಹಕಾರಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಪತ್ರದ ಮೂಲಕ ಕೃತಜ್ಞತೆ ಸಲ್ಲಿಸಿದ್ದಾರೆ.

ashwini puneeth rajkumar
ಪುನೀತ್​​ ದಂಪತಿ
author img

By

Published : Nov 8, 2021, 6:56 AM IST

ಬೆಂಗಳೂರು: ನಟ ಪುನೀತ್‌ ರಾಜ್‌ಕುಮಾರ್‌ ನಿಧನರಾದ ಸಂದರ್ಭದಲ್ಲಿ ಸಂಪೂರ್ಣವಾಗಿ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಂತು, ಸುಸೂತ್ರವಾಗಿ ಅಂತ್ಯಸಂಸ್ಕಾರ ನೆರವೇರಿಸಲು ವ್ಯವಸ್ಥೆ ಮಾಡಿರುವುದಕ್ಕಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪುನೀತ್‌ ಪತ್ನಿ ಅಶ್ವಿನಿ ಕೃತಜ್ಞತೆ ಸಲ್ಲಿಸಿದ್ದಾರೆ.

ಗೃಹ ಸಚಿವರಿಗೆ ಪತ್ರ ಪುನೀತ್​​ ಪತ್ನಿ ಅಶ್ವಿನಿ ಪತ್ರ
ಗೃಹ ಸಚಿವರಿಗೆ ಪುನೀತ್​​ ಪತ್ನಿ ಅಶ್ವಿನಿ ಪತ್ರ

ಗೃಹ ಸಚಿವರಿಗೆ ಪತ್ರ ಬರೆದಿರುವ ಅಶ್ವಿನಿ, 'ಪುನೀತ್ ರಾಜ್‌ಕುಮಾರ್‌ ಅಕಾಲಿಕ ಅಗಲಿಕೆ ನಮಗಷ್ಟೇ ಅಲ್ಲದೇ ಇಡೀ ರಾಜ್ಯಕ್ಕೇ ಆಘಾತಕಾರಿ ವಿಷಯ. ಪುನೀತ್ ಅವರು ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದವರು. ನಮ್ಮ ನೋವನ್ನು ಅಡಗಿಸಿಟ್ಟುಕೊಂಡು ಸಕಲ ಗೌರವಗಳೊಂದಿಗೆ ಕಳುಹಿಸಿಕೊಡುವುದು ಅನಿವಾರ್ಯತೆಯಾಗಿತ್ತು. ಇಂತಹ ಸಂದರ್ಭದಲ್ಲಿ ಗೃಹಮಂತ್ರಿಗಳಾದ ತಾವು ನಮಗೆ ಬೆಂಬಲವಾಗಿ ನಿಂತಿದ್ದೀರಿ' ಎಂದು ಹೇಳಿದ್ದಾರೆ.

'ಲಕ್ಷಾಂತರ ಅಭಿಮಾನಿಗಳಿಗೆ ಅಂತಿಮ ದರ್ಶನದ ವ್ಯವಸ್ಥೆ ಮಾಡಿದ್ದಷ್ಟೇ ಅಲ್ಲದೇ ಅಂತ್ಯ ಸಂಸ್ಕಾರ ಸಂಪೂರ್ಣವಾಗುವರೆಗೂ ಜತೆಗಿದ್ದು ಧೈರ್ಯ ತುಂಬಿದ್ದೀರಿ. ಮೂರು ದಿನಗಳ ಕಾಲ ಯಾವುದೇ ಅಹಿತಕರ ಘಟನೆ ನಡೆಯದಂತೆ ನೀವು ಕೈಗೊಂಡ ಕ್ರಮಗಳಿಂದ ಕುಟುಂಬದವರು ಸೂಕ್ತವಾದ ವಿದಾಯ ಹೇಳಲು ಸಾಧ್ಯವಾಗಿದೆ. ನಿಮ್ಮ ಈ ಸಹಕಾರಕ್ಕೆ ನಮ್ಮ ಇಡೀ ಕುಟುಂಬ ಮತ್ತು ಎಲ್ಲ ಅಭಿಮಾನಿಗಳ ಪರವಾಗಿ ಕೃತಜ್ಞತೆಗಳು' ಎಂದು ಅಶ್ವಿನಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ತೆಲುಗು ರಿಯಾಲಿಟಿ ಶೋನಲ್ಲಿ ಪುನೀತ್​ ರಾಜಕುಮಾರ್​ಗೆ ಶ್ರದ್ಧಾಂಜಲಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.