ದೊಡ್ಡಬಳ್ಳಾಪುರ: ನಂದಿಬೆಟ್ಟ ನೋಡಬೇಕು ಎಂದು ಬೆಂಗಳೂರಿನಿಂದ ಬೈಕ್ ಏರಿ ಬಂದಿದ್ದ ಯುವಕರು ಚೆಕ್ ಪೋಸ್ಟ್‌ನಲ್ಲಿ ಟಿಕೆಟ್ ಖರೀದಿ ಮಾಡಲು ಹಣ ಇಲ್ಲದ ಹಿನ್ನೆಲೆ ರೈತರೊಬ್ಬರ ಬಳಿ 25 ಸಾವಿರ ನಗದು, ಒಂದು ಮೊಬೈಲ್ ಸುಲಿಗೆ ಮಾಡಿ ಪರಾರಿಯಾಗಿದ್ದರು. ಈ ಕುರಿತು ಕಾರ್ಯಾಚರಣೆ ನಡೆಸಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಇದೀಗ ಆರೋಪಿಗಳನ್ನ ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಬೆಂಗಳೂರಿನ ಗೋವಿಂದಪುರದ ಸೈಯದ್ ಸಲೀಂ ಮತ್ತು ಸೈಯದ್ ಅಬೀಬ್ ಉಲ್ಲಾ ಎಂಬಾತ ಬೈಕ್ಗೆ 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಖಾಲಿ ಜೇಬಿನಲ್ಲಿ ನಂದಿಬೆಟ್ಟಕ್ಕೆ ಬಂದಿದ್ರು. ಆದರೆ, ಅವರ ಬಳಿ ಪ್ರವೇಶ ಶುಲ್ಕಕ್ಕೂ ಕಾಸಿರಲಿಲ್ಲ. ಹಣಕ್ಕಾಗಿ ಸಂಚು ನಡೆಸಿದ ಖದೀಮರು, ರೈತನೊಬ್ಬನನ್ನು ಸುಲಿಗೆ ಮಾಡಿ 25 ಸಾವಿರ ನಗದು ಮತ್ತು ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದರು. ಸುಲಿಗೆ ಮಾಡಿದ ಹಣದಲ್ಲಿ ನಂದಿಬೆಟ್ಟಕ್ಕೆ ಹೋಗಿ ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡಿದ್ರು.
ದೊಡ್ಡಬಳ್ಳಾಪುರ ತಾಲೂಕಿನ ಮೇಳೆಕೋಟೆ ರೈತ ರಾಜಣ್ಣ ಎಂಬುವರು ಬೆಳದ ಬಿನ್ಸ್ ಅನ್ನು ಏಪ್ರಿಲ್ 29 ರಂದು ಮುಂಜಾನೆ ದೊಡ್ಡಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ವಾಪಸ್ ಬರುತ್ತಿದ್ದರು. ಇವರನ್ನೇ ಹಿಂಬಾಲಿಸಿದ ಇಬ್ಬರು ಆರೋಪಿಗಳು ಅಡ್ರೆಸ್ ಕೇಳುವ ನೆಪದಲ್ಲಿ ರಾಜಣ್ಣನನ್ನು ನಿಲ್ಲಿಸಿ, ಚಾಕು ತೋರಿಸಿ 25,200 ರೂಪಾಯಿ ನಗದು, ಮೊಬೈಲ್ ಕದ್ದು ಪರಾರಿಯಾಗಿದ್ದರು.
ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಇನ್ಸ್‌ಪೆಕ್ಟರ್ ಸತೀಶ್ ನೇತೃತ್ವದ ತಂಡ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೋನಾ ವಂಶಿಕೃಷ್ಣ ಅವರು ಸಿಬ್ಬಂದಿ ಕಾರ್ಯವನ್ನ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಬಾಲಕಿಯನ್ನು ಲಾಡ್ಜ್ಗೆ ಕರೆದ್ಯೊಯ್ದು ಅತ್ಯಾಚಾರ ಆರೋಪ: ಪ್ರಕರಣ ದಾಖಲು