ETV Bharat / city

ಕೋವಿಡ್ ಚಿಕಿತ್ಸೆಗಾಗಿ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನೇಮಕ: ಏ.4ಕ್ಕೆ ನೇರ ಸಂದರ್ಶನ - ಬೆಂಗಳೂರು ಸುದ್ದಿ

ಕೋವಿಡ್-19 ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆ, 6 ತಿಂಗಳ ಮಟ್ಟಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲು ಏ.4 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೇರ ಸಂದರ್ಶನ ನಡೆಸಲು ನಿರ್ಧರಿಸಲಾಗಿದೆ.

Appointment of additional medical staff for Kovid treatment
ಕೋವಿಡ್ ಚಿಕಿತ್ಸೆಗಾಗಿ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನೇಮಕ: ಏ.4ಕ್ಕೆ ನೇರ ಸಂದರ್ಶನ
author img

By

Published : Apr 2, 2020, 10:18 PM IST

ಬೆಂಗಳೂರು: ಕೋವಿಡ್-19 ಪ್ರಕರಣಗಳ ಹೆಚ್ಚುತ್ತಿರುವ ಹಿನ್ನೆಲೆ, ಅದನ್ನು ನಿಭಾಯಿಸುವ ‌ನಿಟ್ಟಿನಲ್ಲಿ ಸರ್ಕಾರ ಹೆಚ್ಚುವರಿ ವೈದ್ಯಕೀಯ ಸಿಬ್ಬಂದಿ ನೇಮಕ ಮಾಡುತ್ತಿದೆ. ಈ ಸಂಬಂಧ 6 ತಿಂಗಳ ಮಟ್ಟಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ಹೆಚ್ಚುವರಿ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಏ.4 ರಂದು ಬೆಳಗ್ಗೆ 10 ಗಂಟೆಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನೇರ ಸಂದರ್ಶನ ನಡೆಸಲು ನಿರ್ಧರಿಸಲಾಗಿದೆ.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೆ.ಸಿ.ಜನರಲ್ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಸರ್ ಸಿ.ವಿ.ರಾಮನ್ ಸಾರ್ವಜನಿಕ ಆಸ್ಪತ್ರೆಗಳಲ್ಲಿ ತಲಾ 10 ವೈದ್ಯರು ಅಥವಾ ತಜ್ಞರು ಬೇಕಾಗಿದ್ದು, ಅಭ್ಯರ್ಥಿಗಳು ಎಂಬಿಬಿಎಸ್ ಉತ್ತೀರ್ಣರಾಗಿ, ಕಡ್ಡಾಯವಾಗಿ ಇಂಟರ್ನ್‍ಶಿಫ್ ಪೂರೈಸಿ ಕೆಎಂಸಿ ನೋಂದಣಿ ಹೊಂದಿರಬೇಕು ಅಥವಾ ಸ್ನಾತಕೋತ್ತರ ಡಿಪ್ಲೊಮಾ ಪದವಿಯಲ್ಲಿ(ಕೆಎಂಸಿ) ನೋಂದಣಿಯಾಗಿರಬೇಕು. ಮಾಸಿಕ ವೇತನ ರೂ.60,000 ಗಳಂತೆ 6 ತಿಂಗಳಿಗೆ ಒಟ್ಟು 3,60,000 ಗಳಾಗಿರುತ್ತದೆ ಎಂದು ತಿಳಿಸಿದ್ದಾರೆ.

ಶುಶ್ರೂಷಕರ ಹುದ್ದೆಗೆ ಒಂದು ಆಸ್ಪತ್ರೆಗೆ ತಲಾ 20 ಜನರಂತೆ ಒಟ್ಟು 60 ಹುದ್ದೆಗಳಿಗೆ ನೇಮಕ ಅಗತ್ಯವಿದ್ದು, ಅಭ್ಯರ್ಥಿಗಳು ಮಾನ್ಯತೆ ಪಡೆದ ನರ್ಸಿಂಗ್ ಶಾಲೆಯಲ್ಲಿ ಬಿಎಸ್ಸಿ ಅಥವಾ ಜಿಎನ್​ಎಂ ತರಬೇತಿ ಹಾಗೂ ಕೆಎಂಸಿ ನೋಂದಣಿ ಹೊಂದಿರಬೇಕು. ಮಾಸಿಕ ವೇತನ ತಲಾ ಒಬ್ಬರಿಗೆ ರೂ. 20,000 ಗಳಂತೆ ಆರು ತಿಂಗಳಿಗೆ ಒಟ್ಟು ರೂ1,20,000/- ಗಳಾಗಿರುತ್ತದೆ ಎಂದು ತಿಳಿಸಿದ್ದಾರೆ. ಒಂದು ಆಸ್ಪತ್ರೆಗೆ 5 ಪ್ರಯೋಗ ಶಾಲಾ ತಂತ್ರಜ್ಞರಂತೆ ಒಟ್ಟು 15 ಸಿಬ್ಬಂದಿ ಅಗತ್ಯವಿದ್ದು, ಅಭ್ಯರ್ಥಿಗಳು ಡಿಎಂಎಲ್‍ಟಿ ಪದವಿಯೊಂದಿಗೆ ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆ ವೈದ್ಯಕೀಯ ಮಂಡಳಿಯಲ್ಲಿ ನೋಂದಣಿಯನ್ನು ಹೊಂದಿರಬೇಕು ಹಾಗೂ ಸೂಕ್ಷ್ಮ ಜೀವ ವಿಜ್ಞಾನ ಪರೀಕ್ಷೆಯ ಅನುಭವ ಹೊಂದಿರಬೇಕು (ಬಿಎಸ್ಸಿ ಲ್ಯಾಬ್ ಟೆಕ್ನೋಲಾಜಿಸ್ಟ್).

ಮಾಸಿಕ ವೇತನ ಒಬ್ಬರಿಗೆ ರೂ. 15,000/- ಗಳಂತೆ ಆರು ತಿಂಗಳಿಗೆ ಒಟ್ಟು ರೂ. 90,000/- ಗಳಾಗಿರುತ್ತದೆ.ಗ್ರೂಪ್ ಡಿ ಹುದ್ದೆಗೆ ಆಸ್ಪತ್ರೆಗೆ ತಲಾ 10 ಜನರ ಅಗತ್ಯವಿದ್ದು,ಒಟ್ಟು 30 ಸಿಬ್ಬಂದಿ ನೇಮಕದ ಅಗತ್ಯವಿದೆ. ಅಭ್ಯರ್ಥಿಗಳು ಎಸ್​ಎಸ್​ಎಲ್​ಸಿಯಲ್ಲಿ ಉತ್ತೀರ್ಣರಾಗಿರಬೇಕು. ಮಾಸಿಕ ರೂ 12,000/- ವೇತನದಂತೆ ಆರು ತಿಂಗಳಿಗೆ ರೂ 72,000/- ಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಆಸಕ್ತ ಅರ್ಹ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಬರುವಾಗ ತಮ್ಮ ಅರ್ಹತೆಯ ಮೂಲ ದಾಖಲೆಗಳನ್ನು ಹಾಗೂ ಒಂದು ನಕಲು ಪ್ರತಿಯನ್ನು ಕಡ್ಡಾಯವಾಗಿ ತರಬೇಕೆಂದು ಸೂಚಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.