ETV Bharat / city

ದೀಪಾವಳಿಗೆ ಚಿಲ್ಲರೆ ಪಟಾಕಿ ಅಂಗಡಿ ತೆರೆಯಲು ಪೊಲೀಸ್ ಇಲಾಖೆಯಿಂದ ಅರ್ಜಿ ಆಹ್ವಾನ - ದೀಪಾವಳಿ ಪ್ರಯುಕ್ತ ಚಿಲ್ಲರೆ ಪಟಾಕಿ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಿಬಿಎಂಪಿ ಮೈದಾನಗಳಲ್ಲಿ ಚಿಲ್ಲರೆ ಪಟಾಕಿ ಮಳಿಗೆಗಳನ್ನು ತೆರೆಯಲು ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಿದೆ.

ನಗರದ ಪೊಲೀಸ್
author img

By

Published : Oct 19, 2019, 3:26 PM IST

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಬಿಬಿಎಂಪಿ ಮೈದಾನಗಳಲ್ಲಿ ಚಿಲ್ಲರೆ ಪಟಾಕಿ ಮಳಿಗೆಗಳನ್ನು ತೆರೆಯಲು ಪೊಲೀಸ್ ಇಲಾಖೆ ವತಿಯಿಂದ ಸಾರ್ವಜನಿಕರಿಂದ ಅರ್ಜಿಗಳನ್ನು ಕರೆದಿದೆ.

ಬಿಬಿಎಂಪಿ, ಪೊಲೀಸ್ ಮಹಾನಿರ್ದೇಶಕರು, ಹೋಮ್‌ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ಆಂಡ್ ಎಮರ್ಜೆನ್ಸಿ ಸರ್ವೀಸ್ ವತಿಯಿಂದ ಪರಿಶೀಲಿಸಿ ಚಿಲ್ಲರೆ ಪಟಾಕಿ ಅಂಗಡಿ ತೆರೆಯಲು ಅವಕಾಶ ಕಲ್ಪಿಸಲಾಗುತ್ತದೆ. ಅರ್ಜಿದಾರರು ನಿನ್ನೆಯಿಂದ 20 ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 5ರ ಒಳಗೆ ಉಪ ಪೊಲೀಸ್ ಆಯುಕ್ತರ ಕಚೇರಿ, ಸಿಎಆರ್(ಕೇಂದ್ರ) ಮೈಸೂರು ರಸ್ತೆ, ಬೆಂಗಳೂರು-560018 ಇಲ್ಲಿಗೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು. ಒಂದು ಮೈದಾನಕ್ಕೆ ಒಬ್ಬ ವ್ಯಕ್ತಿಯು ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ.

ಅಷ್ಟೇ ಅಲ್ಲದೆ ಅರ್ಜಿ ನಮೂನೆ ಹಾಗೂ ಮೈದಾನದ ವಿವರಗಳನ್ನು ಉಪ ಪೊಲೀಸ್ ಆಯುಕ್ತರ ಕಚೇರಿ ಸಿಎಆರ್ (ಕೇಂದ್ರ) ಮೈಸೂರು ರಸ್ತೆ, ಬೆಂಗಳೂರು ಹಾಗೂ ಪೊಲೀಸ್ ಆಯುಕ್ತರು ಬೆಂಗಳೂರು ನಗರ ಅವರ ಕಚೇರಿ ಪ್ರಕಟಣಾ ಫಲಕದಲ್ಲಿ ನೋಡಬಹುದು. ಹಾಗೂ ಅ.22 ರಂದು ಬೆಳಗ್ಗೆ 11 ಗಂಟೆಗೆ ಉಪ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಲಾಟರಿ ನಡೆಸಲಾಗುವುದು. ಆಯ್ಕೆಯಾದವರಿಗೆ ಪರವಾನಗಿಯನ್ನು ಅ.24 ರಂದು ನೀಡಲಾಗುವುದು. ಸುರಕ್ಷತೆ ದೃಷ್ಟಿಯಿಂದ ನಿಗಪಡಿಸಿರುವ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

ಯಾವ ಯಾವ ದಾಖಲೆಗಳನ್ನು ಸಲ್ಲಿಸಬೇಕು:

ಆಸಕ್ತಿಯುಳ್ಳವರು ರಾಜ್ಯ ಸರ್ಕಾರದ ಆದೇಶದಂತೆ ಅರ್ಜಿದಾರ ನಿಗದಿತ ಅರ್ಜಿ ನಮೂನೆಯೊಂದಿಗೆ ಮೂರು ಡಿಡಿಗಳೊಂದಿಗೆ ದಾಖಲಾತಿಗಳನ್ನು ಸಲ್ಲಿಸಿ ಅನುಮತಿ ಪಡೆಯಬಹುದು. ಪಟಾಕಿ ಮಳಿಗೆ ತೆರೆಯುವವರು ಡಿಡಿ ರೂಪದಲ್ಲಿ 5 ಸಾವಿರ ರೂ.ಗಳನ್ನು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಕಟ್ಟಬೇಕು. ಈ ಹಣವನ್ನು ನಿರ್ವಹಣಾ ವೆಚ್ಚ ಪರವಾನಗಿ ಶುಲ್ಕವಾಗಿ ಅರ್ಜಿದಾರರಿಗೆ ಹಿಂದಿರುಗಿಸದೇ ಸರ್ಕಾರಕ್ಕೆ ಜಮಾ ಮಾಡಿಕೊಳ್ಳಲಾಗುವುದು. ಡಿಡಿ ರೂಪದಲ್ಲಿ 25 ಸಾವಿರ ರೂ.ಗಳನ್ನು ನಗರದ ಆಡಳಿತ ವಿಭಾಗದ ಉಪ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಮುಂಗಡ ಠೇವಣಿಯಾಗಿರಿಸಿಕೊಳ್ಳಲಾಗುವುದು. ಡಿಡಿ ರೂಪದಲ್ಲಿ 5 ಸಾವಿರ ರೂ.ಗಳನ್ನು ಡಿಜಿಪಿ ಫೈರ್ ಆಂಡ್ ಎಮರ್ಜೆನ್ಸಿ ಸರ್ವೀಸಸ್ ಬೆಂಗಳೂರು ಇವರ ಹೆಸರಿನಲ್ಲಿ ಸಲ್ಲಿಸಬೇಕು. ಕೋ-ಅಪರೇಟಿವ್ ಬ್ಯಾಂಕ್, ಸೊಸೈಟಿ ಬ್ಯಾಂಕ್ ಹೊರತುಪಡಿಸಿ, ರಾಷ್ಟ್ರೀಕೃತ, ಖಾಸಗಿ, ಷೆಡ್ಯೂಲ್ಡ್ ಬ್ಯಾಂಕ್‌ಗಳಿಂದ ಚೆಕ್​ ಪಡೆದು ಸಲ್ಲಿಸಬೇಕು.

Intro:Body:ಚಿಲ್ಲರೆ ಪಟಾಕಿ ಅಂಗಡಿ ತೆರೆಯಲು ಅರ್ಜಿ ಪೊಲೀಸ್ ಇಲಾಖೆಯಿಂದ ಅರ್ಜಿ ಆಹ್ವಾನ

ಬೆಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬಿಬಿಎಂಪಿ, ಪೊಲೀಸ್ ಮಹಾನಿರ್ದೇಶಕರು, ಹೋಮ್‌ಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್ ಆಂಡ್ ಎಮರ್ಜೆನ್ಸಿ ಸರ್ವೀಸ್ ವತಿಯಿಂದ ಪರಿಶೀಲಿಸಿ ನೀಡಲಾಗುವ ಬಿಬಿಎಂಪಿ ಮೈದಾನಗಳಲ್ಲಿ ಚಿಲ್ಲರೆಯಾಗಿ ಪಟಾಕಿ ಮಳಿಗೆಗಳನ್ನು ತೆರೆಯಲು ಸಾರ್ವಜನಿಕರಿಂದ ಅರ್ಜಿಗಳನ್ನು ಕರೆದಿದೆ.
ಅರ್ಜಿದಾರರು ಅ.18 ರಿಂದ 20ರವರೆಗೆ 3 ದಿನಗಳ ಬೆಳಗ್ಗೆ 10.30ರಿಂದ ಸಂಜೆ 5ರ ಒಳಗೆ ಉಪ ಪೊಲೀಸ್ ಆಯುಕ್ತರ ಕಚೇರಿ, ಸಿಎಆರ್(ಕೇಂದ್ರ) ಮೈಸೂರು ರಸ್ತೆ ಬೆಂಗಳೂರು-560018 ಇಲ್ಲಿಗೆ ಖುದ್ದಾಗಿ ಅರ್ಜಿ ಸಲ್ಲಿಸಬೇಕು. ಒಂದು ಮೈದಾನಕ್ಕೆ ಒಬ್ಬ ವ್ಯಕ್ತಿಯು ಒಂದೇ ಅರ್ಜಿಯನ್ನು ಮಾತ್ರ ಸಲ್ಲಿಸಲು ಅವಕಾಶವಿರುತ್ತದೆ. ಅರ್ಜಿದಾರರು ಹಲವಾರು ಅರ್ಜಿಗಳನ್ನುಸಲ್ಲಿಸಲು ಅವಕಾಶವಿರುವುದಿಲ್ಲ..
ಪಟಾಕಿಗಳ ಮಾರಾಟ ಸಂಬಂಧದಲ್ಲಿ ತಾತ್ಕಾಲಿಕ ಪರವಾನಗಿ ಲಾಟರಿಗಳ ಮೂಲಕ ಹಂಚಿಕೆ ಮಾಡಲಾಗುವುದು. ಅರ್ಜಿ ನಮೂನೆ ಹಾಗೂ ಮೈದಾನದ ವಿವರಗಳನ್ನು ಉಪ ಪೊಲೀಸ್ ಆಯುಕ್ತರ ಕಚೇರಿ ಸಿಎಆರ್(ಕೇಂದ್ರ) ಮೈಸೂರು ರಸ್ತೆ ಬೆಂಗಳೂರು ಹಾಗೂ ಪೊಲೀಸ್ ಆಯುಕ್ತರು ಬೆಂಗಳುರು ನಗರ ಅವರ ಕಚೇರಿ ಪ್ರಕಟಣಾ ಲಕದಲ್ಲಿ ನೋಡಬಹುದು. ಆ ಸಂಬಂ‘ ಅ.22 ರಂದು ಬೆಳಗ್ಗೆ 11 ಗಂಟೆಗೆ ಉಪ ಪೊಲೀಸ್ ಆಯುಕ್ತರ ಕಚೇರಿ ಸಿಎಆರ್(ಕೇಂದ್ರ) ಮೈಸೂರು ರಸ್ತೆ ಬೆಂಗಳೂರು ಇಲ್ಲಿ ಲಾಟರಿ ನಡೆಸಲಾಗುವುದು. ಆಯ್ಕೆಯಾದವರಿಗೆ ಪರವಾನಗಿಯನ್ನು ಅ.24 ರಂದು ನೀಡಲಾಗುವುದು. ಸುರಕ್ಷತೆ ದೃಷ್ಟಿಯಿಂದ ನಿಗಪಡಿಸಿರುವ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಾಟ ಮಳಿಗೆಗಳಿಗೆ ಪರವಾನಗಿ ನೀಡಲಾಗುವುದು ಎಂದು ನಗರ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಬಾಕ್ಸ್‌ಘಿ..
ಏನೇನು ದಾಖಲೆಗಳನ್ನು ಸಲ್ಲಿಸಬೇಕು
ಆಸಕ್ತಿಯುಳ್ಳವರು ರಾಜ್ಯ ಸರ್ಕಾರದ ಆದೇಶದಂತೆ ಪ್ರತಿಯೊಬ್ಬ ಅರ್ಜಿದಾರ ನಿಗದಿತ ಅರ್ಜಿ ನಮೂನೆಯೊಂದಿಗೆ ಮೂರು ಡಿಡಿಗಳೊಂದಿಗೆ ದಾಖಲಾತಿಗಳನ್ನು ಸಲ್ಲಿಸಿ ಅನುಮತಿ ಪಡೆಯಬಹುದು ಎಂದು ತಿಳಿಸಿದೆ.
ಪಟಾಕಿ ಮಳಿಗೆ ತೆರೆಯುವವರು ಡಿಡಿ ರೂಪದಲ್ಲಿ 5 ಸಾವಿರ ರೂ.ಗಳನ್ನು ನಗರ ಪೊಲೀಸ್ ಆಯುಕ್ತರ ಹೆಸರಿನಲ್ಲಿ ನಿರ್ವಹಣಾ ವೆಚ್ಚ ಪರವಾನಗಿ ಶುಲ್ಕವಾಗಿ ಅರ್ಜಿದಾರರಿಗೆ ಹಿಂದಿರುಗಿಸದೇ ಸರ್ಕಾರಕ್ಕೆ ಜಮಾ ಮಾಡಿಕೊಳ್ಳಲಾಗುವುದು. ಡಿಡಿ ರೂಪದಲ್ಲಿ 25 ಸಾವಿರ ರೂ.ಗಳನ್ನು ನಗರದ ಆಡಳಿತ ವಿಭಾಗದ ಉಪ ಪೊಲೀಸ್ ಆಯುಕ್ತರ ಹೆಸರಿನಲ್ಲಿ ಮುಂಗಡ ಠೇವಣಿಯಾಗಿರಿಸಿಕೊಳ್ಳಲಾಗುವುದು. ಡಿಡಿ ರೂಪದಲ್ಲಿ 5 ಸಾವಿರ ರೂ.ಗಳನ್ನು ಡಿಜಿಪಿ ಫೈರ್ ಆಂಡ್ ಎಮರ್ಜೆನ್ಸಿ ಸರ್ವೀಸಸ್ ಬೆಂಗಳೂರು ಇವರ ಹೆಸರಿನಲ್ಲಿ ಸಲ್ಲಿಸಬೇಕು. ಇವುಗಳನ್ನು ರಾಷ್ಟ್ರೀಕೃತ, ಖಾಸಗಿ, ಷೆಡ್ಯೂಲ್ಡ್ ಬ್ಯಾಂಕ್‌ಗಳಿಂದ(ಕೋ-ಅಪರೇಟಿವ್ ಬ್ಯಾಂಕ್, ಸೊಸೈಟಿ ಹೊರತುಪಡಿಸಿ)ಪಡೆದು ಸಲ್ಲಿಸಬೇಕು.Conclusion:

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.