ETV Bharat / city

ಸೊರಗಿದ ಕಾಂಗ್ರೆಸ್ ಪಕ್ಷಕ್ಕೆ ಕಾಯಕಲ್ಪ ನೀಡುತ್ತಾ ಪ್ರಶಾಂತ್ ಕಿಶೋರ್ ಸಲಹೆಗಳು?

ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಚುನಾವಣೆ ಗೆಲ್ಲಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಒಂದಿಷ್ಟು ಮಾರ್ಗದರ್ಶನ ನೀಡಿದ್ದಾರೆ. ಇವುಗಳನ್ನು ಪಕ್ಷ ಯಾವ ರೀತಿ ಬಳಸಿಕೊಳ್ಳಲಿದೆ, ಎಷ್ಟು ಫಲಪ್ರದವಾದಲಿದೆ ಎಂಬುದನ್ನು ಕಾದು ನೋಡಬೇಕಿದೆ.

An election strategist Prashant Kishore advises to Congress party
ಕಾಂಗ್ರೆಸ್ ಪಕ್ಷಕ್ಕೆ ಶಾಂತ್ ಕಿಶೋರ್ ಸಲಹೆಗಳು
author img

By

Published : Apr 27, 2022, 12:09 PM IST

Updated : Apr 27, 2022, 1:15 PM IST

ಬೆಂಗಳೂರು: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆ ಆಗಲು ನಿರಾಕರಿಸಿದ್ದಾರೆ. ಆದರೆ, ಚುನಾವಣೆ ಗೆಲ್ಲಲು ಕೈಗೊಳ್ಳಬಹುದಾದ ಕಾರ್ಯತಂತ್ರಗಳ ಕುರಿತು ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ ಒಂದಿಷ್ಟು ಮಾರ್ಗದರ್ಶನ ನೀಡಿದ್ದಾರೆ. ಈ ಮೂಲಕ ಸುದೀರ್ಘ ಅವಧಿಯಿಂದ ಅಧಿಕಾರ ವಂಚಿತವಾಗಿರುವ ಹಾಗೂ ಪ್ರತಿ ಚುನಾವಣೆಯಲ್ಲಿಯೂ ಒಂದೊಂದು ರಾಜ್ಯವನ್ನು ಕಳೆದುಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಪ್ರಶಾಂತ್ ಕಿಶೋರ್ ಸಲಹೆಯಿಂದ ಪುನಶ್ಚೇತನ ಸಿಗುತ್ತಾ?. ಸದ್ಯ ಛತ್ತೀಸ್​ಗಢ ಹಾಗೂ ರಾಜಸ್ಥಾನದಲ್ಲಿ ಮಾತ್ರ ಅಧಿಕಾರ ಹೊಂದಿರುವ ಕಾಂಗ್ರೆಸ್ ಮುಂಬರುವ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಪ್ರಶಾಂತ್ ಕಿಶೋರ್ ಸಲಹೆ-ಸೂಚನೆಗಳು ಎಷ್ಟು ಫಲಪ್ರದವಾಗಿ ಲಭಿಸಲಿವೆ ಎಂಬುದನ್ನು ಕಾದು ನೋಡಬೇಕಿದೆ.

ಸಲಹೆಗಳನ್ನು ಅಳವಡಿಸಿಕೊಳ್ಳುವ ಭರವಸೆ: ಪ್ರಶಾಂತ್ ಕಿಶೋರ್ ಹಿಂದಿನಂತೆ ತಾವು ಬಿಜೆಪಿಯೇತರ ಪಕ್ಷಗಳ ಗೆಲುವಿಗೆ ಸಲಹೆ ನೀಡುವ ಕಾರ್ಯ ಮುಂದುವರಿಸುವುದಾಗಿ ತಿಳಿಸಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳು ಹಾಗೂ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರಲು ಸಲಹೆ - ಸೂಚನೆಗಳನ್ನು ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಗೆ ನೀಡಿದ್ದಾರೆ. ಕಾಂಗ್ರೆಸ್ ದೆಹಲಿ ಗದ್ದುಗೆ ಹಿಡಿಯಲು ಪ್ರಶಾಂತ್ ನೀಡಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಇದೇ ತಂತ್ರಗಾರಿಕೆ ಅಳವಡಿಸಿಕೊಳ್ಳುವ ಭರವಸೆ ಸಹ ನೀಡಿದ್ದಾರೆ ಎಂಬ ಮಾಹಿತಿ ಇದೆ.

ಪರ-ವಿರೋಧ: ಚುನಾವಣಾ ತಂತ್ರಜ್ಞರಾಗಿರುವ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಬಲವರ್ಧನೆಗೆ ಕೊಟ್ಟಿರುವ ಸಲಹೆಗಳ ಬಗ್ಗೆ ಪಕ್ಷದಲ್ಲಿಯೇ ಸಾಕಷ್ಟು ಪರ-ವಿರೋಧ ಹೇಳಿಕೆಗಳು ಸಹ ಕೇಳಿ ಬರುತ್ತಿವೆ. ಸದ್ಯ ಪ್ರಶಾಂತ್​ ಅವರ ಸಲಹೆಗಳನ್ನು ಅಳವಡಿಸಿಕೊಳ್ಳುವ ಭರವಸೆ ನೀಡಿರುವ ಸೋನಿಯಾ ಗಾಂಧಿ ಮುಂಬರುವ ದಿನಗಳಲ್ಲಿ ಪಕ್ಷದ ವೇದಿಕೆಗಳಲ್ಲಿ ಈ ವಿಚಾರಗಳನ್ನು ಪ್ರಸ್ತಾಪಿಸಿ ಪಕ್ಷದ ನಾಯಕರ ಸಲಹೆಯನ್ನು ಸ್ವೀಕರಿಸಲಿದ್ದಾರೆ. ಇದಾದ ಬಳಿಕವೇ ಚುನಾವಣಾ ತಂತ್ರಗಾರಿಕೆಯಲ್ಲಿ ಪ್ರಶಾಂತ್ ಕಿಶೋರ್ ಸಲಹೆಗಳನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದ್ದಾರೆ ಎಂಬ ಮಾಹಿತಿಯೂ ಇದೆ.

ರಾಷ್ಟ್ರೀಯ ನಾಯಕರಲ್ಲಿ ಗೊಂದಲ: ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪಕ್ಷ ಬಲವರ್ಧನೆಗೆ ಪ್ರಶಾಂತ್ ಕಿಶೋರ್ ನೀಡಿರುವ ಸಲಹೆಗಳ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ನಾಯಕರಲ್ಲಿ ಪರ-ವಿರೋಧ ಹೇಳಿಕೆಗಳು ಕೇಳಿ ಬರುತ್ತಿದೆ. ಪ್ರಶಾಂತ್ ಸಲಹೆಗಳನ್ನ ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಕೆಲವರು ಮೋಯ್ಲಿ ಸಲಹೆಗೆ ತಮ್ಮ ಸಮ್ಮತಿ ವ್ಯಕ್ತಪಡಿಸಿದ್ದಾರೆ. ಬಹುತೇಕ ಸಲಹೆಗಳಿಗೆ ಮಲ್ಲಿಕಾರ್ಜುನ ಖರ್ಗೆಯವರ ಒಪ್ಪಿಗೆ ಸಹ ಲಭಿಸಿದೆ. ಆದರೆ, ಗುಲಾಂ ನಬಿ ಆಜಾದ್, ಮುಕುಲ್ ವಾಸ್ನಿಕ್ ಸೇರಿ ಕೆಲವರಿಂದ ಕೆಲ ಸಲಹೆಗಳಿಗೆ ವಿರೋಧ ವ್ಯಕ್ತವಾಗಿದೆ.

ಪ್ರಶಾಂತ್ ಕಿಶೋರ್ ಸಲಹೆಗಳು:

  • ಚುನಾವಣಾ ತಜ್ಞ ಪ್ರಶಾಂತ್ ಕಿಶೋರ್ ನೀಡಿರುವ ಸಲಹೆಗಳಲ್ಲಿ ಅತ್ಯಂತ ಪ್ರಮುಖವಾಗಿ ಇರುವುದು ಸೋನಿಯಾ ಗಾಂಧಿಯವರು ರಾಷ್ಟ್ರೀಯ ಅಧ್ಯಕ್ಷ ಸ್ಥಾನ ತ್ಯಜಿಸಬೇಕು.
  • ಗಾಂಧಿ ಪರಿವಾರದಿಂದ ಹೊರತಾದವರಿಗೆ ಅಧಿಕಾರ ನೀಡಬೇಕು. ಒಂದೊಮ್ಮೆ ಇದು ಸಾಧ್ಯವಾಗದೇ ಸೋನಿಯಾಗಾಂಧಿ ಅವರೇ ಮುಂದುವರಿಯುವುದಾದರೆ ಉಪಾಧ್ಯಕ್ಷ, ಕಾರ್ಯಾಧ್ಯಕ್ಷ ಹುದ್ದೆಗಳನ್ನು ಸೃಷ್ಟಿಸಿ ಬೇರೆಯವರಿಗೆ ಸ್ಥಾನ ಕೊಡಬೇಕು. ಬಹುದೊಡ್ಡ ಕಾರ್ಯಕರ್ತರ ಪಡೆಯನ್ನು ರಚಿಸಬೇಕು.
  • ತಳಮಟ್ಟದಲ್ಲಿ ಯುವ ಕಾರ್ಯಕರ್ತರಿಗೆ ಅವಕಾಶ ನೀಡಬೇಕು.
  • ಡಿಜಿಟಲ್ ಪ್ಲಾಟ್ ಫಾರಂ ನಿರ್ವಹಿಸುವ ಪಡೆಯನ್ನ ರಚಿಸಬೇಕು.
  • ಪಕ್ಷದ ತತ್ವ ಸಿದ್ಧಾಂತಗಳನ್ನು ಸ್ಪಷ್ಟವಾಗಿ ಜನರಿಗೆ ಮುಟ್ಟಿಸಬೇಕು.
  • ಉತ್ಸಾಹಿ ಯುವಜನರಿಗೆ ಆಯಕಟ್ಟಿನ ಸ್ಥಾನ ನೀಡಬೇಕು.
  • ಹಿರಿಯರು ಮಾರ್ಗದರ್ಶಕರಾಗಿ ಕೆಲಸ ನಿರ್ವಹಿಸಬೇಕು.
  • ನಿಷ್ಠಾವಂತರು, ಪ್ರಮಾಣಿಕರಿಗೆ ಆದ್ಯತೆ ನೀಡಬೇಕು.
  • ಕಾರ್ಯಕರ್ತರು ಪ್ರತಿ ಮತದಾರರನ್ನೂ ತಲುಪಬೇಕು.
  • ಬಾಲಂಗೋಚಿಗಳನ್ನು ನಿರ್ದಾಕ್ಷಿಣ್ಯವಾಗಿ ಕಿತ್ತು ಬಿಸಾಕಬೇಕು.
  • ಗಾಂಧಿ ಯಾರು? ಗೋಡ್ಸೆ ಯಾರು? ಎಂಬ ವ್ಯತ್ಯಾಸಗಳು ಜನರಿಗೆ ಅರ್ಥ ಮಾಡಿಸಬೇಕು.
  • ಈ ಸಿದ್ಧಾಂತದ ಮೇಲೆಯೇ ಚುನಾವಣೆ ಎದುರಿಸಬೇಕು. ರಾಜ್ಯ ಘಟಕಗಳಲ್ಲಿ ಮಾನಸಿಕ ಬಲಾಢ್ಯರಿಗೆ ಒತ್ತು ನೀಡಬೇಕು. ರಾಜ್ಯ ಘಟಕಗಳಲ್ಲಿ ಉತ್ಸಾಹ, ಚೇತರಿಕೆ ತುಂಬಬೇಕು. ಹೀಗಾದಾಗ ಮಾತ್ರ ಪಕ್ಷ ದೆಹಲಿಯಲ್ಲಿ ಗದ್ದುಗೆ ಹಿಡಿಯಬಹುದು ಎಂದಿದ್ದಾರೆ.

ಇದನ್ನೂ ಓದಿ: ತೈಲ ಬೆಲೆಯಲ್ಲಿ ಯಥಾಸ್ಥಿತಿ.. ಹೀಗಿದೆ ರಾಜ್ಯ- ದೇಶದ ಪ್ರಮುಖ ನಗರಗಳಲ್ಲಿನ ಪೆಟ್ರೋಲ್, ಡೀಸೆಲ್ ದರ

ಮತದಾರರ ಒಲೈಕೆಯಿಂದ ಹಿಡಿದು ಸ್ಪಷ್ಟ ಮಾಹಿತಿ ಮುಂದಿಟ್ಟಿರುವ ಪ್ರಶಾಂತ್ ಸಲಹೆಯನ್ನು ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಯಾವ ರೀತಿ ಸ್ವೀಕರಿಸಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

Last Updated : Apr 27, 2022, 1:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.