ETV Bharat / city

ಪಶು ವೈದ್ಯರು, ಸಿಬ್ಬಂದಿಯನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ: ಪ್ರಿಯಾಂಕ್ ಖರ್ಗೆ - ಮಾಜಿ ಸಚಿವ ಪ್ರಿಯಂಕ್ ಖರ್ಗೆ

ಕೊರೊನಾ ಭೀತಿಯ ನಡುವೆಯೂ ಗ್ರಾಮಗಳಲ್ಲಿ ರೈತರ ಮನೆ-ಮನೆಗೆ ಭೇಟಿ ನೀಡಿ, ಆಕಳು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಇತರೆ ಜಾನುವಾರುಗಳಿಗೆ ಪಶುವೈದ್ಯರು, ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಕಾರ್ಯವನ್ನೂ ಸರ್ಕಾರ ಗಂಭೀರ ಪರಿಗಣನೆ ಮಾಡಬೇಕೆಂದು ಪ್ರಿಯಾಂಕ್ ಖರ್ಗೆ ಒತ್ತಾಯಿಸಿದ್ದಾರೆ.

Priyank Khargay said
ಪ್ರಿಯಂಕ್ ಖರ್ಗೆ
author img

By

Published : May 20, 2021, 10:54 PM IST

ಬೆಂಗಳೂರು: ಪಶು ವೈದ್ಯರು ಹಾಗೂ ಸಿಬ್ಬಂದಿಯನ್ನು ಸಹ ಕೊರೊನಾ ವಾರಿಯರ್​ಗಳಾಗಿ ಪರಿಗಣಿಸಬೇಕು ಎಂದು ಮಾಜಿ ಸಚಿವ ಪ್ರಿಯಾಂಕ್​ ಖರ್ಗೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

Priyank Khargay said
ಪ್ರಿಯಂಕ್ ಖರ್ಗೆ

ಓದಿ: ಭಾರತ ಲಸಿಕೆ ಉಚಿತವಾಗಿ ಏಕೆ ಒದಗಿಸುತ್ತಿಲ್ಲ: ಸರ್ಕಾರಕ್ಕೆ ಪ್ರಿಯಾಂಕ ಖರ್ಗೆ ಪ್ರಶ್ನೆ

ಸಿಎಂ ಬಿ.ಎಸ್. ಯಡಿಯೂರಪ್ಪ ಹಾಗೂ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರಿಗೆ ಪತ್ರ ಬರೆದು ಮನವಿ ಮಾಡಿರುವ ಅವರು, ರಾಜ್ಯದ ಗ್ರಾಮೀಣ ಪ್ರದೇಶದ ಜನತೆ ತಮ್ಮ ಜೀವನೋಪಾಯಕ್ಕಾಗಿ ವ್ಯವಸಾಯದ ಜೊತೆಗೆ ಪಶುಪಾಲನೆಯನ್ನು ಅವಲಂಬಿಸಿದ್ದಾರೆ. ಗ್ರಾಮೀಣ ರೈತರ ಆರ್ಥಿಕಾಭಿವೃದ್ಧಿಯಲ್ಲಿ ಜಾನುವಾರುಗಳು ಅತೀ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು, ಈ ಜಾನುವಾರು ಸಂಪತ್ತಿಗೆ ಆರೋಗ ರಕ್ಷಣೆ ನೀಡುವ ಕಾರ್ಯವನ್ನು ಪಶುವೈದ್ಯರು ನಿರ್ವಹಿಸುತ್ತಿದ್ದಾರೆ.

ಕೊರೊನಾ ಭೀತಿಯ ನಡುವೆಯೂ ಗ್ರಾಮಗಳಲ್ಲಿ ರೈತರ ಮನೆ-ಮನೆಗೆ ಭೇಟಿ ನೀಡಿ, ಆಕಳು, ಎಮ್ಮೆ, ಕುರಿ, ಮೇಕೆ ಸೇರಿದಂತೆ ಇತರೆ ಜಾನುವಾರುಗಳಿಗೆ ಪಶುವೈದ್ಯರು, ಚಿಕಿತ್ಸೆ ನೀಡುತ್ತಿದ್ದಾರೆ. ಇವರ ಕಾರ್ಯವನ್ನೂ ಸರ್ಕಾರ ಗಂಭೀರವಾಗಿ ಪರಿಗಣನೆ ಮಾಡಬೇಕೆಂದು ಒತ್ತಾಯಿಸಿದ್ದಾರೆ. ಇವರ ಜೊತೆ ಪಶು ಆಸ್ಪತ್ರೆಗಳ ಡಿ ಗ್ರೂಪ್ ಸಿಬ್ಬಂದಿ ಹಾಗೂ ಕಾಂಪೌಂಡರ್​​ಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ರೀತಿ ಪಶುವೈದ್ಯರು ಮನಗಳಿಗೆ ಭೇಟಿ ನೀಡಿ ಚಿಕಿತ್ಸೆ ನೀಡುವ ಸಂದರ್ಭದಲ್ಲಿ 60ಕ್ಕೂ ಅಧಿಕ ಪಶು ಆಸ್ಪತ್ರೆಯ ಸಿಬ್ಬಂದಿಗೆ ಸೋಂಕು ತಗುಲಿದ್ದು, 8ಕ್ಕೂ ಅಧಿಕ ನೌಕರರು ಕೋವಿಡ್​ಗೆ ಬಲಿಯಾಗಿದ್ದಾರೆ.

ಆದರೂ, ಸರ್ಕಾರವು ಇವರನ್ನು ಕೋವಿಡ್ ಮುಂಚೂಣಿಯ ವಾರಿಯರ್ಸ್​ಗಳೆಂದು ಪರಿಗಣಿಸಿರುವುದಿಲ್ಲ. ಈ ರೀತಿ ಜನ-ಜಾನುವಾರು ಹಾಗೂ ಇನ್ನಿತರ ಸಾಕು ಪ್ರಾಣಿಗಳ ಆರೋಗ್ಯ ಕಾಳಜಿಯ ಜೊತೆಗೆ, ಪ್ರಾಣಿಗಳ ಉತ್ಪಾದನೆಗಳನ್ನು ಅಧಿಕವಾಗಿ ಲಭ್ಯಗೊಳಿಸುವ ಮೂಲಕ ಗ್ರಾಮೀಣ ಜನರ ಜೀವನ ಮಟ್ಟವನ್ನು ಸುಧಾರಿಸುವುದರೊಂದಿಗೆ ರಾಜ್ಯದ ಪಶುಸಂಪತ್ತನ್ನು ಕಾಪಾಡುತ್ತಿದ್ದಾರೆ. ಅಲ್ಲದೇ ರಾಜ್ಯದಲ್ಲಿ ಮಳೆ ಪ್ರಾರಂಭವಾಗಿದ್ದು, ರೈತರು ಬಿತ್ತನೆ ಮಾಡಲು ಆರಂಭಿಸಿದ್ದಾರೆ.

Priyank Khargay said
ಪ್ರಿಯಂಕ್ ಖರ್ಗೆ

ಇಂತಹ ಸಂದರ್ಭದಲ್ಲಿ ಸಾಕು ಪ್ರಾಣಿಗಳ ಆರೋಗ್ಯ ರಕ್ಷಣೆ ಮಾಡುವುದರಲ್ಲಿ ಪಶು ಸಂಗೋಪನ ಇಲಾಖೆಯವರು ಕಾರಣಿಭೂತರಾಗಿರುತ್ತಾರೆ. ಆದ್ದರಿಂದ ಪಶುವೈದ್ಯರು, ಪಶು ಆಸ್ಪತ್ರೆಗಳ ಸಿಬ್ಬಂದಿಯನ್ನೂ ಕೂಡಾ ಕೂರೊನಾ ವಾರಿಯರ್ಸ್​ಗಳೆಂದು ಪರಿಗಣಿಸಿ, ಅವರಿಗೆ ಆದ್ಯತೆಯ ಮೇಲೆ ಲಸಿಕೆ ನೀಡುವುದರ ಜೊತೆ, ಇವರಿಗೆ ಅಗತ್ಯ ರಕ್ಷಣಾ ಸಾಮಗ್ರಿಗಳನ್ನು ಒದಗಿಸಬೇಕು. ಪಶು ವೈದ್ಯರಿಗೆ, ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದಲ್ಲಿ ಅವರ ಸಂಪೂರ್ಣ ವೈದ್ಯಕೀಯ ವೆಚ್ಚವನ್ನು ಸರ್ಕಾರವೇ ಭರಿಸಲು ಕ್ರಮ ಕೈಗೊಳ್ಳಬೇಕೆಂದು ಖರ್ಗೆ ಒತ್ತಾಯಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.