ETV Bharat / city

ಅಕ್ಷಯ ತೃತೀಯ ವಿಶೇಷ ದಿನ ; ಚಿನ್ನಾಭರಣಗಳ ಮೇಲೆ ಆಕರ್ಷಕ ಆಫರ್

ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ದೇಶದ ವಿವಿಧ ಮೂಲೆಗಳ ಆಭರಣ ತಯಾರಕರ, ಮಾರಾಟಗಾರರ ಜಾಲ ವಿಸ್ತರಣೆಗೊಂಡಿದ್ದು, ಸಾಕಷ್ಟು ಮಳಿಗೆಗಳು ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ಘೋಷಿಸಿವೆ. ತಮ್ಮದೇ ಆಕರ್ಷಕ ಕೊಡುಗೆ ಮೂಲಕ ವ್ಯಾಪಾರ ವೃದ್ಧಿಸಿಕೊಳ್ಳುವ, ಗ್ರಾಹರನ್ನು ತಮ್ಮತ್ತ ಸೆಳೆಯುತ್ತಿವೆ..

Special offer on Gold for Akshaya thritiya
ಅಕ್ಷಯ ತೃತೀಯ ವಿಶೇಷ ದಿನ; ಆಕರ್ಷಕ ಆಫರ್
author img

By

Published : May 3, 2022, 3:07 PM IST

ಬೆಂಗಳೂರು : ಅಕ್ಷಯ ತೃತೀಯ ಹಿಂದೂಗಳಿಗೆ ಶುಭ ದಿನ ಮತ್ತು ಕರ್ನಾಟಕದಲ್ಲಿ ಇದನ್ನು ಅಕ್ಷಯ ತದಿಗೆ ಎಂದು ಆಚರಿಸುತ್ತಾರೆ. ಈ ದಿನ ಲೋಹ ಅದರಲ್ಲಿಯೂ ಚಿನ್ನ-ಬೆಳ್ಳಿ ಕೊಳ್ಳುವುದರಿಂದ ಅದು ಅಕ್ಷಯವಾಗುತ್ತದೆ ಎಂಬ ನಂಬಿಕೆ ಹಲವರಲ್ಲಿದೆ. ಇದರಿಂದ ಇಂದು ಆಭರಣ ಕೊಳ್ಳಲು ಹಲವರು ಆಸಕ್ತಿ ತೋರಿಸುತ್ತಾರೆ. ಅದಕ್ಕೆ ತಕ್ಕಂತೆ ಇಂದು ವ್ಯಾಪಾರಿಗಳು ಕೂಡ ವಿಶೇಷ ಕೊಡುಗೆಗಳನ್ನು ಘೋಷಿಸುತ್ತಾರೆ.

ಈ ದಿನವು ಉದ್ಯಮಿಗಳಿಗೆ ಮಾತ್ರವಲ್ಲ ಮನೆಗಳಿಗೂ ಸಹ ಅದೃಷ್ಟ ಮತ್ತು ಐಶ್ವರ್ಯವನ್ನು ತಂದು ಕೊಡುತ್ತದೆ ಎಂದು ಹೇಳಲಾಗುತ್ತದೆ. ಅಕ್ಷಯ ತೃತೀಯವು ಉತ್ತಮ ನಂಬಿಕೆಯ ಸಂಕೇತವಾಗಿ ಮಾರ್ಪಟ್ಟಿದೆ. ಈ ದಿನ ಕೆಲವು ರೀತಿಯ ಲೋಹವನ್ನು ಖರೀದಿಸುವುದು ವಿಶೇಷವಾಗಿ ಚಿನ್ನ ಅಥವಾ ಬೆಳ್ಳಿಯನ್ನು ಖರೀದಿಸುವುದು ಕುಟುಂಬ ಸದಸ್ಯರಿಗೆ ಉತ್ತಮ ಆರೋಗ್ಯವನ್ನು ಸೂಚಿಸುತ್ತದೆ. ಕೊಳ್ಳುವವರ ಜೊತೆ ಇದು ಮಾರುವವರಿಗೂ ಸಹ ಇದು ಶುಭ ದಿನವಾಗಿರುವುದರಿಂದ ವ್ಯಾಪಾರಿಗಳೂ ವಿಶೇಷ ಕೊಡುಗೆ ಘೋಷಿಸುತ್ತಾರೆ.

ಕಳೆದ ಏಳೆಂಟು ವರ್ಷಗಳ ಈಚೆ ಅಕ್ಷಯ ತೃತೀಯಗೆ ವಿಶೇಷ ಬೇಡಿಕೆ ಬಂದಿದೆ. ಹಿಂದೆಂದಿಗಿಂತ ಹೆಚ್ಚಿನ ಆಭರಣಗಳ ಕೊಳ್ಳುವಿಕೆ ಕಂಡು ಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಆಭರಣ ಮಳಿಗೆಗಳು ತುಂಬಿ ತುಳುಕುವುದನ್ನು ಗಮನಿಸಬಹುದು. ಇದನ್ನು ಸಾಮಾನ್ಯವಾಗಿ ಶುಕ್ಲ ಪಕ್ಷದ ವೈಶಾಖದ ಚಂದ್ರ ಮಾಸದ 3ನೇ ದಿನದಂದು ಆಚರಿಸಲಾಗುತ್ತದೆ. ಈ ದಿನದಂದು ಭಗವತಿ ಅನ್ನಪೂರ್ಣ ಜನಿಸಿದಳು ಎಂದೂ ಭಾವಿಸಲಾಗಿದೆ.

ಸಂಸ್ಕೃತದಲ್ಲಿ ಅಕ್ಷಯ ಎಂಬ ಪದಕ್ಕೆ “ಸಮೃದ್ಧಿ, ಭರವಸೆ, ಸಂತೋಷ, ಯಶಸ್ಸು” ಎಂಬ ಅರ್ಥವಿದೆ. ಅಮದರೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂದರ್ಥ. ಆದರೆ, ತೃತೀಯ ಎಂದರೆ “ಚಂದ್ರನ ಮೂರನೇ ಹಂತ”. ಹಿಂದೂ ಕ್ಯಾಲೆಂಡರ್​ನಲ್ಲಿ ವೈಶಾಖ ವಸಂತ ತಿಂಗಳ ಮೂರನೇ ಚಂದ್ರನ ದಿನದಂದು ಇದನ್ನು ಹೆಸರಿಸಲಾಗಿದೆ.

ಅಕ್ಷಯ ತೃತೀಯವು ಪ್ರಪಂಚದಾದ್ಯಂತದ ಹಿಂದೂಗಳಿಗೆ ಸಾಕಷ್ಟು ಮಹತ್ವದ್ದಾಗಿದೆ ಮತ್ತು ಎಲ್ಲಾ ಪೌರಾಣಿಕ ಕಥೆಗಳು ಈ ದಿನವು ಹಣಕಾಸಿನ ಲಾಭಗಳನ್ನು ಮತ್ತು ಜನರಿಗೆ ಉತ್ತಮ ಆರೋಗ್ಯವನ್ನು ತಂದು ಕೊಡುತ್ತದೆ ಎಂಬ ಕಲ್ಪನೆಯ ಸುತ್ತ ಸುತ್ತುತ್ತದೆ. ಜ್ಯೋತಿಷ್ಯದ ದೃಷ್ಟಿಕೋನದಿಂದ, ಸೂರ್ಯ ಮತ್ತು ಚಂದ್ರ ಇಬ್ಬರೂ ಈ ದಿನದಂದು ಪ್ರಕಾಶಮಾನವಾಗಿ ಹೊಳೆಯುತ್ತಿರುವುದನ್ನು ಗಮನಿಸಬಹುದು.

ತೆಲುಗು ಮಾತನಾಡುವ ರಾಜ್ಯಗಳಾದ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ, ಹಬ್ಬವು ಸಮೃದ್ಧಿಗೆ ಸಂಬಂಧಿಸಿದೆ. ಮತ್ತು ಮಹಿಳೆಯರು ಚಿನ್ನಾಭರಣಗಳನ್ನು ಖರೀದಿಸುತ್ತಾರೆ. ಸಿಂಹಾಚಲಂ ದೇವಸ್ಥಾನವು ಈ ದಿನದಂದು ವಿಶೇಷ ಹಬ್ಬದ ಆಚರಣೆಗಳನ್ನು ಆಚರಿಸುತ್ತದೆ. ದೇವಾಲಯದ ಮುಖ್ಯ ದೇವತೆಯನ್ನು ವರ್ಷದ ಉಳಿದ ದಿನಗಳಲ್ಲಿ ಶ್ರೀಗಂಧದ ಲೇಪನದಲ್ಲಿ ಮುಚ್ಚಲಾಗುತ್ತದೆ. ಈ ದಿನದಂದು ಮಾತ್ರ ದೇವಿಗೆ ಶ್ರೀಗಂಧದ ಪದರಗಳನ್ನು ಅನ್ವಯಿಸಲಾಗುತ್ತದೆ. ನಿಜವಾದ ರೂಪದ ಪ್ರದರ್ಶನ ಅಥವಾ ನಿಜಾ ರೂಪ ದರ್ಶನಂ ಈ ದಿನ ನಡೆಯುತ್ತದೆ.

ವಿಶೇಷ ಕೊಡುಗೆಗಳು : ರಾಜ್ಯದಲ್ಲಿ ಅದರಲ್ಲೂ ರಾಜಧಾನಿ ಬೆಂಗಳೂರಿನಲ್ಲಿ ದೇಶದ ವಿವಿಧ ಮೂಲೆಗಳ ಆಭರಣ ತಯಾರಕರ, ಮಾರಾಟಗಾರರ ಜಾಲ ವಿಸ್ತರಣೆಗೊಂಡಿದ್ದು, ಸಾಕಷ್ಟು ಮಳಿಗೆಗಳು ವಿಶೇಷ ಕೊಡುಗೆಗಳನ್ನು ಗ್ರಾಹಕರಿಗೆ ಘೋಷಿಸಿವೆ. ತಮ್ಮದೇ ಆಕರ್ಷಕ ಕೊಡುಗೆ ಮೂಲಕ ವ್ಯಾಪಾರ ವೃದ್ಧಿಸಿಕೊಳ್ಳುವ, ಗ್ರಾಹರನ್ನು ತಮ್ಮತ್ತ ಸೆಳೆಯುವ ಹಾಗೂ ತಮ್ಮ ಮೂಲಕ ಗ್ರಾಹಕರು ಅಕ್ಷಯ ತೃತೀಯವನ್ನು ಆಚರಿಸಿಕೊಳ್ಳಲಿ ಎನ್ನುವ ಹಂಬಲದೊಂದಿಗೆ ಹಲವರು ಕಾರ್ಯನಿರ್ವಹಿಸುತ್ತಿದ್ದಾರೆ.

ಉದಾಹರಣೆಗೆ, ಟಾಟಾ ಸಮೂಹ ಸಂಸ್ಥೆಗಳ ಆಭರಣ ವ್ಯಾಪಾರ ಮಳಿಗೆ ತನಿಷ್ಕ್ ಗ್ರಾಹಕರಿಗೆ ಚಿನ್ನಾಭರಣದ ಪ್ರತಿ ಗ್ರಾಂ ಚಿನ್ನದ ಮೇಲೆ 200 ರೂ. ರಿಯಾಯಿತಿ ಘೋಷಿಸಿದೆ. ಮಲಬಾರ್ ಗೋಲ್ಡ್ ಸಂಸ್ಥೆ ಚಿನ್ನ ಕೊಂಡವರಿಗೆ ಬೆಳ್ಳಿ ನಾಣ್ಯ ಉಚಿತವಾಗಿ ನೀಡುತ್ತಿದೆ. ಜಾಯ್ ಅಲುಕಾಸ್ ಸಂಸ್ಥೆ 10 ಸಾವಿರ ರೂ. ಹಾಗೂ ಹೆಚ್ಚಿನ ಮೌಲ್ಯದ ಬೆಳ್ಳಿ ಆಭರಣ ಕೊಂಡರೆ 500 ರೂ. ಮೌಲ್ಯದ ಗಿಫ್ಟ್ ವೋಚರ್ ನೀಡುತ್ತಿದೆ. ಕಲ್ಯಾಣ್ ಜ್ಯುವೆಲ್ಲರ್ಸ್​ನವರು ಮೇಕಿಂಗ್ ಚಾರ್ಜ್ ಮೇಲೆ ಶೇ.25 ರಷ್ಟು ವಿನಾಯಿತಿ ಘೋಷಿಸಿದ್ದಾರೆ.

ಸಿನ್ಕೊ ಸಂಸ್ಥೆ ಮೇಕಿಂಗ್ ಚಾರ್ಜ್ ಮೇಲೆ ಶೇ.50 ರಷ್ಟು ವಿನಾಯಿತಿ ಘೋಷಿಸಿದೆ. ಸಿ.ಕೃಷ್ಣಯ್ಯ ಶೆಟ್ಟಿ ಜ್ಯುವೆಲ್ಲರ್ಸ್ ಬೆಳ್ಳಿ ಮೇಲೆ ವಿಶೇಷ ಕೊಡುಗೆ ಘೋಷಿಸಿದೆ. ಓರಾ ಸಂಸ್ಥೆಯು 9999 ರೂ.ಗೆ ಡೈಮಂಡ್ ನೆಕ್ಲೆಸ್ ನೀಡುವುದಾಗಿ ಘೋಷಿಸಿದೆ. ಉಳಿದ ಹಣವನ್ನು ಶೂನ್ಯ ಬಡ್ಡಿ ದರದಲ್ಲಿ ಮಾಸಿಕ ಕಂತುಗಳ ಮೂಲಕ ಪಾವತಿಸಬಹುದು ಎಂದಿದೆ. ಭೀಮಾ ಜ್ಯುವೆಲ್ಲರ್ಸ್, ನವರತನ್ ಜ್ಯುವೆಲ್ಲರ್ಸ್, ಲಲಿತಾ ಜ್ಯುವೆಲ್ಲರ್ಸ್, ಸಾಯಿ ಗೋಲ್ಡ್ ಪ್ಯಾಲೇಸ್, ಲಕ್ಷ್ಮಿ ಗೋಲ್ಡ್ ಪ್ಯಾಲೇಸ್ ಸೇರಿದಂತೆ ಹಲವು ಆಭರಣ ಮಳಿಗೆಗಳಲ್ಲಿ ಇಂದು ವಿಶೇಷ ಕೊಡುಗೆ ಘೋಷಿತವಾಗಿವೆ.

ಚಿನ್ನ ಕೊಂಡರೆ ಅಕ್ಷಯ: ಬೆಂಗಳೂರಿನ ಬಸವನಗುಡಿ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕ ಟಿ.ಎ. ಶರವಣ ಪ್ರಕಾರ, ನಮ್ಮ ಮಳಿಗೆಯಲ್ಲಿ ಮೊದಲು ಬಂದ ಐವತ್ತು ಮಂದಿ ಗ್ರಾಹಕರಿಗೆ ಪುನೀತ್ ರಾಜ್​ಕುಮಾರ್ ಭಾವಚಿತ್ರವುಳ್ಳ ಬೆಳ್ಳಿಯ ಕಾಯಿನ್​ಳನ್ನು ನೀಡಲಾಗುತ್ತಿದೆ. ಈ ಕಾಯಿನ್​ಗಳು ತಲಾ 5 ಗ್ರಾಂ ತೂಕ ಹೊಂದಿವೆ. ದುಬೈ ದರದಲ್ಲಿ ಮಾರಾಟ ಮಾಡುವುದರ ಜತೆಗೆ ಪ್ರತಿ ಗ್ರಾಂಗೆ 125 ರೂ. ರಿಯಾಯಿತಿ ನೀಡಲಾಗುತ್ತಿದೆ. ಖರೀದಿದಾರರಿಗೆ 20 ಲಕ್ಷ ರೂ.ವರೆಗೆ ಬಹುಮಾನ ಗೆಲ್ಲಬಹುದಾದ ಅವಕಾಶವಿದ್ದು, ಗಿಫ್ಟ್ ಕೂಪನ್​ಗಳನ್ನು ನೀಡಲಾಗುತ್ತಿದೆ ಎಂದಿದ್ದಾರೆ.

ಕಳೆದ ಎರಡು ವರ್ಷ ಕೋವಿಡ್ ಹಿನ್ನೆಲೆ ಅಷ್ಟೊಂದು ಆಭರಣ ಕರೀದಿ ಆಗಿರಲಿಲ್ಲ. ಜನರ ಕೈಲಿ ಹಣ ಇರಲಿಲ್ಲ. ಆದರೆ ಈ ಸಾರಿ ಮುಂಗಡ ಬುಕ್ಕಿಂಗ್ ಶೇ.20ರಷ್ಟು ಹೆಚ್ಚಾಗಿದೆ. ಬಂಗಾರದ ಜತೆಗೆ ಬೆಳ್ಳಿ ಆಭರಣಗಳಿಗೂ ಈ ಬಾರಿ ಹೆಚ್ಚು ಬೇಡಿಕೆ ಇದೆ. ರಾಜ್ಯದಲ್ಲಿ ಈ ಬಾರಿ ಸುಮಾರು ಒಂದು ಸಾವಿರ ಕೋಟಿ ರೂ. ವಹಿವಾಟು ನಡೆಯುವ ಅಂದಾಜು ಇದೆ ಎಂದು ಜಯನಗರದ ಆಭರಣ ಮಳಿಗೆ ವ್ಯಾಪಾರಿ ರತನ್ ಶುಕ್ಲಾ ತಿಳಿಸಿದ್ದಾರೆ.

ಇದನ್ನೂ ಓದಿ: ಅಕ್ಷಯ ತೃತೀಯ ದಿನದಂದು ರಾಜ್ಯದಲ್ಲಿ ಚಿನ್ನ-ಬೆಳ್ಳಿ ದರ ಹೀಗಿದೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.