ಕೊರೊನಾ ಭೀತಿ ನಡುವೆಯೂ ಈ ಬಾರಿ 'ಅಕ್ಕ' ಸಮ್ಮೇಳನ (ಅಮೇರಿಕ ಕನ್ನಡ ಕೂಟಗಳ ಆಗರ) ಬಹಳ ವಿಶೇಷವಾಗಿ ನಡೆಯಲಿದೆ. ಅದೇ 'ವಾಸ್ತವ ಕನ್ನಡ ಸಮ್ಮೇಳನ'. ಈ ವಾಸ್ತವ ವಿಶ್ವ ಕನ್ನಡ ಸಮ್ಮೇಳನ ವಿಶ್ವಾದ್ಯಂತ ಕನ್ನಡಿಗರ ಮನೆ ಮನೆಗೆ ತಲುಪಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.
![AKKA conference](https://etvbharatimages.akamaized.net/etvbharat/prod-images/akka-21598698716140-60_2908email_1598698727_936.jpg)
![AKKA conference](https://etvbharatimages.akamaized.net/etvbharat/prod-images/akka-11598698716139-75_2908email_1598698727_746.jpg)
ಎರಡು ವರ್ಷಗಳಿಗೊಮ್ಮೆ ನಡೆಯುವ ವಿಶ್ವ ಕನ್ನಡ ಸಮ್ಮೇಳನಕ್ಕೆ ಈಗ 20 ವರ್ಷಗಳು ತುಂಬಿದೆ. ಈಗಾಗಲೇ ನಡೆದಿರುವ 10 ಸಮ್ಮೇಳನಗಳಲ್ಲಿ ಸುಮಾರು 50 ಸಾವಿರ ವ್ಯಕ್ತಿಗಳು ಭಾಗವಹಿಸಿದ್ದಾರೆ. ಈಗ 11ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನ ಸೆಪ್ಟೆಂಬರ್ 4, 5, 6 ರಂದು ನಡೆಯುತ್ತಿದೆ. ಈ ಬಾರಿಯ ವಾಸ್ತವ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಮತ್ತಷ್ಟು ಮಾಹಿತಿಗಳು ಸದ್ಯದಲ್ಲೇ ದೊರೆಯಲಿದೆ. ಈ ವಿಚಾರವಾಗಿ 'ಅಕ್ಕ' ಅಧ್ಯಕ್ಷ ತುಮಕೂರು ದಯಾನಂದ್ ಹಾಗೂ ಅಕ್ಕ ಚೇರ್ಮನ್ ಅಮರನಾಥ್ ಗೌಡ ಅವರು ಜಂಟಿಯಾಗಿ ಪತ್ರಿಕಾ ಪ್ರಕಟಣೆ ಹೊರಡಿಸಲಿದ್ದಾರೆ.
![AKKA conference](https://etvbharatimages.akamaized.net/etvbharat/prod-images/tumakuru-dayanand1598698716139-86_2908email_1598698727_1068.jpg)
![AKKA conference](https://etvbharatimages.akamaized.net/etvbharat/prod-images/dr-amaranath-gowda1598698716138-70_2908email_1598698727_641.jpg)