ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಕೀಲರಿದ್ದು, ಅವರ ಏಳಿಗೆಗಾಗಿ 100 ಕೋಟಿ ರುಪಾಯಿ ಹಣ ಮೀಸಲಿಡುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಒತ್ತಾಯಿಸಿದೆ.
ಸರ್ಕಾರ ಮಾರ್ಚ್ 5ರಂದು ಬಜೆಟ್ ಮಂಡಿಸಲಿದೆ. ಈ ಹಿನ್ನೆಲೆಯಲ್ಲಿ ಪರಿಷತ್ನ ಅಧ್ಯಕ್ಷ ಜೆ.ಎಮ್.ಅನಿಲ್ ಕುಮಾರ್, ಉಪಾಧ್ಯಕ್ಷ ಶಿವಕುಮಾರ್, ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ನೇತೃತ್ವದ ವಕೀಲರ ನಿಯೋಗ ಸಿಎಂ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಪರಿಗಣಿಸುವಂತೆ ಮನವಿ ಮಾಡಿದೆ.
ವಕೀಲ ಸಮುದಾಯದ ಬೇಡಿಕೆಗಳು:
- ಮುಖ್ಯಮಂತ್ರಿಗೆ ಸಲ್ಲಿಸಿರುವ ಪತ್ರದಲ್ಲಿ ವಕೀಲರಿಗೆ ಕಲ್ಯಾಣ ನಿಧಿಯಾಗಿ 100 ಕೋಟಿ ರೂ ಮೀಸಲಿಡಬೇಕು.
- ವಕೀಲರ ಮೇಲಿನ ಹಲ್ಲೆ, ದೌರ್ಜನ್ಯಗಳನ್ನು ತಡೆಯಲು ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರಬೇಕು.
- ರಾಜ್ಯ ವಕೀಲರ ಪರಿಷತ್ತು ಕಾರ್ಯ ನಿರ್ವಹಿಸಲು ಸ್ವಂತ ಕಟ್ಟಡ ಒದಗಿಸಬೇಕು.
- ವಕೀಲರ ಸಮ್ಮೇಳನ ನಡೆಸಲು 75 ಲಕ್ಷ ರೂ ಅನುದಾನ ನೀಡಬೇಕು.
- ಯುವ ವಕೀಲರಿಗೆ ಮೌಲ್ಯಾಧಾರಿತ ವೃತ್ತಿ ತರಬೇತಿ ನೀಡಲು ಅಗತ್ಯವಿರುವ ಅಕಾಡೆಮಿಗಳನ್ನು ಸ್ಥಾಪಿಸಬೇಕು.
- ಹಿಂದುಳಿದ ವರ್ಗಗಳ ಯುವ ವಕೀಲರಿಗೆ ನೀಡುತ್ತಿರುವ ಸ್ಟೇಫಂಡ್ ಮೊತ್ತ ಹೆಚ್ಚಿಸಬೇಕು.
- ಜಿಲ್ಲಾ ಮತ್ತು ತಾಲೂಕು ಕೇಂದ್ರ ವಕೀಲರ ಸಂಘಗಳ ಕಚೇರಿಗಳಲ್ಲಿ ಇ-ಲೈಬ್ರರಿ ಸ್ಥಾಪಿಸಬೇಕು.ಜೆ.ಎಮ್.ಅನಿಲ್ಕುಮಾರ್