ETV Bharat / city

ಕಿರಿಕ್​ ಕಾಪಿ ರೈಟ್​​ ಪ್ರಕರಣ: ಕೋರ್ಟ್​ಗೆ ಹಾಜರಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

'ಶಾಂತಿ - ಕ್ರಾಂತಿ' ಸಿನಿಮಾದ ಹಾಡು ಬಳಸಿಕೊಂಡಿದ್ದಾರೆ ಎಂದು ಲಹರಿ ಸಂಸ್ಥೆ ಆರೋಪ ಮಾಡಿತ್ತು. ಈ ಕುರಿತಂತೆ ಕಳೆದ ಕೆಲ ವರ್ಷಗಳಿಂದ ಕೋರ್ಟ್​ನಲ್ಲಿ ಕೇಸ್​ ವಿಚಾರಣೆ ನಡೆಯುತ್ತಿದೆ. ವಿಚಾರಣೆಗೆ ಹಾಜಾರಾಗದ ಹಿನ್ನೆಲೆ ರಕ್ಷಿತ್ ಶೆಟ್ಟಿ ಹಾಗೂ ತಂಡದವರಿಗೆ ವಾರಂಟ್​ ನೀಡಲಾಗಿತ್ತು. ಈ ಹಿನ್ನೆಲೆ ಇಂದು 9ನೇ ಎಸಿಎಮ್ಎಮ್ ಕೋರ್ಟ್ ಮುಂದೆ ರಕ್ಷಿತ್​ ಹಾಜರಾಗಿದ್ದರು.

actor-rakshit-shetty-attend-to-the-court-today
ರಕ್ಷಿತ್ ಶೆಟ್ಟಿ
author img

By

Published : Apr 12, 2021, 8:03 PM IST

Updated : Apr 12, 2021, 8:09 PM IST

ಬೆಂಗಳೂರು: 'ಕಿರಿಕ್ ಪಾರ್ಟಿ' ಚಿತ್ರದ ಹಾಡಿನ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿರುವ ಲಹರಿ ಸಂಸ್ಥೆಯ ಪ್ರಕರಣಕ್ಕೆ ಸಂಬಂಧಿಸಿ ಇಂದು ನಟ ರಕ್ಷಿತ್​ ಶೆಟ್ಟಿ ಕೋರ್ಟ್​​ಗೆ​ ಹಾಜರಾಗಿದ್ದರು. ರಕ್ಷಿತ್​ ಪರ ವಕೀಲರು ಮೆಮೋ ಸಲ್ಲಿಸಿ ಬಂಧನ ವಾರಂಟ್ ಹಿಂಪಡೆಯುವಂತೆ ಕೋರ್ಟ್​​ಗೆ​​​ ಮನವಿ ಸಲ್ಲಿಸಿದ್ದರು.

'ಶಾಂತಿ - ಕ್ರಾಂತಿ' ಸಿನಿಮಾದ ಹಾಡು ಬಳಸಿಕೊಂಡಿದ್ದಾರೆ ಎಂದು ಲಹರಿ ಸಂಸ್ಥೆ ಆರೋಪ ಮಾಡಿತ್ತು. ಈ ಕುರಿತಂತೆ ಕಳೆದ ಕೆಲ ವರ್ಷಗಳಿಂದ ಕೋರ್ಟ್​ನಲ್ಲಿ ಕೇಸ್​ ವಿಚಾರಣೆ ನಡೆಯುತ್ತಿದೆ. ವಿಚಾರಣೆಗೆ ಹಾಜರಾಗದ ಹಿನ್ನೆಲೆ ರಕ್ಷಿತ್ ಶೆಟ್ಟಿ ಹಾಗೂ ತಂಡದವರಿಗೆ ವಾರಂಟ್ ನೀಡಲಾಗಿತ್ತು. ಈ ಹಿನ್ನೆಲೆ ಇಂದು 9ನೇ ಎಸಿಎಮ್ಎಮ್ ಕೋರ್ಟ್ ಮುಂದೆ ರಕ್ಷಿತ್​ ಹಾಜರಾಗಿದ್ದರು.

ಜಾಮೀನು ನೀಡಿ ನಗದಿನ ರೂಪದಲ್ಲಿ ಶ್ಯೂರಿಟಿ ಕೊಡುವಂತೆ ನ್ಯಾಯಮೂರ್ತಿಗಳು ಸೂಚಿಸಿದ್ದು, ನ್ಯಾಯಾಲಯದ ಆದೇಶದಂತೆ ರಕ್ಷಿತ್ ಶೆಟ್ಟಿ ಪರ ವಕೀಲರು ಹಣದ ವ್ಯವಸ್ಥೆ ಮಾಡಿ ಮುಂದಿನ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.

ಕೋರ್ಟ್​ಗೆ ಹಾಜರಾದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಕೋರ್ಟ್ ಕೇಸ್ ಹಿನ್ನೆಲೆ

ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಅನುಮತಿ ಇಲ್ಲದೆ ಹಾಡು ಬಳಸಿದ ವಿಚಾರಕ್ಕೆ ಸಂಬಂಧಿಸಿದಂತೆ ಲಹರಿ ಆಡಿಯೋ ಸಂಸ್ಥೆ 'ಕಾಪಿ ರೈಟ್' ಕಾಯ್ದೆಯಡಿ ನಟ ರಕ್ಷಿತ್ ಶೆಟ್ಟಿ, ಪರಮ್ವಾ ಸ್ಟುಡಿಯೋ ಪ್ರೈವೇಟ್ ಲಿಮಿಟೆಡ್ ಹಾಗೂ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ಬೆಂಗಳೂರಿನ 9ನೇ ಎಸಿಎಂಎಂ ಕೋರ್ಟ್ ಆರೋಪಿಗಳಿಗೆ ಸಮನ್ಸ್ ಜಾರಿ ಗೊಳಿಸಿತ್ತು.

ಆದರೆ, ಆರೋಪಿಗಳು ನ್ಯಾಯಾಲಯಕ್ಕೆ ನಿರಂತರ ಗೈರು ಹಾಜರಾದ ಹಿನ್ನೆಲೆ ಕೋರ್ಟ್ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿತ್ತು. ಇದೀಗ 8ನೇ ಬಾರಿ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದು, ಜಯನಗರ ಠಾಣೆ ಪೊಲೀಸರು ನಟ, ಸಂಗೀತ ನಿರ್ದೇಶಕ ಹಾಗೂ ಪರಮ್ವಾ ಸ್ಟುಡಿಯೋ ಮಾಲೀಕರನ್ನು ಬಂಧಿಸಿ ಏಪ್ರಿಲ್ 27ರಂದು ಕೋರ್ಟ್ ಎದುರು ಹಾಜರುಪಡಿಸಬೇಕೆಂದು ತಾಕೀತು ಮಾಡಿತ್ತು.

ಏನಿದರ ಹಿನ್ನೆಲೆ: 2016 ಡಿಸೆಂಬರ್ 30ರಂದು ಬಿಡುಗಡೆಯಾಗಿದ್ದ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಶಾಂತಿ ಕ್ರಾಂತಿ ಚಿತ್ರದ 'ಹೇ.. ಹೂ ಆರ್ ಯೂ' ಹಾಡನ್ನು ಲಹರಿ ಸಂಸ್ಥೆಯಿಂದ ಪೂರ್ವಾನುಮತಿ ಪಡೆಯದೇ ಬಳಸಲಾಗಿದೆ ಎಂದು ಆರೋಪಿಸಿ, ಚಿತ್ರ ನಟ ರಕ್ಷಿತ್ ಶೆಟ್ಟಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಪರಮ್ವಾ ಸ್ಟುಡಿಯೋ ವಿರುದ್ಧ ಲಹರಿ ಸಂಸ್ಥೆ ದೂರು ದಾಖಲಿಸಿತ್ತು.

ಅದರಂತೆ, ಕಾಪಿ ರೈಟ್ಸ್ ಕಾಯ್ದೆಯ ಸೆಕ್ಷನ್ 63 (ಎ) ಹಾಗೂ 63 (ಬಿ) ಅಡಿ ಪ್ರಕರಣ ದಾಖಲಿಸಿದ್ದು, ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ನಟ, ಸಂಗೀತ ನಿರ್ದೇಶಕರ ವಿರುದ್ಧ ಬಂಧನ ವಾರಂಟ್ ಜಾರಿ ಮಾಡಲಾಗಿತ್ತು.

Last Updated : Apr 12, 2021, 8:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.