ETV Bharat / city

ರಾಯರ ಪವಾಡ... ರಾಜ್ಯಸಭೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ನಟ ಜಗ್ಗೇಶ್ ಟ್ವೀಟ್

author img

By

Published : May 29, 2022, 10:44 PM IST

ರಾಜ್ಯಸಭೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ನಟ ಜಗ್ಗೇಶ್ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ನಟ ಜಗ್ಗೇಶ್ ಟ್ವೀಟ್
ನಟ ಜಗ್ಗೇಶ್ ಟ್ವೀಟ್

ಬೆಂಗಳೂರು: ರಾಜ್ಯಸಭೆ ಟಿಕೆಟ್ ಸಿಕ್ಕಿರುವುದಕ್ಕೆ ನಟ ಜಗ್ಗೇಶ್ ಸಂತಸ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ನಾಯಕರು, ಸಂಘ ಪರಿವಾರದ ಆಶೀರ್ವಾದ ಮತ್ತು ರಾಯರ ಪವಾಡ ಎಂದು ಸಾಮಾಜಿಕ ಜಾಲತಾಣದಲ್ಲಿ ಜಗ್ಗೇಶ್ ಬರೆದುಕೊಂಡಿದ್ದಾರೆ.

ಆತ್ಮೀಯ ಕನ್ನಡದ ಬಂಧುಗಳೆ, 42 ವರ್ಷ ತಪಸ್ಸಿನಂತೆ ಕಲಾರಂಗದಲ್ಲಿ ಸೇವೆ ಮಾಡಿ ಕಾಯವಾಚಮನ ಸತ್ಯಮಾರ್ಗದಲ್ಲಿ ಬದುಕಿದ್ದೇನೆ. ನನ್ನ ನೆಚ್ಚಿನ ಭಾಜಪ ರಾಜ್ಯದ ಮುಖ್ಯ ಮಂತ್ರಿಗಳು, ಸಚಿವರು, ಶಾಸಕಮಿತ್ರರು, ರಾಜ್ಯ ರಾಷ್ಟ್ರದ ಸಂಘದ ಹಿರಿಯರ ಆಶೀರ್ವಾದದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವೆ. ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

  • ಆತ್ಮೀಯ ಕನ್ನಡದ ಬಂಧುಗಳೆ
    42ವರ್ಷ ತಪಸ್ಸಿನಂತೆ ಕಲಾರಂಗದಲ್ಲಿ ಸೇವೆಮಾಡಿ
    ಕಾಯವಾಚಮನ ಸತ್ಯಮಾರ್ಗದಲ್ಲಿ
    ಬದುಕಿದ್ದೇನೆ.
    ನನ್ನ ನೆಚ್ಚಿನ ಭಾಜಪ ರಾಜ್ಯದ ಮುಖ್ಯ ಮಂತ್ತಿಗಳು,ಮಂತ್ರಿಗಳು,ಶಾಸಕಮಿತ್ರರು,ರಾಜ್ಯ ರಾಷ್ಟ್ರದ ಸಂಘದ ಹಿರಿಯರ ಆಶೀರ್ವಾದದಿಂದ ರಾಜ್ಯಸಭೆಗೆ ಆಯ್ಕೆ ಆಗಿರುವೆ ತಮಗೆ ಶಿರಬಾಗಿ ವಂದಿಸುವೆ..
    ರಾಯರ ಕೃಪೆ ಅವರ ಪವಾಡಕ್ಕೆ ಧನ್ಯ pic.twitter.com/443Lj0qRah

    — ನವರಸನಾಯಕ ಜಗ್ಗೇಶ್ (@Jaggesh2) May 29, 2022 " class="align-text-top noRightClick twitterSection" data=" ">

ಆತ್ಮೀಯ ಕನ್ನಡದ ಬಂಧುಗಳೆ

— ನವರಸನಾಯಕ ಜಗ್ಗೇಶ್ (@Jaggesh2) May 29, 2022

ನಟ ಜಗ್ಗೇಶ್ ಅವರು ಮಂತ್ರಾಲಯ ರಾಯರ ಪರಮ ಭಕ್ತರು. ಅಂತೆಯೇ ಮಂತ್ರಾಲಯಕ್ಕೆ ಆಗಾಗ ತೆರಳಿ ದರ್ಶನ ಪಡೆದು ಬರುತ್ತಾರೆ. ರಾಜ್ಯದಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಜೂನ್ 10 ರಂದು ನಡೆಯಲಿರುವ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಹೈಕಮಾಂಡ್ ಇಂದು ಪ್ರಕಟಿಸಿದ್ದು, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ ಜಗ್ಗೇಶ್​ಗೆ ಟಿಕೆಟ್ ಘೋಷಿಸಲಾಗಿದೆ.

ಎರಡನೇ ಸ್ಥಾನಕ್ಕೆ ಒಂದು ರೀತಿಯಲ್ಲಿ ಅಚ್ಚರಿ ಆಯ್ಕೆ ಎನ್ನುವಂತೆ ನಟ ಜಗ್ಗೇಶ್ ಹೆಸರು ಪ್ರಕಟಿಸಲಾಗಿದೆ. ಆಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಮೊದಲ ಬಾರಿ ಮುಖ್ಯಮಂತ್ರಿ ಆದ ವೇಳೆ ಬಿಜೆಪಿಗೆ ಬಂದಿದ್ದ ಜಗ್ಗೇಶ್ ನಂತರ ರಾಜಕೀಯ ಮುನ್ನೆಲೆಗೆ ಬರಲು ಸಾಕಷ್ಟು ಶ್ರಮಿಸಿದ್ದರು. ಪರಿಷತ್ ಸದಸ್ಯರಾಗಿ ನಂತರ ಯಶವಂತಪುರ ಕ್ಷೇತ್ರದಿಂದ ಕೊನೆ ಕ್ಷಣದಲ್ಲಿ ಟಿಕೆಟ್ ಸಿಕ್ಕು ಕಣಕ್ಕಿಳಿದು ಪರಾಜಿತಗೊಂಡಿದ್ದರು. ಇದೀಗ ರಾಜ್ಯಸಭೆಗೆ ಟಿಕೆಟ್ ನೀಡುವ ಮೂಲಕ ಜಗ್ಗೇಶ್ ಮತ್ತೆ ರಾಜಕೀಯ ಮುನ್ನೆಲೆಗೆ ಬರಲು ಬಿಜೆಪಿ ಹೈಕಮಾಂಡ್ ಅವಕಾಶ ಕಲ್ಪಿಸಿದೆ.

(ಇದನ್ನೂ ಓದಿ: ಬಿಜೆಪಿಯಿಂದ ರಾಜ್ಯಸಭೆ ಟಿಕೆಟ್ ಪಟ್ಟಿ ಬಿಡುಗಡೆ: ನಿರ್ಮಲಾ ಸೀತಾರಾಮನ್​, ನಟ ಜಗ್ಗೇಶ್​ಗೆ ಟಿಕೆಟ್)

ETV Bharat Logo

Copyright © 2024 Ushodaya Enterprises Pvt. Ltd., All Rights Reserved.