ಬೆಂಗಳೂರು : ಕಳೆದ ಎರಡು ತಿಂಗಳ ಹಿಂದೆ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದೆವು. ಪುನೀತ್ ಸರ್ ಸಿಕ್ಕಾಗಲೆಲ್ಲಾ ಸೈಕ್ಲಿಂಗ್ ಹೋಗೋಣ ಅಂತಾ ಹೇಳುತ್ತಿದ್ದರು. ನಾನು ಸಹ ಶೂಟಿಂಗ್ ಮುಗಿಸಿಕೊಂಡು ಹೋಗೋಣ ಎಂದು ಹೇಳುತ್ತಿದ್ದೆ. ಮೊನ್ನೆ ಸಿಗಬೇಕಾಗಿತ್ತು. ಆದ್ರೀಗ ಈ ಸುದ್ದಿ ಕೇಳಬೇಕಾಯಿತು ಎಂದು ನಟ ಗಣೇಶ್ ಹೇಳಿದ್ದಾರೆ.
ಕಂಠೀರವ ಕ್ರೀಡಾಂಗಣದ ಬಳಿ ಮಾತನಾಡಿದ ಅವರು, ಪುನೀತ್ ಸರ್ ಅವರ ಸಾವಿನ ಸುದ್ದಿ ಬಹಳ ನೋವಾಗುತ್ತಿದೆ. ಅವರ ಕುಟುಂಬದವರು, ಅಭಿಮಾನಿಗಳಿಗೆ ಪುನೀತ್ ರಾಜ್‌ಕುಮಾರ್ ಅವರ ಸಾವಿನ ನೋವು ಭರಿಸುವ ಶಕ್ತಿ ದೇವರು ನೀಡಲಿ. ಪವರ್ ಸ್ಟಾರ್ ಇಲ್ಲದಿರುವ ಚಿತ್ರರಂಗ, ಕರ್ನಾಟಕ, ಇಡೀ ದೇಶ ಪವರ್ ಲೆಸ್ ಆಗಿದೆ. ಅಪ್ಪು ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.
'ಪುನೀತ್ ಸಾವು ಸ್ವೀಕರಿಸೋಕೆ ಆಗ್ತಿಲ್ಲ': ನಟ ರವಿಶಂಕರ್ ಮಾತನಾಡಿ, ಪುನೀತ್ ಸಾವು ಸ್ವೀಕಾರ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ. ಭಗವಂತ ಇನ್ನೂ ಅರ್ಧ ಗಂಟೆ ಅವಕಾಶ ಕೊಡಬೇಕಿತ್ತು. ಅವರ ಪ್ರಾಣ ಉಳಿಸಿಕೊಳ್ಳಬಹುದಿತ್ತು. ಮಾತನಾಡುವುದಕ್ಕೆ ಭಾರವಾಗುತ್ತಿದೆ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಪುನೀತ್ ಅವರಿಂದ ಲಕ್ಷಾಂತರ ಜನರು ಸ್ಫೂರ್ತಿ ಪಡೆದಿದ್ದಾರೆ. ಸಿನಿಮಾದಲ್ಲಿ ನಾನು ನಟಿಸಿದ ಪಾತ್ರಗಳ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು ಎಂದು ಅಪ್ಪು ಅವರೊಂದಿಗೆ ಇದ್ದ ಒಟನಾಟವನ್ನು ವ್ಯಕ್ತಪಡಿಸಿದರು.
ಇದನ್ನೂ ಓದಿ: ನಾಳೆ ಬೆಳಗ್ಗೆ 10 ಗಂಟೆಗೆ ಪುನೀತ್ ಅಂತ್ಯ ಸಂಸ್ಕಾರ ಸಾಧ್ಯತೆ : ಸಾ ರಾ ಗೋವಿಂದ್