ETV Bharat / city

ಇದು ಬ್ರಾಹ್ಮಣ್ಯ ವಿರುದ್ಧದ ಹೋರಾಟವೇ ಹೊರತು, ಸಸ್ಯಹಾರಿ-ಮಾಂಸಹಾರಿಗಳ ಘರ್ಷಣೆಯಲ್ಲ: ನಟ ಚೇತನ್ - Actor chetan support hamsalekha

ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳಿಂದ ನಡೆಸಲಾದ ಜಾಗೃತಿ ಜಾಥಾ ಹಾಗೂ ಸಮಾವೇಶಕ್ಕೆ ನಟ ಚೇತನ್​ ಬೆಂಬಲ ವ್ಯಕ್ತಪಡಿಸಿದರು.

actor chetan attended the protest
ಪ್ರತಿಭಟನೆಯಲ್ಲಿ ನಟ ಚೇತನ್
author img

By

Published : Nov 26, 2021, 8:04 PM IST

ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಅವರ ಹೇಳಿಕೆಯನ್ನು ಬೆಂಬಲಿಸಿ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ವಿವಿಧ ದಲಿತ ಸಂಘಟನೆಗಳು ಹಾಗೂ ಕನ್ನಡ ಪರ ಸಂಘಟನೆಗಳಿಂದ ನಡೆಸಲಾದ ಜಾಗೃತಿ ಜಾಥಾ ಹಾಗೂ ಸಮಾವೇಶಕ್ಕೆ ನಟ ಚೇತನ್​ ಬೆಂಬಲ ವ್ಯಕ್ತಪಡಿಸಿದರು.

ಬಳಿಕ ಕಾರ್ಯಕ್ರಮಲ್ಲಿ ಮಾತನಾಡಿದ ಚೇತನ್​, ಇಂದು ನಡೆಯುತ್ತಿರುವ ಹೋರಾಟ ಬ್ರಾಹ್ಮಣ್ಯದ ವಿರುದ್ಧದ ಹೋರಾಟ. ಸಸ್ಯಹಾರಿ-ಮಾಂಸಹಾರಿಗಳ ನಡುವಿನ ಹೋರಾಟ ಅಲ್ಲ. ಸಂಗೀತ ನಿರ್ದೇಶಕ ಹಂಸಲೇಖ ಅವರ ಮಾತುಗಳು ನೊಂದ ದಲಿತರ ಪರವಾದ ಮಾತುಗಳು. ಅವರು ಕ್ಷಮೆ ಕೇಳುವ ಅಗತ್ಯವಿಲ್ಲ ಎಂದು ಹಂಸಲೇಖ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಇಂದು ಸಂವಿಧಾನ ಸಮರ್ಪಣಾ ದಿನವಾಗಿದೆ. ಪ್ರಜಾಪ್ರಭುತ್ವದ ಅಡಿಪಾಯವನ್ನು ನಾವು ಉಳಿಸಿಕೊಳ್ಳಬೇಕು. ಹಂಸಲೇಖ ಅವರಿಗೆ ಮಾತನಾಡುವ ಹಕ್ಕಿದೆ. ಹಂಸಲೇಖ ಅವರು ಪೊಲೀಸ್ ಠಾಣೆಗೆ ಬಂದಾಗ ಕೆಲವರು ಅವರನ್ನು ಜೈಲಿಗೆ ಹಾಕಿಸುವ ಪ್ರಯತ್ನ ಮಾಡಿದ್ದಾರೆ. ವಾಕ್ ಸ್ವಾತಂತ್ರ್ಯವನ್ನು ದಮನ ಮಾಡುವ ಹುನ್ನಾರವಿದು ಎಂದು ಹರಿಹಾಯ್ದರು.

ಚಿತ್ರರಂಗದ ವಿರುದ್ಧ ಚೇತನ್​ ಗುಡುಗು:

ಚಿತ್ರರಂಗದವರೆಲ್ಲರೂ ಒಂದೇ ಕುಟುಂಬ ಹೇಳುತ್ತಾರೆ. ಅದೇ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಚಿತ್ರರಂಗದ ಯಾವೊಬ್ಬರೂ ಕೂಡ ಧ್ವನಿ ಎತ್ತದೇ ಇರುವುದು ಎಷ್ಟು ಸರಿ ಎಂದು ಚೇತನ್ ಕನ್ನಡ​ ಚಿತ್ರರಂಗದ ವಿರುದ್ಧ ಕಿಡಿಕಾರಿದರು.

ಚಿತ್ರರಂಗದಲ್ಲಿ ಹಂಸಲೇಖ ಅವರು ಉನ್ನತ ಸಾಧನೆ ಮಾಡಿದ್ದಾರೆ. ಅವರ ಗರಡಿಯಲ್ಲಿ ಎಷ್ಟೋ ಜನರು ಉದಯಿಸಿದ್ದಾರೆ. ಅವರ ವಿರುದ್ಧ ನಡೆಯುತ್ತಿರುವ ಹೋರಾಟದ ಬಗ್ಗೆ ಚಿತ್ರರಂಗದ ಯಾರೊಬ್ಬರೂ ಮಾತನಾಡದೇ ಇರುವುದಕ್ಕೆ ಟೀಕಿಸಿದರು.

ಸಮಾವೇಶಕ್ಕೆ ಜ್ಞಾನಪ್ರಕಾಶ ಸ್ವಾಮೀಜಿ, ಬರಗೂರು ರಾಮಚಂದ್ರಪ್ಪ ಹಾಗೂ ವಿವಿಧ ಸಂಘಟನೆಗಳು ಸಾಥ್ ನೀಡಿದ್ದರು.

ಮನವಿ ಸ್ವೀಕರಿಸಿದ ಸಚಿವ ಅಂಗಾರ:

ಫ್ರೀಡಂ ಪಾರ್ಕ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಚಿವ ಎಸ್.ಅಂಗಾರ ಭೇಟಿ ನೀಡಿದರು. ಈ ವೇಳೆ ಪ್ರತಿಭಟನಾಕಾರರ ಹಕ್ಕೊತ್ತಾಯಗಳ ಮನವಿಯನ್ನು ಸ್ವೀಕರಿಸಿದರು.

ಸಂವಿಧಾನ ಸಂರಕ್ಷಣಾ ಐಕ್ಯತೆ ಸಮಿತಿಯಿಂದ ನಗರದ ಫ್ರೀಡಂ ಪಾರ್ಕ್​ನಲ್ಲಿ ಮಾಂಸ ತಯಾರಿಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಸ್ಥಳದಲ್ಲಿ ಕರ್ನಾಟಕ ವಿಶ್ವವಿದ್ಯಾಲಯಗಳ ವಿಚಾರವಾದಿ ಒಕ್ಕೂಟದಿಂದ ಮಾಂಸ ಬೇಯಿಸಲಾಯಿತು. ಬಾಡೇ ನಮ್ ಗಾಡು ಎಂದು ಹಾಡುತ್ತಾ ಮಾಂಸ ಸೇವನೆ ಮಾಡಲಾಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.