ETV Bharat / city

ಕದ್ದ ಸೈಕಲ್ ಫೇಸ್​ಬುಕ್​ನಲ್ಲಿ ಮಾರಾಟಕ್ಕಿಟ್ಟ ಆರೋಪಿ ಬಂಧ‌ನ - Accused Ramesh Arrested

ಇತ್ತೀಚೆಗೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಸೈಕಲ್ ಕದ್ದು ಫೇಸ್​ಬುಕ್​ನಲ್ಲಿ ಸೈಕಲ್ ಮಾರಾಟವಿರುವುದಾಗಿ ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ್ದ ಸೈಕಲ್‌ ಮಾಲೀಕ, ಈ ಸಂಬಂಧ ಹುಳಿಮಾವು ಪೊಲೀಸರಿಗೆ ದೂರು ನೀಡಿದ್ದರು..

Ramesh
ಬಂಧಿತ ಆರೋಪಿ ರಮೇಶ್
author img

By

Published : Mar 11, 2022, 12:33 PM IST

ಬೆಂಗಳೂರು : ಐಷಾರಾಮಿ ಬೈಕ್ ಹಾಗೂ ಸೈಕಲ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ರಮೇಶ್ ಎಂಬಾತ ಬಂಧಿತ ಆರೋಪಿ. ಈತ ಡೆಕತ್ಲಾನ್ ಸೇರಿದಂತೆ ವಿವಿಧ ಪ್ರತಿಷ್ಠಿತ ಸೈಕಲ್​ಗಳನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿದ್ದ. ಸಾರ್ವಜನಿಕ ಪ್ರದೇಶಗಳಲ್ಲಿ ಪಾರ್ಕ್ ಮಾಡಲಾಗಿದ್ದ ಬೈಕ್ ಹ್ಯಾಂಡಲ್ ಮುರಿದು ಕೈಚಳಕ ತೋರಿಸುತ್ತಿದ್ದ.

ಇತ್ತೀಚೆಗೆ ಹುಳಿಮಾವು ಠಾಣಾ ವ್ಯಾಪ್ತಿಯಲ್ಲಿ ದುಬಾರಿ ಬೆಲೆಯ ಸೈಕಲ್ ಕದ್ದು ಫೇಸ್​ಬುಕ್​ನಲ್ಲಿ ಸೈಕಲ್ ಮಾರಾಟವಿರುವುದಾಗಿ ಪೋಸ್ಟ್ ಹಾಕಿದ್ದ. ಇದನ್ನು ಗಮನಿಸಿದ್ದ ಸೈಕಲ್‌ ಮಾಲೀಕ, ಈ ಸಂಬಂಧ ಹುಳಿಮಾವು ಪೊಲೀಸರಿಗೆ ದೂರು ನೀಡಿದ್ದರು.

ಇದೇ ಕಂಪ್ಲೇಂಟ್‌ ಮೇರೆಗೆ ಆರೋಪಿಯನ್ನು ಬಂಧಿಸಿ 4.50 ಲಕ್ಷ ಮೌಲ್ಯದ ಬೈಸಿಕಲ್, 4.40 ಲಕ್ಷ ಮೌಲ್ಯದ ಬೈಕ್ ವಶಕ್ಕೆ ಪಡೆಯಲಾಗಿದೆ. ಕದ್ದ ಬೈಕ್​ಗಳನ್ನು ಆರ್‌ಸಿ ಬುಕ್ ತಡವಾಗಿ ಕೊಡುವುದಾಗಿ ಪರಿಚಯಸ್ಥರಿಗೆ ನಂಬಿಸಿ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.