ETV Bharat / city

ರೆಮ್ಡೆಸಿವಿರ್ ಅಕ್ರಮ ದಾಸ್ತಾನು ಆರೋಪ: ಲೆಕ್ಕಪರಿಶೋಧನೆ ನಡೆಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ

author img

By

Published : May 14, 2021, 10:21 PM IST

ರೆಮ್ಡೆಸಿವಿರ್ ಔಷಧಿಯನ್ನು ಶ್ರೀಮಂತರು ಖರೀಸಿದಿ ದಾಸ್ತಾನು ಮಾಡುತ್ತಿದ್ದಾರೆ ಎಂಬ ಆರೋಪ ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಲೆಕ್ಕಪರಿಶೋಧನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

accuse-of-storing-illegals-remdesivir-high-court-instruct-government-to-conduct-audit
ರೆಮ್‍ಡಿಸಿವಿರ್

ಬೆಂಗಳೂರು: ಕೋವಿಡ್ ಸೋಂಕಿತರಿಗೆ ಜೀವ ರಕ್ಷಕ ಎಂದೇ ಕರೆಯಲಾಗುತ್ತಿರುವ ರೆಮ್ಡೆಸಿವಿರ್​ ಔಷಧವನ್ನು ಶ್ರೀಮಂತರು ಖರೀಸಿದಿ ದಾಸ್ತಾನು ಮಾಡುತ್ತಿದ್ದಾರೆ ಎಂಬ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಈ ಸಂಬಂಧ ಲೆಕ್ಕಪರಿಶೋಧನೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.

ಕೋವಿಡ್ ನಿರ್ವಹಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಪಿಐಎಲ್​ಗಳ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ರಾಜ್ಯ ಸರ್ಕಾರಕ್ಕೆ ಈ ನಿರ್ದೇಶನ ನೀಡಿದೆ.

ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ. ನರಗುಂದ ಅವರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯಕ್ಕೆ ರೆಮ್ಡೆಸಿವಿರ್ ಪೂರೈಕೆ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಏಪ್ರಿಲ್ 21ರಿಂದ ಮೇ 6ರ ತನಕ ಕರ್ನಾಟಕಕ್ಕೆ 3 ಲಕ್ಷ ರೆಮ್ಡೆಸಿವಿರ್ ವಯಲ್ಸ್‍ಗಳನ್ನು ಪೂರೈಸಲಾಗಿತ್ತು. ಅದನ್ನು ಈಗ 5.75 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಆ ಪ್ರಕಾರ ರಾಜ್ಯ ಮೇ 10ರಿಂದ ಪ್ರತಿ ದಿನ 40 ಸಾವಿರ ವಯಲ್​ನಂತೆ ಬಳಸಿಕೊಳ್ಳಬಹುದಾಗಿದೆ ಎಂದು ಮಾಹಿತಿ ನೀಡಿದರು.

ಅಲ್ಲದೇ, ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಸಮರ್ಪಕವಾಗಿ ರೆಮ್ಡೆಸಿವಿರ್ ಪೂರೈಸುತ್ತಿದೆ. ಆದರೆ, ಅವಶ್ಯಕತೆ ಇಲ್ಲದಿದ್ದರೂ ರೆಮ್ಡೆಸಿವಿರ್ ಪಡೆದುಕೊಳ್ಳಲಾಗುತ್ತಿದೆ. ಶ್ರೀಮಂತರು ಖರೀದಿಸಿ ದಾಸ್ತಾನು ಇಟ್ಟುಕೊಳ್ಳುತ್ತಿದ್ದಾರೆ. ಆದ್ದರಿಂದ ರೆಮ್ಡೆಸಿವಿರ್ ಬಳಕೆಯ ಬಗ್ಗೆ ಆಡಿಟಿಂಗ್ ನಡೆಯಬೇಕಿದೆ ಎಂದರು. ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಪೀಠ ಲೆಕ್ಕಪರಿಶೋಧನೆ ನಡಸಲು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.