ETV Bharat / city

ಆರ್‌ಆರ್‌ ನಗರ ಸಬ್ ರಿಜಿಸ್ಟರ್ ಕಚೇರಿ ಮೇಲೆ ಎಸಿಬಿ ದಾಳಿ: 3.46 ಲಕ್ಷ ನಗದು ಪತ್ತೆ - ಬೆಂಗಳೂರು ಸುದ್ದಿ

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ಸಬ್‌ ರಿಜಿಸ್ಟಾರ್ ಕಚೇರಿ ಮೇಲೆ ದಾಳಿ ನಡೆಸಿರುವ ಎಸಿಬಿ ಅಧಿಕಾರಿಗಳು ಮಧ್ಯವರ್ತಿಗಳಿಂದ 3.46 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಸೇರಿದ ಕೆಲ ದಾಖಲೆಗಳು, ಖಾಲಿ ಛಾಪಾ ಕಾಗದಗಳು ಪತ್ತೆಯಾಗಿವೆ.

ACB Raids in RR Nagar sub registrar office in Bengaluru
ಆರ್‌ಆರ್‌ ನಗರ ಸಬ್ ರಿಜಿಸ್ಟರ್ ಕಚೇರಿ ಮೇಲೆ ಎಸಿಬಿ ದಾಳಿ: 3.46 ಲಕ್ಷ ನಗದು ಪತ್ತೆ
author img

By

Published : Dec 19, 2020, 3:20 AM IST

ಬೆಂಗಳೂರು: ರಾಜರಾಜೇಶ್ವರಿ ನಗರದ ಸಬ್ ರಿಜಿಸ್ಟಾರ್ ಕಚೇರಿ ಮೇಲೆ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ದಾಳಿ ನಡೆಸಿ ಮಧ್ಯವರ್ತಿಗಳಿಂದ 3.46 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ.

ದಾಳಿ ವೇಳೆ ಸಾರ್ವಜನಿಕರ ಕೆಲ‌ ದಾಖಲೆಗಳು, ಖಾಲಿ ಛಾಪಾ ಕಾಗದಗಳು ಪತ್ತೆಯಾಗಿವೆ. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಮಧ್ಯವರ್ತಿಗಳಿಗೆ ನೊಟೀಸ್ ನೀಡಲಾಗಿದ್ದು, ಎಸಿಬಿ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.

ಆರ್.ಆರ್.‌ನಗರದಲ್ಲಿರುವ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಏಜೆಂಟರು, ದಲ್ಲಾಳಿಗಳು ಹಾಗೂ ಜನರಿಂದ ಲಂಚ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರಿಂದ ಎಸಿಬಿಗೆ ದೂರುಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಕಚೇರಿ ಮೇಲೆ ದಾಳಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರ ಕೋರಮಂಗಲ ಆರ್‌ಟಿಓ‌ ಕಚೇರಿ ಮೇಲೆ ನಡೆಸಿದ ಎಸಿಬಿ ದಾಳಿಯಲ್ಲಿ 5.96 ಲಕ್ಷ ಹಣ ಪತ್ತೆಯಾಗಿತ್ತು. ಏಜೆಂಟರು ಸೇರಿದಂತೆ ಐವರನ್ನು ಬಂಧಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.