ETV Bharat / city

ಆಸ್ತಿಯ ಗಡಿ ಗುರುತಿಸಲು 70 ಲಕ್ಷ ಬೇಡಿಕೆ ಇಟ್ಟಿದ್ದ ಅಧಿಕಾರಿಗಳು: ಎಸಿಬಿ ದಾಳಿಯಲ್ಲಿ ಕಂತೆ ಕಂತೆ ನೋಟು ಪತ್ತೆ - bengaluru news

ಆಸ್ತಿಯ ಭೂಮಾಪನ ನಡೆಸಿ, ಗಡಿ ಗುರುತಿಸಲು ಲಕ್ಷಾಂತರ ರೂ ಬೇಡಿಕೆ ಇಟ್ಟಿದ್ದ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸಿ, ಲಕ್ಷಾಂತರ ಹಣ ವಶಕ್ಕೆ ಪಡೆದಿದೆ.

ಎಸಿಬಿ ದಾಳಿ
ಎಸಿಬಿ ದಾಳಿ
author img

By

Published : Aug 27, 2021, 5:13 AM IST

ಬೆಂಗಳೂರು: ಅಳತೆ ಟಿಪ್ಪಣ್ಣಿ ತಯಾರಿಸಲು ಹೇಳಿದ ಹೈಕೋರ್ಟ್ ಸೂಚನೆಯನ್ನೇ ಬಂಡವಾಳ ಮಾಡಿಕೊಂಡ ಭ್ರಷ್ಟ ಅಧಿಕಾರಿಗಳು ಗುರುವಾರ ಎಸಿಬಿ ಬಲೆಗೆ ಬಿದಿದ್ದಾರೆ. ದಾಳಿಯಲ್ಲಿ ಲಕ್ಷಾಂತರ ರೂಪಾಯಿಗಳ ಕಂತೆ ಕಂತೆ ನೋಟುಗಳು ಪತ್ತೆಯಾಗಿವೆ.

ಹೈಕೋರ್ಟ್ ಸೂಚನೆ ಮೇರೆಗೆ ಆಸ್ತಿಯ ಭೂಮಾಪನ ನಡೆಸಿ, ಗಡಿ ಗುರುತಿಸಲು ಲಕ್ಷಾಂತರ ರೂ ಬೇಡಿಕೆ ಇಟ್ಟಿದ್ದ ಉತ್ತರ ವಿಭಾಗದ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕಿ (ಡಿಡಿಎಲ್ಆರ್) ಸೇರಿ ನಾಲ್ವರು ಭ್ರಷ್ಟರ ಅಧಿಕಾರಿಗಳ ಮನೆ ಮೇಲೆ ಗುರುವಾರ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿ, ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಉತ್ತರ ವಿಭಾಗದ ಡಿಡಿಎಲ್‌ಆರ್ ಕುಸುಮಲತಾ ಅವರಿಗೆ ಸೇರಿದ ಕೆಂಗೇರಿಯ ಮನೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎಡಿಎಲ್‌ಆರ್) ಆನಂದ್ ಕುಮಾರ್‌ಗೆ ಸೇರಿದ ಜಾಲಹಳ್ಳಿಯಲ್ಲಿರುವ ಮನೆ, ಹೊರಗುತ್ತಿಗೆ ನೌಕರ ರಮೇಶ್​ಗೆ ಸೇರಿದ ಯಲಹಂಕದಲ್ಲಿರುವ ನಿವಾಸ, ಸರ್ವೇಯರ್ ಶ್ರೀನಿವಾಸ್ ಆಚಾರ್‌ಗೆ ಸೇರಿದ ತುಮಕೂರಿನಲ್ಲಿರುವ ಮನೆ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಈ ಪೈಕಿ ಆನಂದ್ ಕುಮಾರ್ ಹಾಗೂ ರಮೇಶ್ ಅಕ್ರಮ ಎಸಗಿರುವುದಕ್ಕೆ ಸೂಕ್ತ ಸಾಕ್ಷ್ಯ ಪತ್ತೆಯಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಎಸಿಬಿ ಮೂಲಗಳಿಂದ ತಿಳಿದು ಬಂದಿದೆ.

ಆನಂದ್‌ ಕುಮಾರ್ ಜಾಲಹಳ್ಳಿಯ ಮನೆಯಲ್ಲಿ 25.30 ಲಕ್ಷರೂ ನಗದು ಹಣ, 70 ಲಕ್ಷ ರೂ ಮೌಲ್ಯದ 3 ಚೆಕ್‌ಗಳು ಹಾಗೂ ಇತರೆ ದಾಖಲೆಗಳು ಪತ್ತೆಯಾಗಿದೆ. ಶ್ರೀನಿವಾಸ್ ಆಚಾರ್ ಮನೆಯಲ್ಲೂ ಆಸ್ತಿ ಪತ್ರಕ್ಕೆ ಸಂಬಂಧಿಸಿದ ದಾಖಲೆ ಜಪ್ತಿ ಮಾಡಲಾಗಿದೆ. ಕುಸುಮಲತಾ ಮನೆಯಲ್ಲಿ ಯಾವುದೇ ಮಹತ್ವದ ದಾಖಲೆಗಳು ಪತ್ತೆಯಾಗಿಲ್ಲ. ರಮೇಶ್ ಮನೆಯಲ್ಲಿ ಕೆಲ ದಾಖಲೆಗಳು ಪತ್ತೆಯಾಗಿದೆ ಎಂದು ಎಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಳಿ ನಡೆದ ಹಿನ್ನೆಲೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾಗದಾಸನಪುರ ಗ್ರಾಮದ ನಿವಾಸಿಯೊಬ್ಬರಿಗೆ ಸಂಬಂಧಪಟ್ಟ ಬೆಂಗಳೂರು ಉತ್ತರ ತಾಲೂಕು ಕುದುರಗೆರೆ ಗ್ರಾಮದ ಸ್ವತ್ತಿನ ಬಗ್ಗೆ ಗಡಿಯನ್ನು ಗುರುತಿಸಲು ಹೈಕೋರ್ಟ್ ಆದೇಶಿಸಿತ್ತು. ಜಮೀನಿನ ಅಳತೆ ಟಿಪ್ಪಣಿ ತಯಾರಿಸಲು ದೂರುದಾರರು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಶೀಲಿಸಿದ್ದ ಆನಂದ್, ಅಳತೆ ಮಾಡಿಕೊಡಲು 70 ಲಕ್ಷರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ. ಈ ಪೈಕಿ 20 ಲಕ್ಷ ರೂ. ಹಾಗೂ ಚೆಕ್‌ ಮುಂಗಡವಾಗಿ ಪಡೆದಿದ್ದ. ಇನ್ನಷ್ಟು ಲಂಚ ಕೊಡಲು ಒಪ್ಪದ ಅರ್ಜಿದಾರರು ಎಸಿಬಿಗೆ ಈ ಬಗ್ಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಎಸಿಬಿ ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.