ETV Bharat / city

ACB Raid : ಬಿಡಿಎ ಕಚೇರಿ ಮೇಲೆ 40ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ, ಕಡತಗಳ ಪರಿಶೀಲನೆ

ಎಸಿಬಿ ದಾಳಿ ಹಿನ್ನೆಲೆ ಬಿಡಿಎ ಕೇಂದ್ರ ಕಚೇರಿ ಗೇಟ್ ಬಂದ್ ಮಾಡಲಾಗಿದೆ. ಬಿಡಿಎ ಉಪಕಾರ್ಯದರ್ಶಿ 2, 3, 4ರಲ್ಲಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ..

ಬಿಡಿಎ ಕಚೇರಿ ಮೇಲೆ 40ಕ್ಕೂ ಹೆಚ್ಚು ಅಧಿಕಾರಿಗಳ ದಾಳಿ

author img

By

Published : Nov 19, 2021, 6:39 PM IST

Updated : Nov 19, 2021, 6:57 PM IST

ಬೆಂಗಳೂರು : ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದಲ್ಲಿ (BDA) ಅವ್ಯವಹಾರ ನಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ACB) ಏಕಾಏಕಿ ದಾಳಿ ನಡೆಸಿದೆ.

ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ

ಬಿಡಿಎ ಕೇಂದ್ರ ಕಚೇರಿಯಲ್ಲಿ ಸಾಕಷ್ಟು ಅವ್ಯವಹಾರಗಳು ನಡೆದಿರುವ ಮಾಹಿತಿ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾಕಷ್ಟು ಹಣ ವಸೂಲಿ ಆರೋಪ ಕೇಳಿ ಬಂದಿತ್ತು. ಬಿಡಿಎ ಉಪಕಾರ್ಯದರ್ಶಿ 2, 3, 4ರಲ್ಲಿ ಮಹತ್ವದ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಇಬ್ಬರು DCP ನೇತೃತ್ವದಲ್ಲಿ 10ಕ್ಕೂ ಹೆಚ್ಚು DYSP ಸೇರಿದಂತೆ 40ಕ್ಕೂ ಹೆಚ್ಚು ಅಧಿಕಾರಿಗಳು ದಾಳಿ ನಡೆಸಿ ಕಡತಗಳ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂ ಸ್ವಾಧೀನ ವಿಭಾಗದ ಕಾರ್ಯದರ್ಶಿಗಳ ಕಚೇರಿಯ ಮೇಲೆ ಸ್ವಾಧೀನ ಜಾಗಕ್ಕೆ ಪರಿಹಾರ ರೂಪದಲ್ಲಿ ನಿವೇಶನ ಹಂಚಿಕೆಯಲ್ಲಿ ಅಕ್ರಮ ಹಾಗೂ ಪರಿಹಾರದ ಹಣ ನೀಡುವಲ್ಲಿ ವಿಳಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ಬಂದಿದ್ದವು.‌ ಅಲ್ಲದೆ ಬಿಡಿಎ ವಿವಿಧ ವಿಭಾಗದಲ್ಲಿ ಸಾಕಷ್ಟು ಅಕ್ರಮಗಳು ಕೇಳಿಬಂದಿತ್ತು‌. ಈ ಸಂಬಂಧ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಡಿಎ ಕೇಂದ್ರ ಕಚೇರಿ ಗೇಟ್ ಬಂದ್ ಮಾಡಿ ನೌಕರರನ್ನ ವಿಚಾರಣೆ ಮಾಡುತ್ತಿದ್ದಾರೆ.

ಕಂಪ್ಯೂಟರ್​ನಲ್ಲಿ ಇರುವ ಕಡತಗಳನ್ನು ಕೂಡ ಪರಿಶೀಲಿಸುತ್ತಿದ್ದಾರೆ‌. ಅಧಿಕಾರಿಗಳ ಮತ್ತು ನೌಕರರ ಬಳಿ ಹಣ ಪತ್ತೆಯಾಗಿದೆ ಎಂಬ ಎನ್ನಲಾಗುತ್ತಿದೆ. ಕೆಲ ರೈತರ ಬಳಿ ಹಣ ಪಡೆದುಕೊಂಡ ಬಗ್ಗೆ ಮಾಹಿತಿ ಹಿನ್ನೆಲೆ ಬಿಡಿಎಗೆ ಬಂದಿದ್ದ ಗ್ರಾಹಕರ ವಿಚಾರಣೆ ನಡೆಸಲಾಗುತ್ತಿದೆ. ಕಚೇರಿಯ ಕಚೇರಿಯ ಒಳಗೆ ಬರುವವರು, ಹೋಗುವವರ ತಪಾಸಣೆ‌ ನಡೆಸುತ್ತಿದ್ದಾರೆ.

ಓದಿ: ದೊಡ್ಡಬಳ್ಳಾಪುರ: ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ 380 ಶರ್ಟ್, 90 ಪ್ಯಾಂಟ್ ಕದ್ದಿದ್ದ ಆರೋಪಿಗಳ ಬಂಧನ

Last Updated : Nov 19, 2021, 6:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.