ಬೆಂಗಳೂರು: ಊರಿಗೆ ಹೋಗಲೆಂದು ಯಶವಂತಪುರ ರೈಲು ನಿಲ್ದಾಣಕ್ಕೆ ಆಗಮಿಸಿದ್ದ ಕುಟುಂಬವೊಂದರ ಯಜಮಾನ ಹೃದಯಾಘಾತದಿಂದ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.
ನಗರದಲ್ಲಿ ಪೈಟಿಂಗ್ ಕೆಲಸ ಮಾಡುತ್ತಿದ್ದ ಮನೋಜ್ ಕುಮಾರ್ ಸಾವನ್ನಪ್ಪಿದ ವ್ಯಕ್ತಿ. ಅಸ್ಸೋಂನ ಗೋರಖ್ಪುರದ ಈತ ಬೆಂಗಳೂರಲ್ಲಿ ಹೆಂಡತಿ ಮಕ್ಕಳ ಸಮೇತ ವಾಸವಾಗಿದ್ದ. ಈತನಿಗೆ ಮೂವರು ಮಕ್ಕಳಿದ್ದಾರೆ. ಕುಟುಂಬದ ಜೊತೆ ಗೋರಖ್ಪುರಕ್ಕೆ ತೆರಳಲು ಇವರು ರಾತ್ರಿ ಯಶವಂತಪುರ ರೈಲು ನಿಲ್ದಾಣಕ್ಕೆ ಆಗಮಿಸಿದ್ದರು. ಪ್ಲಾಟ್ಫಾರ್ಮ್ 6ರಲ್ಲಿ ಬಂದು ರೈಲಿಗಾಗಿ ಕಾಯುತ್ತಿರುವಾಗ ಮನೋಜ್ ಕುಮಾರ್ಗೆ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆ ರವಾನಿಸಲಾಗಿದೆ.
ಕಣ್ಮುಂದೆಯೇ ತಂದೆಯನ್ನ ಕಳೆದುಕೊಂಡು ರೋದಿಸುತ್ತಿದ್ದ ಮಕ್ಕಳನ್ನ ನೋಡಿದ್ರೆ ಕಲ್ಲು ಹೃದಯದವರ ಕಣ್ಣುಗಳು ಕೂಡ ಒದ್ದೆಯಾಗುತ್ತವೆ. ಸ್ಥಳಕ್ಕೆ ಯಶವಂತಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.