ETV Bharat / city

ಸಾಮಾಜಿಕ ಜಾಲತಾಣ ನಿರ್ವಹಣೆಗೆ ಪಾಲಿಕೆಯ ತಿಂಗಳ ಖರ್ಚು ಇಷ್ಟು!

author img

By

Published : Feb 15, 2020, 8:16 PM IST

ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಪ್ರತೀ ತಿಂಗಳು 7 ಲಕ್ಷ ಖರ್ಚು ಮಾಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ.

7 lakhs spent on maintenance of social media site each month
ಪಾಲಿಕೆ ಖರ್ಚು ಮಾಡುತ್ತಿರುವ ವೆಚ್ಚ 7 ಲಕ್ಷ

ಬೆಂಗಳೂರು: ಸಾಮಾಜಿಕ ಜಾಲತಾಣಗಳ ನಿರ್ವಹಣೆಗೆ ಪ್ರತೀ ತಿಂಗಳು 7 ಲಕ್ಷ ಖರ್ಚು ಮಾಡುತ್ತಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ. ಸಾರ್ವಜನಿಕರ ತೆರಿಗೆ ಹಣವನ್ನು ಪೋಲು ಮಾಡಲಾಗ್ತಿದೆ ಎಂದು ಪಾಲಿಕೆ ಆಯುಕ್ತರ ಸಾರ್ವಜನಿಕರು ಗುಡುಗಿದ್ದಾರೆ.

ಟ್ವಿಟರ್, ಫೇಸ್​​ಬುಕ್​​ನಲ್ಲಿ ಪಾಲಿಕೆ ಅಭಿವೃದ್ಧಿ ಕೆಲಸಗಳನ್ನು ಪ್ರಚಾರ ಮಾಡುತ್ತಿದೆ. ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್​ಕುಮಾರ್ ಅಧೀನದ ಟ್ವಿಟರ್ ಹಾಗೂ ಫೇಸ್​ಬುಕ್ ಪೇಜ್​​ಗಳಲ್ಲಿ ಬಿಬಿಎಂಪಿ ಕೈಗೊಳ್ಳುವ ಅಭಿವೃದ್ಧಿ ಕೆಲಸಗಳನ್ನು ಪ್ರಚಾರ ಮಾಡಲು ಬಿಬಿಎಂಪಿ 7 ಲಕ್ಷ ರೂ ವೆಚ್ಚ ಮಾಡುತ್ತಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಪ್ರಾಯೋಗಿಕವಾಗಿ ಸೋಷಿಯಲ್ ಮೀಡಿಯಾ ಪ್ರಚಾರ ಆರಂಭಿಸಿದಾಗ 4,93,240 ರೂ. ವೆಚ್ಚ ಮಾಡಿತ್ತು. ಅಕ್ಟೋಬರ್​​ಗೆ 7,16,885 ರೂ. ನವೆಂಬರ್​ಗೆ 7,16,885 ರೂ ಖರ್ಚು ಮಾಡಿರುವುದಾಗಿ ಪಾಲಿಕೆ ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಿದೆ.

ಮೇಯರ್​ ಗೌತಮ್ ಕುಮಾರ್

ಮೇಯರ್ ಗೌತಮ್ ಕುಮಾರ್ ಈ ಕುರಿತು ಪ್ರತಿಕ್ರಿಯಿಸಿ, ಬಿಬಿಎಂಪಿ ಬ್ರಾಂಡಿಂಗ್​​ಗಾಗಿ, ಜಗತ್ತಿಗೆ ತೋರಿಸಿಕೊಳ್ಳಲು ಸೋಷಿಯಲ್ ಮೀಡಿಯಾ ಬಹಳ ಮುಖ್ಯ‌. ಹೀಗಾಗಿ 7 ಲಕ್ಷ ವೆಚ್ಚ ಮಾಡುವುದರಲ್ಲಿ ಏನೂ ತಪ್ಪಿಲ್ಲ ಎಂದು ಆಯುಕ್ತರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.