ಬೆಂಗಳೂರು: ಕೋವಿಡ್ ಸೋಂಕು ರಾಜ್ಯದಲ್ಲಿ ಗಣನೀಯವಾಗಿ ಇಳಿಕೆಯಾಗುತ್ತಿದೆ. ಗುರುವಾರ 69,388 ಜನರಿಗೆ ಪರೀಕ್ಷೆ ನಡೆಸಲಾಗಿದ್ದು, 588 ಜನರ ವರದಿ ಪಾಸಿಟಿವ್ ಬಂದಿದೆ. 19 ಜನರು ಸೋಂಕಿತರು ಮೃತಪಟ್ಟಿದ್ದು, 8,255 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಸೋಂಕಿನ ಪ್ರಮಾಣ ಶೇ. 0.84 ಮತ್ತು ಸಾವಿನ ಪ್ರಮಾಣ ಶೇ. 3.23ರಷ್ಟಿದೆ. ಇದುವರೆಗೆ ರಾಜ್ಯದಲ್ಲಿ 39.39 ಲಕ್ಷ ಜನರು ಕೊರೊನಾಗೆ ಒಳಗಾಗಿದ್ದಾರೆ. 39,885 ಜನರು ಮೃತಪಟ್ಟಿದ್ದಾರೆ. ಇಂದು 1,692 ಜನರು ಗುಣಮುಖರಾಗಿದ್ದು, ಒಟ್ಟು ಗುಣಮುಖರಾದವರ ಸಂಖ್ಯೆ 38,91,110 ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: Watch.. ನೋವಿನಲ್ಲೂ ಮಾನವೀಯತೆ ಮೆರೆದ ಹರ್ಷ ಕುಟುಂಬ
ಬೆಂಗಳೂರು ನಗರದಲ್ಲಿ 353 ಜನ ಸೋಂಕಿಗೆ ಒಳಗಾಗಿದ್ದರೆ, 9 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿಯಲ್ಲಿದೆ. 19 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳೇ ಕಂಡು ಬಂದಿಲ್ಲ. ಸಿಲಿಕಾನ್ ಸಿಟಿಯಲ್ಲಿ 14, ಚಾಮರಾಜನಗರ, ಧಾರವಾಡ, ದಕ್ಷಿಣ ಕನ್ನಡ, ಕಲಬುರಗಿ, ಕೊಡಗು ಜಿಲ್ಲೆಯಲ್ಲಿ ತಲಾ ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.