ETV Bharat / city

ರಾಜ್ಯದಲ್ಲಿ 328 ಮಂದಿಗೆ ಕೊರೊನಾ ದೃಢ: ಮೂವರು ಸೋಂಕಿತರ ಸಾವು - ಕರ್ನಾಟಕ ಕೊರೊನಾ ರಿಪೋರ್ಟ್​​​

ಬೆಂಗಳೂರಿನಲ್ಲಿ 127 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 4,00,692ಕ್ಕೆ ಏರಿಕೆ ಆಗಿದೆ. 126 ಸೋಂಕಿತರು ಗುಣಮುಖರಾಗಿದ್ದು 3,92,389 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 3896 ಸಕ್ರಿಯ ಪ್ರಕರಣಗಳಿದ್ದು, ಇಬ್ಬರು ಸೋಂಕಿತರು ಮೃತರಾಗಿದ್ದಾರೆ.

328-corona-cases-found-in-the-state-today
ಕೊರೊನಾ ವರದಿ
author img

By

Published : Feb 9, 2021, 12:42 AM IST

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 328 ಮಂದಿಗೆ ಸೋಂಕು ತಗುಲಿ ಒಟ್ಟಾರೆ ಸೋಂಕಿತರ ಸಂಖ್ಯೆ 9,42,846ಕ್ಕೆ ಏರಿಕೆ ಯಾಗಿದ್ದು, 3 ಜನ ಸೋಂಕಿತರು ಮೃತರಾಗಿ ಇವರ ಸಂಖ್ಯೆ 12,239ಕ್ಕೆ ಏರಿಕೆಯಾಗಿದೆ.‌

ಇದೇ ಅವಧಿಯಲ್ಲಿ 350 ಮಂದಿ ಗುಣಮುಖರಾಗಿದ್ದು 9,24,654 ಮಂದಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 5,934 ಇದ್ದು, 143 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ಸೋಂಕಿತರ ಪ್ರಕರಣಗಳು ಶೇ 0.67 ರಷ್ಟು ಇದ್ದರೆ, ಮೃತ ಪಟ್ಟವರ ಪ್ರಮಾಣ ಶೇ 0.91ರಷ್ಟಿದೆ.

ಇಂಗ್ಲೆಂಡನ್​ನಿಂದ ಸೋಮವಾರ 262 ಪ್ರಯಾಣಿಕರು ಆಗಮಿಸಿದ್ದಾರೆ. 59 ಜನ ಪ್ರಯಾಣಿಕರ ವರದಿ ಪಾಸಿಟಿವ್ ಬಂದಿದೆ. ಅಲ್ಲದೆ ಈ ಸೋಂಕಿತರ ಸಂಪರ್ಕದಲ್ಲಿದ್ದ 26 ಮಂದಿಗೂ ಕೋವಿಡ್​​ ಪಾಸಿಟಿವ್ ದೃಢಪಟ್ಟಿದೆ.‌ 21 ಜನರಿಗೆ ರೂಪಾಂತರ ಕೊರೊನಾ ಹರಡಿದೆ.

ಸಿಲಿಕಾನ್​ ಸಿಟಿಯಲ್ಲಿ 127 ಸೋಂಕಿತರ ಪತ್ತೆ

ಬೆಂಗಳೂರಿನಲ್ಲಿ 127 ಮಂದಿಗೆ ಸೋಂಕು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 4,00,692ಕ್ಕೆ ಏರಿಕೆ ಆಗಿದೆ. 126 ಸೋಂಕಿತರು ಗುಣಮುಖರಾಗಿದ್ದು 3,92,389 ಮಂದಿ ಡಿಸ್ಜಾರ್ಜ್ ಆಗಿದ್ದಾರೆ. 3896 ಸಕ್ರಿಯ ಪ್ರಕರಣಗಳಿದ್ದು, ಇಬ್ಬರು ಸೋಂಕಿತರು ಮೃತರಾಗಿದ್ದಾರೆ. ಈವರೆಗೆ 4,406 ಜನರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.