ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮವಾಗಿರುವ ಕರ್ನಾಟಕ ಸೋಪ್ಸ್ ಆ್ಯಂಡ್ ಡಿಟರ್ಜೆಂಟ್ಸ್ ಲಿ. ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಬೃಹತ್ ದೇಣಿಗೆಯನ್ನು ನೀಡಿದೆ. ವಿಧಾನ ಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿ ಮಾಡಿ 22.78 ಕೋಟಿ ರೂ.ಗಳ ಬೃಹತ್ ದೇಣಿಗೆಯನ್ನು ಸಂಸ್ಥೆಯು ಸಲ್ಲಿಕೆ ಮಾಡಿದೆ ಎಂದು ವರದಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಈ ಚೆಕ್ಅನ್ನು ವಿತರಿಸಲಾಯಿತು.
ಭೇಟಿ ಮಾಡಿದ ಕರ್ನಾಟಕ ಸೋಪ್ ಆ್ಯಂಡ್ ಡಿಟರ್ಜೆಂಟ್ ಲಿ. ಕಂಪನಿಯ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ, ವ್ಯವಸ್ಥಾಪಕ ನಿರ್ದೇಶಕ ಮಹೇಶ ಶಿರೂರ ಮತ್ತು ನಿಗಮದ ನಿರ್ದೇಶಕರುಗಳಾದ ಶಿವು ಹುಡೇದ್, ಮಲ್ಲಿಕಾರ್ಜುನ್ ಸಾಹುಕಾರ್, ನಿವೇದಿತಾ ರಾಜು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 22,78,99,598 ಮೊತ್ತದ ಚೆಕ್ ನ್ನು ಹಸ್ತಾಂತರಿಸಲಾಗಿದೆ.
ಓದಿ :ಮದುವೆ ಲೈಸೆನ್ಸ್ ಅಲ್ಲ; ಪತ್ನಿಯ ಇಚ್ಛೆಗೆ ವಿರುದ್ಧದ ಪತಿಯ ಲೈಂಗಿಕ ಕ್ರಿಯೆ ಅತ್ಯಾಚಾರ: ಹೈಕೋರ್ಟ್