ಬೆಂಗಳೂರು : ವರ್ಷಪೂರ್ತಿ ಖಾಸಗಿ ಶಾಲೆಗಳಲ್ಲಿ ಶುಲ್ಕ ಸಮರ, ಮುಷ್ಕರದಂತಹ ವಾತಾವರಣದ ನಡುವೆ ದ್ವಿತೀಯ ಪಿಯುಸಿ ರದ್ದು ಮಾಡಿ, ಎರಡು ದಿನಗಳ ಎಸ್ಎಸ್ಎಲ್‌ಸಿ ಪರೀಕ್ಷೆ ನಡೆಸಿ ಬಹುದೊಡ್ಡ ಹೆಜ್ಜೆ ಇಟ್ಟಿದ್ದು ಶಿಕ್ಷಣ ಇಲಾಖೆ. ಇಡೀ ಶೈಕ್ಷಣಿಕ ವಲಯದಲ್ಲಿ ಏರಿಳಿತದ ಸರಮಾಲೆಗಳೊಂದಿಗೆ 2021ರ ವರ್ಷಕ್ಕೆ ವಿದಾಯ ಹೇಳಲಾಗ್ತಿದೆ. ಹಾಗಾದರೆ, ವಿದಾಯದ ವರ್ಷದಲ್ಲಿ ಏನೆಲ್ಲ ಘಟನೆಗಳು ನಡೆದವು ಹೇಗಿತ್ತು, ವಿದ್ಯಾರ್ಥಿಗಳ ಶಿಕ್ಷಣಾಭ್ಯಾಸ ಇಲ್ಲಿದೆ ಮಾಹಿತಿ.
- ಕೊರೊನಾ ಕಾರಣಕ್ಕೆ ಭೌತಿಕ ತರಗತಿಗಳಿಗೆ ಬ್ರೇಕ್ ಹಾಕಲಾಗಿತ್ತು. ಸೋಂಕಿನ ತೀವ್ರತೆ ಕಡಿಮೆಯಾದ ಹಿನ್ನೆಲೆ ಹೊಸ ಎಸ್‌ಒಪಿ ಜಾರಿ ಮಾಡಿ ಜ.15ರಿಂದ ಮೊದಲ ಹಂತವಾಗಿ ಉನ್ನತ ಶಿಕ್ಷಣದ ಎಲ್ಲ ಆಫ್‌ಲೈನ್ ತರಗತಿಗಳು ಶುರುವಾದವು. ಬರೋಬ್ಬರಿ 10 ತಿಂಗಳ ಬಳಿಕ ಡಿಗ್ರಿ-ಪಿಜಿ ಕ್ಲಾಸ್ ನಡೆಯಿತು. ನಂತರ ಪೂರ್ಣ ಪ್ರಮಾಣದಲ್ಲಿ 9-12ನೇ ತರಗತಿ ಆರಂಭಕ್ಕೆ ತಾಂತ್ರಿಕ ಸಲಹಾ ಸಮಿತಿ ಒಪ್ಪಿಗೆ ನೀಡಿದ ಹಿನ್ನೆಲೆ ಫೆಬ್ರವರಿ 1ರಿಂದ ತರಗತಿಗಳು ಆರಂಭವಾದ್ವು. ಒಂದು ಹಾಗೂ ಎರಡರ ಹಂತ ಯಶ್ವಸಿಯಾದ ಬಳಿಕ ಫೆಬ್ರವರಿ 22ರಿಂದ 6-8ನೇ ತರಗತಿ ಆರಂಭ ಮಾಡಿ ಸಲಹಾತ್ಮಕ ವೇಳಾಪಟ್ಟಿ ಶಿಕ್ಷಣ ಇಲಾಖೆಯೇ ಪ್ರಕಟಿಸಿತು. 20 ತಿಂಗಳ ಬಳಿಕ 1-5ನೇ ತರಗತಿ ಅಕ್ಟೋಬರ್ 25ರಿಂದ ಆರಂಭವಾಯ್ತು. ಆಫ್ ಡೇ ಕ್ಲಾಸ್, ನೋ ಮಿಡ್ ಮಿಲ್ಸ್ ರೂಲ್ಸ್ ಜಾರಿ ಮಾಡಲಾಗಿತ್ತು.
- ಈ ಮಧ್ಯೆ ಸರ್ಕಾರದ ಆದೇಶ ಉಲ್ಲಂಘಿಸಿ ಕೆಲ ಖಾಸಗಿ ಶಾಲೆಗಳು ಒಂದನೇ ತರಗತಿ ಆರಂಭಿಸಿದ ಘಟನೆಯೂ ನಡೆಯಿತು. ಕೋವಿಡ್ ಇಳಿಕೆ ಬೆನ್ನಲ್ಲೇ ಆನ್‌ಲೈನ್- ಆಫ್‌ಲೈನ್ ಹಾಜರಾತಿ ಕಡ್ಡಾಯ ಮಾಡಲಾಗಿತ್ತು.
- ಶಾಲಾರಂಭದ ನಂತರ ಅತೀ ಹೆಚ್ಚು ಸುದ್ದಿಯಾಗಿದ್ದು ಫೀಸ್ ವಾರ್. ಪೋಷಕರು ಹಾಗೂ ಖಾಸಗಿ ಶಾಲೆಗಳ ನಡುವೆ ಶುಲ್ಕ ಸಂಬಂಧ ಸಾಕಷ್ಟು ವಾಗ್ವಾದವೇ ನಡೆದಿದೆ. ಇತ್ತ ಸರ್ಕಾರ ಮಧ್ಯ ಪ್ರವೇಶಿಸಬೇಕು ಅಂತಾ ಪೋಷಕರು ಒತ್ತಾಯ ಮಾಡಿದರು. ಹೀಗಾಗಿ, ಖಾಸಗಿ ಶಾಲೆಗಳಲ್ಲಿ ಶುಲ್ಕ ಸಮಸ್ಯೆ ಪರಿಹಾರಕ್ಕೆ ಸರ್ಕಾರವು ಸಮಿತಿ ರಚನೆ ಮಾಡಿದ ಬಳಿಕ 2020ರ ಶುಲ್ಕದ ಶೇ.70ರಷ್ಟು ಪಡೆಯುವಂತೆ ಆದೇಶ ಮಾಡಲಾಗಿತ್ತು.
- ಶುಲ್ಕ ಕಡಿತಗೊಳಿಸಬೇಕು ಎಂಬ ಶಿಕ್ಷಣ ಇಲಾಖೆ ಆದೇಶದ ವಿರುದ್ಧ ತಿರುಗಿ ಬಿದ್ದ ಖಾಸಗಿ ಶಾಲೆಗಳು (ಕ್ಯಾಮ್ಸ್) ಬೃಹತ್ ಪ್ರತಿಭಟನಾ ರಾಲಿ ಮಾಡಿತು. ಶುಲ್ಕ ಕಡಿತ ಮಾಡಿದರೆ, ಶಾಲೆಯನ್ನು ನಡೆಸುವುದು ಕಷ್ಟ, ಶಿಕ್ಷಕರಿಗೆ, ಶಿಕ್ಷಕೇತರ ಸಿಬ್ಬಂದಿಗೆ ವೇತನ ಕೊಡೊದು ಹೇಗೆ ಅಂತಾ ಪ್ರಶ್ನಿಸಿದರು. ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನಾ ಸ್ಥಳಕ್ಕೆ ಆಗಿನ ಸಚಿವ ಸುರೇಶ್‌ಕುಮಾರ್ ಭೇಟಿ ನೀಡಿ ಮತ್ತೊಮ್ಮೆ ಸಭೆ ನಡೆಸಲು ತೀರ್ಮಾನಿಸಿ ಪರಿಸ್ಥಿತಿ ತಿಳಿಗೊಳಿಸಿದರು.
- ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಪರಿಣಾಮ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಮಾಡಾಯ್ತು. ಬಳಿಕ ಐಸಿಹಾಸಿಕವೆಂಬಂತೆ ಆರು ದಿನಗಳ ಕಾಲ ನಡೆಯುತ್ತಿದ್ದ ಎಸ್ಎಸ್ಎಲ್‌ಸಿ ಪರೀಕ್ಷೆ ಎರಡೇ ದಿನಗಳಲ್ಲಿ ನಡೆಸಲಾಯ್ತು. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಹೊಸ ಪ್ರಶ್ನೆ ಪತ್ರಿಕೆ ಮಾದರಿ ತಯಾರಿಸಿ ಬಹು ಆಯ್ಕೆ ಪ್ರಶ್ನೆಗಳನ್ನ ನೀಡಲಾಗಿತ್ತು.
- ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಮಾಸ್ ಪಾಸ್ ಹಿನ್ನೆಲೆ ಪದವಿ ಕಾಲೇಜುಗಳಿಗೆ ಬೇಡಿಕೆ ಹೆಚ್ಚಾಯ್ತು.
- ದ್ವಿತೀಯ ಪಿಯು ಫಲಿತಾಂಶ ಘೋಷಣೆ ಬಳಿಕ ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಕೇವಲ ಸಿಇಟಿ ಅಂಕ ಪರಿಗಣಿಸುವಂತೆ ಮನವಿ ಬಂದಾಗ ಅದಕ್ಕೂ ಸರ್ಕಾರದಿಂದ ಅಸ್ತು.
- ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ತಿರಸ್ಕಾರ ಅಥವಾ ಪರೀಕ್ಷೆಗೆ ಹಾಜರಾಗಲು ಇಚ್ಚಿಸುವವರಿಗೆ ಅರ್ಜಿ ಸಲ್ಲಿಸಲು ಅವಕಾಶ.
- ಶುಲ್ಕ ಕಟ್ಟಿಲ್ಲ ಅಂತಾ ನ್ಯಾಷನಲ್ ಪಬ್ಲಿಕ್ ಸ್ಕೂಲ್ ಆನ್‌ಲೈನ್ ಕ್ಲಾಸ್ ಐಡಿ ಬ್ಲಾಕ್
- ಖಾಸಗಿ ಶಾಲೆಗಳ ಫೀಸ್ ವಾರ್ ನಡುವೆಯೂ ಕೆಲ ಖಾಸಗಿ ಶಾಲೆಗಳು ಶುಲ್ಕ ರಿಯಾಯಿತಿ ನೀಡಿ ಮೆಚ್ಚುಗೆಗೂ ಪಾತ್ರವಾದವು
- 804 ಉತ್ತರ ಪತ್ರಿಕೆಗಳ ಸ್ಕ್ಯಾಮ್ ಸಂಬಂಧ ಸಿಐಡಿ ತನಿಖೆಗೆ ಒಳಪಡಿಸುವಂತೆ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಒತ್ತಾಯ
- ಕೋವಿಡ್ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಆನ್‌ಲೈನ್‌ನಲ್ಲಿ 17ನೇ ಇಂಡೋ-ಜಪಾನಿಸ್ ಹಬ್ಬ
- 6ನೇ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಹೊಸ ಧರ್ಮಗಳ ಉದಯ ಪಾಠಕ್ಕೆ ಕತ್ತರಿ ಹಾಕಿದ ಕಾರಣಕ್ಕೆ ಸಾಕಷ್ಟು ವಿರೋಧ. ಬಳಿಕ ಆಗೀನ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಧ್ಯೆ ಪ್ರವೇಶಿಸಿ ಯಾವುದೇ ಧರ್ಮದ ಪರಿಚಯ ಪಾಠಗಳಿಗೆ ಕೊಕ್ ನೀಡಲಾಗಿಲ್ಲ. ಅನಗತ್ಯ ವಿವಾದ ಹುಟ್ಟು ಹಾಕುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ
- ಕೊರೊನಾ ಹಿನ್ನೆಲೆ ಪಿಯು ಮಂಡಳಿಯಿಂದ ದ್ವಿತೀಯ ಪಿಯು ಪ್ರಾಯೋಗಿಕ ಪರೀಕ್ಷೆ ಮುಂದೂಡಿಕೆ
- ಕೋವಿಡ್ ಹರಡುವಿಕೆ ಹೆಚ್ಚಾದ ಕಾರಣಕ್ಕೆ ಪದವಿ,ಸ್ನಾತಕೋತ್ತರ ಪದವಿ ಕಾಲೇಜುಗಳಿಗೆ ಆನ್ ಲೈನ್ ಕ್ಲಾಸ್ ನಡೆಸುವಂತೆ ಸೂಚನೆ ನೀಡಿದ ಘಟನೆಯು ನಡಿತು.
- ಫ್ರೀಡಂ ಪಾರ್ಕ್‌ನಲ್ಲಿ ಪಿಂಚಣಿಗಾಗಿ ಅಹೋರಾತ್ರಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಅನುದಾನಿತ ವಿದ್ಯಾಸಂಸ್ಥೆಗಳ ನೌಕರರು ಮುಂದಾದರು. ಅನುದಾನಿತ ಶಾಲಾ-ಕಾಲೇಜು ನೌಕರರು ಅಹೋರಾತ್ರಿ ಧರಣಿನಿರತರ ಅಹವಾಲು ಸ್ವೀಕರಿಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವ ಸುರೇಶ್ ಕುಮಾರ್ ಭರವಸೆ
- ಕೊರೊನಾ ಕಾಲದಲ್ಲಿ ಸಂಕಷ್ಟದಲ್ಲಿರುವ ಖಾಸಗಿ ಶಾಲೆಗಳ ನೆರವಿಗೆ ಸರ್ಕಾರ ಬಾರದ ಕಾರಣಕ್ಕೆ ಶಿಕ್ಷಣ ಇಲಾಖೆ ಧೋರಣೆ ವಿರುದ್ಧ ರಾಜ್ಯದ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳ ಪ್ರತಿನಿಧಿಗಳು ಬೀದಿಗಿಳಿದು ಪ್ರತಿಭಟನೆ
- ಬಹುಕಾಲದ ಸಮಸ್ಯೆಯಾಗಿದ್ದ ಆರ್‌ಟಿಇ ಶುಲ್ಕ ಮರುಪಾವತಿ ನಿಯಮಗಳ ಸಡಿಲಿಕೆ ಶಿಕ್ಷಣ ಇಲಾಖೆ ಆದೇಶ
- ವೇತನ ಸಮಸ್ಯೆಗಾಗಿ ಬಿಸಿಯೂಟ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ
- ಕೊರೊನಾ ಕಾರಣಕ್ಕೆ ಬೈಸಿಕಲ್ ಯೋಜನೆಯಂತಹ ಪ್ರೋತ್ಸಾಹದಾಯಕ ಯೋಜನೆಗೆ ಕತ್ತರಿ
- ಖಾಸಗಿ ಅನುದಾನ ಶಾಲೆಗಳ ಒಕ್ಕೂಟದ (ಕ್ಯಾಮ್ಸ್‌ನ) ಕಾರ್ಯದರ್ಶಿ ಶಶಿಕುಮಾರ್ ಮೇಲೆ ದುಷ್ಕರ್ಮಿಗಳು ಹಲ್ಲೆ
- ಕಳೆದ ಎರಡು ವರ್ಷಗಳ ಅವಧಿಯಲ್ಲಿ ಶಿಕ್ಷಣ ಸಚಿವ ಸ್ಥಾನದಲ್ಲಿದ್ದ ಸುರೇಶ್ ಕುಮಾರ್ ರನ್ನ ಕೈ ಬಿಟ್ಟು ಇವರ ಜಾಗಕ್ಕೆ ಬಿಸಿ ನಾಗೇಶ್ ಅವರಿಗೆ ಖಾತೆ ಹಂಚಿಕೆ
- ವಿದ್ಯಾರ್ಥಿಗಳು ಬಿಇಒ ಕಚೇರಿಯಿಂದಲ್ಲೇ ಟಿ.ಸಿ ಪಡೆಯಬಹುದು ಎಂಬ ಸರ್ಕಾರದ ಆದೇಶಕ್ಕೆ ಖಾಸಗಿ ಶಾಲಾಡಳಿತದಿಂದ ವಿರೋಧ
- ಕೊರೊನಾ ನಡುವೆ ಟಿಇಟಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿ 21 ಅಭ್ಯರ್ಥಿಗಳ ಫಲಿತಾಂಶ ತಡೆ ಹಿಡಿದಿದ್ದ ಶಿಕ್ಷಣ ಇಲಾಖೆ
- ರಾಜ್ಯಾದ್ಯಂತ ಅಕ್ಟೋಬರ್ 21ರಿಂದ ಶಾಲೆಯಲ್ಲಿ ಮಧ್ಯಾಹ್ನ ಬಿಸಿಯೂಟ ಆರಂಭ
- ಬಹು ದಿನದ ಕನಸು ನನಸದಂತೆ ಶಿಕ್ಷಕರ ವರ್ಗಾವಣೆ ಕೌನ್ಸಿಲಿಂಗ್ ದಿನಾಂಕ ಪ್ರಕಟಿಸಿ
- ಬೆಂಗಳೂರು ವಿವಿಯಲ್ಲಿ ಅಧಿಕಾರ ಸ್ವೀಕಾರಕ್ಕಾಗಿ ಹೈ ಡ್ರಾಮ ಶುರುವಾಗಿ ಹಾಲಿ ಕುಲಸಚಿವ ನಿರ್ಗಮನಕ್ಕೂ ಮುನ್ನ ಪ್ರೊ.ಕೊಟ್ರೇಶ್ ಅಧಿಕಾರ ಚಲಾಯಿಸಿ ಮುಜುಗರಕ್ಕೀಡಾದರು
- ಎಸ್‌ಎಸ್‌ಎಲ್‌ಸಿ ಪರೀಕ್ಷಾ ಶುಲ್ಕ ಪರಿಷ್ಕರಣೆ ಮಾಡಿದ ಶಿಕ್ಷಣ ಇಲಾಖೆ. ಪ್ರತಿ ವಿದ್ಯಾರ್ಥಿಗೆ 100 ರೂ. ಹೆಚ್ಚಳ
- ದಕ್ಷಿಣ ಭಾರತದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರು ಕೃಷಿ ವಿವಿಗೆ ಪ್ರಥಮ ಸ್ಥಾನ
- ಶಿಕ್ಷಣ ಇಲಾಖೆಯಿಂದ ಶಾಲೆಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ
ಶಾಲಾ-ಕಾಲೇಜುಗಳಲ್ಲಿ ಕೊರೊನಾ ಭೀತಿ
ಶಾಲಾ-ಕಾಲೇಜು ಶುರುವಾದ ಬಳಿಕ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಪ್ರತ್ಯೇಕ ಮಾರ್ಗಸೂಚಿಗೆ ಖಾಸಗಿ ಶಾಲಾ-ಕಾಲೇಜುಗಳ ಸಂಘಟನೆಗಳು ಒತ್ತಾಯ ಮಾಡಿದ್ದವು. ಇತ್ತ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಒಂದೇ ಕಾಲೇಜಿನ 40 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ ಪಟ್ಟಿತ್ತು.
ಬಳಿಕ ಯಾವ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗೆ ಸೋಂಕು ಕಂಡು ಬಂದರೆ ಕೂಡಲೇ ಶಾಲಾ-ಕಾಲೇಜು ಬಂದ್ ಮಾಡಿ ಸಂಪೂರ್ಣ ಸ್ಯಾನಿಟೈಸ್ ನಂತರ ಆರೋಗ್ಯಾಧಿಕಾರಿಗಳ ಸೂಚನೆ ಮೇರೆಗೆ ತರಗತಿಗಳು ಆರಂಭಿಸುವಂತೆ ಹೊಸ ಆದೇಶವೂ ಹೊರಡಿಸಲಾಯ್ತು.
ಇದನ್ನೂ ಓದಿ: ಬೇಡಿಕೆ ಈಡೇರದಿದ್ದರೆ ಶಾಲೆಗಳನ್ನ ಬಂದ್ ಮಾಡಲು ಹಿಂಜರಿಯಲ್ಲ ; ಖಾಸಗಿ ಶಾಲೆಗಳಿಂದ ಎಚ್ಚರಿಕೆ