ETV Bharat / city

ಬೆಂಗಳೂರಿಗೆ ಬಂಪರ್​​: ಸಬ್​ ಅರ್ಬನ್​​​​ ರೈಲು ಓಡಾಟಕ್ಕೆ ಕೇಂದ್ರದಿಂದ 3,720 ಕೋಟಿ ರೂ. ಘೋಷಣೆ

author img

By

Published : Feb 1, 2020, 12:45 PM IST

Updated : Feb 1, 2020, 1:39 PM IST

ಬೆಂಗಳೂರು ಸಬ್​ ಅರ್ಬನ್​ ರೈಲುಗಳ ಆರಂಭಕ್ಕಾಗಿ ಈ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು 3720 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಹೀಗಾಗಿ ಬೆಂಗಳೂರು ಉಪನಗರ ರೈಲು ಓಡಾಟಕ್ಕಾಗಿ ಹೆಚ್ಚಿನ ಅನುದಾನ ಸಿಕ್ಕಂತಾಗಿದೆ. ಅಲ್ಲದೆ ಅನೇಕ ವರ್ಷಗಳ ಬೆಂಗಳೂರಿಗರ ಕನಸು ನನಸಾಗುವ ದಿನ ಸಮೀಪಿಸಿದೆ.

Bangalore suburban rail
ಸಬ್​ ಅರ್ಬನ್​​​​ ರೈಲು

ನವದೆಹಲಿ/ಬೆಂಗಳೂರು: ಕೇಂದ್ರ ಬಜೆಟ್​ನಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ರಾಜ್ಯ ರಾಜಧಾನಿ ಬೆಂಗಳೂರಿಗೆ ಬಂಪರ್​ ಕೊಡುಗೆ ನೀಡಿದ್ದಾರೆ.

ಬೆಂಗಳೂರು ಸಬ್​ ಅರ್ಬನ್​ ರೈಲುಗಳ ಆರಂಭಕ್ಕಾಗಿ ಈ ಬಜೆಟ್​ನಲ್ಲಿ ಕೇಂದ್ರ ಸರ್ಕಾರವು 3720 ಕೋಟಿ ರೂ. ಅನುದಾನ ಘೋಷಣೆ ಮಾಡಿದೆ. ಬೆಂಗಳೂರು ಸಬ್​ ಅರ್ಬನ್​ ರೈಲು ಯೋಜನೆಯು ಒಟ್ಟು 18,600 ಕೋಟಿ ರೂ.ಗಳ ಯೋಜನೆಯಾಗಿದ್ದು, ಇದಕ್ಕೆ ಕೇಂದ್ರದಿಂದ 20% ಅನುದಾನ ನೀಡುವ ಭರವಸೆಯನ್ನು ನಿರ್ಮಲಾ ಸೀತಾರಾಮನ್​ ನೀಡಿದ್ದಾರೆ. ಜೊತೆಗೆ ಈ ಯೋಜನೆಗೆ ಒಟ್ಟು ಯೋಜನೆಯ ಮೊತ್ತದ 60 ಪ್ರತಿಷತದವರೆಗಿನ ಬಾಹ್ಯ ನೆರವನ್ನು ಕೇಂದ್ರ ಸರ್ಕಾರ ನೀಡುತ್ತದೆ ಎಂದು ಸಚಿವೆ ತಿಳಿಸಿದ್ದಾರೆ. ಹೀಗಾಗಿ ಬೆಂಗಳೂರು ಉಪನಗರ ರೈಲು ಓಡಾಟಕ್ಕಾಗಿ ಹೆಚ್ಚಿನ ಅನುದಾನ ಸಿಕ್ಕಂತಾಗಿದೆ. ಅಲ್ಲದೆ ಅನೇಕ ವರ್ಷಗಳ ಬೆಂಗಳೂರಿಗರ ಕನಸು ನನಸಾಗುವ ದಿನ ಸಮೀಪಿಸಿದೆ.

ಸಬ್​ ಅರ್ಬನ್​​​​ ರೈಲು ಓಡಾಟಕ್ಕೆ ಕೇಂದ್ರದಿಂದ ಅನುದಾನ

148 ಕಿ.ಮೀ. ಬೆಂಗಳೂರು ಸಬ್​ ಅರ್ಬನ್​​​​ ರೈಲಿಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದ್ದು, ರಾಜಧಾನಿಯ ಜನತೆಗೆ ಕೇಂದ್ರ ಬಜೆಟ್​ ಖುಷಿ ಕೊಟ್ಟಿದೆ. ನಗರದ ರೈಲ್ವೆ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಡುವ ಜೊತೆಗೆ ಪ್ರವಾಸೋದ್ಯಮ ಉತ್ತೇಜನಕ್ಕೆ ಹೆಚ್ಚು ತೇಜಸ್​ ರೈಲು ಓಡಿಸಲು ಸರ್ಕಾರ ನಿರ್ಧರಿಸಿದೆ.

ಇದರೊಂದಿಗೆ ಸಾರಿಗೆ ಮೂಲಸೌಕರ್ಯಕ್ಕಾಗಿ 1.7 ಲಕ್ಷ ಕೋಟಿ ರೂ.ಗಳನ್ನು ಈ ಆರ್ಥಿಕ ವರ್ಷದಲ್ಲಿ ನೀಡಲಾಗುದು ಎಂದು ಹಣಕಾಸು ಸಚಿವೆ ತಿಳಿಸಿದ್ದಾರೆ.

Last Updated : Feb 1, 2020, 1:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.