ಬೆಂಗಳೂರು: ರಾಜ್ಯದಲ್ಲಿ ಇಂದು 1,781 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 8,69,561ಕ್ಕೆ ಏರಿದೆ.
ಕೊರೊನಾಗೆ ಇಂದು 17 ಮಂದಿ ಬಲಿಯಾಗುವ ಮೂಲಕ ಸಾವಿನ ಸಂಖ್ಯೆ 11,621ಕ್ಕೆ ತಲುಪಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ. 1.46ರಷ್ಟು ಹಾಗೂ ಸಾವಿನ ಪ್ರಮಾಣ ಶೇ. 0.95ರಷ್ಟಿದೆ.
ಇಂದು 2,181 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 8,33,169 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. 539 ಸೋಂಕಿತರು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ 24,752 ಸಕ್ರಿಯ ಪ್ರಕರಣಗಳು ಇವೆ.
ಕಳೆದ 7 ದಿನಗಳಲ್ಲಿ 30,070 ಮಂದಿ ಹೋಂ ಕ್ವಾರಂಟೈನ್ನಲ್ಲಿ ಇದ್ದಾರೆ. ಇನ್ನು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 1,50,802, ದ್ವಿತೀಯ ಸಂಪರ್ಕದಲ್ಲಿ 1,65,462 ಜನರಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾ ಏರಿಳಿತ
ಬೆಂಗಳೂರಿನಲ್ಲಿ ಕೊರೊನಾ ಏರಿಳಿತ ಕಾಣುತ್ತಿದೆ. ಒಂದೊಮ್ಮೆ ಇಳಿಕೆ ಕಂಡರೆ ಮತ್ತೊಂದು ದಿನ ಏರುತ್ತಿವೆ. ಇಂದು 1,067 ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 3,61,654ಕ್ಕೆ ಏರಿಕೆಯಾಗಿದೆ.
1254 ಸೋಂಕಿತರು ಗುಣಮುಖರಾಗಿದ್ದು, ಒಟ್ಟು 3,39,942 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು 6 ಸೋಂಕಿತರು ಬಲಿಯಾಗಿದ್ದು, ಸಾವಿನ ಸಂಖ್ಯೆ 4048ಕ್ಕೆ ತಲುಪಿದೆ. 17,663 ಸಕ್ರಿಯ ಪ್ರಕರಣಗಳಿವೆ.