ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ವಿವಿಧ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 17 ಡಿವೈಎಸ್ಪಿಗಳಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ. ಜೊತೆಗೆ ತಕ್ಷಣದಿಂದಲೇ ಸೂಚಿಸಿರುವ ಹುದ್ದೆಗೆ ಹಾಜರಾಗುವಂತೆ ಆದೇಶಿಸಲಾಗಿದೆ.
ವಿ.ಮರಿಯಪ್ಪ, ವಾಲಿ ಬಾಷಾ, ಎಂ.ವೇಣುಗೋಪಾಲ್, ಸಿ.ಮಲ್ಲಿಕ್, ಪುಟ್ಟಮಾದಯ್ಯ, ಸತೀಶ್ ಎಸ್. ಚಿಟಗುಬ್ಬಿ, ಕೆ.ಎಸ್. ಸುಂದರ್ರಾಜ್, ಎಂ.ಎಲ್ ಪುರುಷೋತ್ತಮ ಅವರು ಲೋಕಾಯುಕ್ತ ಎಸ್ಪಿಯಾಗಿ ಬಡ್ತಿ ಪಡೆದಿದ್ದಾರೆ.
ಬಿ.ಎಂ. ನಾರಾಯಣಸ್ವಾಮಿ - ಹೆಚ್ಚುವರಿ ಎಸ್ಪಿ ಕೋಲಾರ, ಎಂ.ವಿಜಯಕುಮಾರ್ - ಹೆಚ್ಚುವರಿ ಎಸ್ಪಿ ಹಾವೇರಿ, ಹೆಚ್.ಮಂಜುನಾಥ್ ಬಾಬು - ಎಸ್ಪಿ ಡಿಸಿಆರ್ಇ, ಎಸ್.ವಾಸುದೇವರಾಮ - ಎಸ್ಪಿ ರಾಜ್ಯ ಗುಪ್ತದಳ, ಪಿ.ಎ. ಪುರುಷೋತ್ತಮ - ಎಸ್ಪಿ ಲೋಕಾಯುಕ್ತ, ವಿ.ಬಿ.ಭಾಸ್ಕರ್ - ಎಸ್ಪಿ ಐ.ಎಸ್.ಡಿ, ಹೆಚ್.ಪ್ರವಿಣ್ ನಾಯಕ್ - ಎಸ್ಪಿ ರಾಜ್ಯ ಗುಪ್ತದಳ, ಅನಿಲ್ ಕುಮಾರ್ ಎಸ್ ಭೂಮರೆಡ್ಡಿ ಎಸ್ಪಿ ಡಿಸಿಆರ್ಇ ಹುದ್ದೆಗೆ ವರ್ಗಾವಣೆ ಮಾಡಿ ಆದೇಶ ನೀಡಲಾಗಿದೆ.
(4.9 ಕೆ.ಜಿ ಚಿನ್ನ ಎಗರಿಸಿದ್ದ ಖಾಕಿ: ಖೆಡ್ಡಾಕ್ಕೆ ಬಿದ್ದ ಆರೋಪಿ, 14 ದಿನ ಸಿಐಡಿ ಕಸ್ಟಡಿ)