ETV Bharat / city

ಅಮೃತ ನಗರೋತ್ಥಾನ: 1,519 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ

ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ 1519.43 ಕೋಟಿ ರೂ ವೆಚ್ಚದಲ್ಲಿ ರಾಜ್ಯದ 15 ಜಿಲ್ಲೆಗಳಲ್ಲಿ ನಡೆಸಲಾಗುವ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ.

1519-crore-rupees-city-development-scheme-approved-by-govt
ಅಮೃತ ನಗರೋತ್ಥಾನ : 1519 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ
author img

By

Published : May 5, 2022, 6:47 AM IST

ಬೆಂಗಳೂರು: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ 1,519.43 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೈಗೊಳ್ಳಲಿರುವ ವಿವಿಧ ಕಾಮಗಾರಿಗಳ ಕ್ರಿಯಾ ಯೋಜನೆಗಳಿಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ. ರಾಜ್ಯದ 15 ಜಿಲ್ಲೆಗಳ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 4ನೇ ಹಂತದ ಯೋಜನೆಗಳ 19ನೇ ರಾಜ್ಯ ಮಟ್ಟದ ಸಮಿತಿ ಸಭೆ ವಿಧಾನಸೌಧದಲ್ಲಿ ನಡೆಯಿತು. ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜು ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಬೆಂಗಳೂರು ಗ್ರಾಮಾಂತರ, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ(ಚಿಕ್ಕಬಳ್ಳಾಪುರ ನಗರಸಭೆ ಹೊರತುಪಡಿಸಿ), ದಕ್ಷಿಣ ಕನ್ನಡ(ಉಳ್ಳಾಲ ನಗರಸಭೆ, ಸೋಮೇಶ್ವರ ಮತ್ತು ಕೋಟೆಕಾರು ಪಟ್ಟಣ ಪಂಚಾಯಿತಿ ಹೊರತುಪಡಿಸಿ), ಧಾರವಾಡ, ಗದಗ (ಗದಗ-ಬೆಟಗೇರಿ ನಗರಸಭೆ ಹೊರತುಪಡಿಸಿ), ಕೊಪ್ಪಳ, ಹಾವೇರಿ(ಶಿಗ್ಗಾಂವ, ಬಂಕಾಪುರ, ಸವಣೂರು ಪುರಸಭೆ ಹೊರತುಪಡಿಸಿ), ರಾಯಚೂರು(ಮಾನ್ವಿ, ಜಾಲಹಳ್ಳಿ ಪುರಸಭೆ ಮತ್ತು ಕವಿತಾಳ ಪಟ್ಟಣ ಪಂಚಾತಿಯಿ ಹೊರತುಪಡಿಸಿ), ಯಾದಗಿರಿ, ಬೀದರ್, ಶಿವಮೊಗ್ಗ, ಬಾಗಲಕೋಟೆ, ಉತ್ತರ ಕನ್ನಡ ಜಿಲ್ಲೆಗಳ ನಗರ ಸ್ಥಳೀಯ ಸಂಸ್ಥೆಗಳಲ್ಲಿ 2022-23 ರಿಂದ 2024-25ನೇ ಸಾಲಿನ ಆರ್ಥಿಕ ವರ್ಷದವರೆಗೆ ಈ ಯೋಜನೆಯಡಿ ಕಾಮಗಾರಿಗಳನ್ನು ನಡೆಸಲಾಗುತ್ತದೆ.

ಜಿಲ್ಲಾವಾರು ಅನುದಾನ ಮೀಸಲು: ಬೆಂಗಳೂರು ಗ್ರಾಮಾಂತರ ಜಿಲ್ಲೆ: 80.34 ಕೋಟಿ ರೂಪಾಯಿಗಳು, ಮಂಡ್ಯ ಜಿಲ್ಲೆ: 89.25 ಕೋಟಿ ರೂಪಾಯಿಗಳು, ಕೋಲಾರ ಜಿಲ್ಲೆ: 123.25ಕೋಟಿ ರೂಪಾಯಿಗಳು, ಚಿಕ್ಕಬಳ್ಳಾಪುರ ಜಿಲ್ಲೆ(ಚಿಕ್ಕಬಳ್ಳಾಪುರ ನಗರಸಭೆ ಹೊರತುಪಡಿಸಿ): 84.82 ಕೋಟಿ ರೂ, ದಕ್ಷಿಣ ಕನ್ನಡ ಜಿಲ್ಲೆ(ಉಳ್ಳಾಲ ನಗರಸಭೆ, ಸೋಮೇಶ್ವರ ಮತ್ತು ಕೋಟೆಕಾರು ಪಟ್ಟಣ ಪಂಚಾಯಿತಿ ಹೊರತುಪಡಿಸಿ): 72.25 ಕೋಟಿ ರೂ, ಧಾರವಾಡ ಜಿಲ್ಲೆ: 29.75 ಕೋಟಿ ರೂ, ಗದಗ ಜಿಲ್ಲೆ( ಗದಗ-ಬೆಟಗೇರಿ ನಗರಸಭೆ ಹೊರತುಪಡಿಸಿ): 55.25 ಕೋಟಿ ರೂ, ಕೊಪ್ಪಳ: 106.25 ಕೋಟಿ ರೂ, ಹಾವೇರಿ ಜಿಲ್ಲೆ(ಶಿಗ್ಗಾಂವ, ಬಂಕಾಪುರ, ಸವಣೂರು ಪುರಸಭೆ ಹೊರತುಪಡಿಸಿ): 97.75 ಕೋಟಿ ರೂ, ರಾಯಚೂರು ಜಿಲ್ಲೆ(ಮಾನ್ವಿ, ಜಾಲಹಳ್ಳಿ ಪುರಸಭೆ ಮತ್ತು ಕವಿತಾಳ ಪಟ್ಟಣ ಪಂಚಾತಿಯಿ ಹೊರತುಪಡಿಸಿ): 110.50 ಕೋಟಿ ರೂ, ಯಾದಗಿರಿ ಜಿಲ್ಲೆ: 114.75 ಕೋಟಿ ರೂ, ಬೀದರ್ ಜಿಲ್ಲೆ: 97.75 ಕೋಟಿ ರೂ, ಶಿವಮೊಗ್ಗ ಜಿಲ್ಲೆ: 106.25 ಕೋಟಿ ರೂ, ಬಾಗಲಕೋಟೆ ಜಿಲ್ಲೆ: 208.25 ಕೋಟಿ ರೂ, ಉತ್ತರ ಕನ್ನಡ ಜಿಲ್ಲೆ: 143.02 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ಸಮಿತಿ ಒಪ್ಪಿಗೆ ನೀಡಿದೆ.

ರಾಜ್ಯದ 302 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ -4ನೇ ಹಂತದ ಯೋಜನೆಯಡಿ 3885 ಕೋಟಿ ರೂ ಮೊತ್ತದ ಕ್ರಿಯಾ ಯೋಜನೆಗೆ ರಾಜ್ಯ ಸಚಿವ ಸಂಪುಟ ಕಳೆದ ಜನವರಿಯಲ್ಲಿ ಅನುಮೋದನೆ ನೀಡಿತ್ತು. ಅದಕ್ಕೆ ಪೂರಕವಾಗಿ ಈ ಬಾರಿಯ 15 ಜಿಲ್ಲೆಗಳು ಸೇರಿದಂತೆ ಈ ವರೆಗೆ 25 ಜಿಲ್ಲೆಗಳ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ 2367.57 ಕೋಟಿ ರೂಪಾಯಿಗಳ ಕ್ರಿಯಾ ಯೋಜನೆಗಳಿಗೆ ಅನುಮೋದನೆ ನೀಡಿದಂತಾಗಿದೆ. ಸಭೆಯಲ್ಲಿ ನಗರಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಅಜಯ್ ನಾಗಭೂಷಣ್, ಪೌರಾಡಳಿತ ಇಲಾಖೆ ನಿರ್ದೇಶಕರಾದ ಅರ್ಚನಾ, ಮುಖ್ಯ ಎಂಜಿನಿಯರ್ ಸತ್ಯನಾರಾಯಣ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಬಗರ್​ಹುಕುಂ ಸಾಗುವಳಿ ಭೂಮಿ ರೈತರ ಒಡೆತನಕ್ಕೆ: ಸಚಿವ ಆರ್​. ಅಶೋಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.