ದೇವನಹಳ್ಳಿ: ಬೆಳ್ಳಂಬೆಳಗ್ಗೆ ಬೆಂಗಳೂರಿನಿಂದ ಬೇರೆ ರಾಜ್ಯಗಳಿಗೆ ತೆರಳಲು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಹಲವು ಮಂದಿ ಪ್ರಯಾಣಿಕರು ಆಗಮಿಸಿದ್ದು, ವಿಮಾನ ಹಾರಾಟ ರದ್ದಾದ ಹಿನ್ನೆಲೆ ಕಂಗಾಲಾಗಿದ್ದಾರೆ.
ಕೆಐಎಎಲ್ನಿಂದ ವಿವಿಧ ರಾಜ್ಯಗಳಿಗೆ ತೆರಳಬೇಕಿದ್ದ 10 ವಿಮಾನಗಳು ರದ್ದಾಗಿವೆ. ಮುಂಬೈ, ಹೈದರಾಬಾದ್, ಬೆಳಗಾವಿ, ಚೆನ್ನೈ, ಮಂಗಳೂರು, ಅಹಮದಾಬಾದ್ ಮತ್ತು ದೆಹಲಿಗೆ ಹೋಗಬೇಕಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ. ಬೆಳಗ್ಗೆ 7ರಿಂದ ಮಧ್ಯಾಹ್ನ 12 ಗಂಟೆ ಒಳಗೆ ಕೆಐಎಎಲ್ನಿಂದ ತೆರಳಬೇಕಿದ್ದ ವಿಮಾನಗಳನ್ನು ತಾಂತ್ರಿಕ ಕಾರಣದ ಹಿನ್ನೆಲೆ ಕೊನೆ ಕ್ಷಣದಲ್ಲಿ ರದ್ದು ಮಾಡಲಾಗಿದೆ. ಈ ಹಿನ್ನೆಲೆ ಪ್ರಯಾಣಿಕರು ಏರ್ಪೋರ್ಟ್ನಲ್ಲಿಯೇ ಕಾಯುತ್ತಾ ಕುಳಿತಿರುವ ದೃಶ್ಯ ಕಂಡು ಬಂತು.