ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಳೇಕೋಟೆ ಗ್ರಾಮದ ಬಳಿ ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ ಆದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದ್ದು, ಮರದ ಕೆಳಗಡೆ ತರಕಾರಿ ಮಾರಾಟ ಮಾರುತ್ತಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಇದನ್ನೂ ಓದಿ: ಲಾರಿ-ಬೈಕ್ ನಡುವೆ ಭೀಕರ ಅಪಘಾತ: ತಲೆ ಮೇಲೆ ಲಾರಿ ಹರಿದು ಸವಾರ ಸಾವು
ಹಳೇಕೋಟೆ ಗ್ರಾಮದ ನಿವಾಸಿ ಕುರುಬರ ಶಾಂತಮ್ಮ (42) ಮೃತ ಮಹಿಳೆ. ಕಾರಿನ ಚಾಲಕ ಗಾದಿಲಿಂಗ ಸೇರಿದಂತೆ ತರಕಾರಿ ಖರೀದಿಗೆ ಆಗಮಿಸಿದವರಿಗೂ ಗಾಯಗಳಾಗಿದ್ದು, ಸಿರುಗುಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಿಪಿಐ ಕಾಳಿಕೃಷ್ಣ, ಪಿಎಸ್ಐ ಶಿವಕುಮಾರ ನಾಯ್ಕ ನೇತೃತ್ವದ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.