ETV Bharat / city

ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು - Shivapura Lake

ಸಂಜೆ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನಡು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶಿವಪುರ ಕೆರೆಯಲ್ಲಿ ನಡೆದಿದೆ.

Two youth drowned in lake
ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರ ಸಾವು
author img

By

Published : Jun 6, 2022, 6:47 AM IST

ಬಳ್ಳಾರಿ : ಜಿಲ್ಲೆಯ ಸಂಡೂರು ಪಟ್ಟಣದ ಹೊರವಲಯದ ಶಿವಪುರ ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ದುರ್ಮರಣ ಹೊಂದಿರುವ ಘಟನೆ ಭಾನುವಾರ ನಡೆದಿದೆ. ಸಂಡೂರಿನ ದತ್ತಾತ್ರೇಯ (27) ಹಾಗೂ ನಾಗರಾಜ್ (26) ಮೃತ ದುರ್ದೈವಿಗಳು. ಅವರು ಭಾನುವಾರ ಸಂಜೆ ಕೆರೆಯಲ್ಲಿ ಈಜಲು ತೆರಳಿದ್ದ ವೇಳೆ ನಡುನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸಂಡೂರಿನ ಅಗ್ನಿಶಾಮಕದಳ, ಪೊಲೀಸರು ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಯ ನಂತರ ಕುಟುಂಬದವರಿಗೆ ಒಪ್ಪಿಸಲಾಗಿದೆ. ಈ ಕುರಿತು ಸಂಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಬಾಲಕನ ಮೇಲೆರಗಿದ ಜೆಸಿಬಿ: ಕೊಕ್ಕೆಯಿಂದ ಮೃತದೇಹ ಪಕ್ಕಕ್ಕೆ ಸರಿಸಿದ ಚಾಲಕನಿಗೆ ಗೂಸಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.