ETV Bharat / city

ಮಹಾನಗರ ಪಾಲಿಕೆ ಚುನಾವಣೆ ವಿಚಾರವಾಗಿ ಗಲಾಟೆ: ಇಬ್ಬರಿಗೆ ಗಾಯ

ಕಾಂಗ್ರೆಸ್ ನ ಮುಖಂಡರು ಮತ್ತು ಸದಸ್ಯರು ರೇಡಿಯೋ ಪಾರ್ಕ್​ನ ವೃತ್ತದಲ್ಲಿ ಪಟಾಕಿ ಸಿಡಿಸಿ, ನಾವು ಜಯಗಳಿಸಿದ್ದೇವೆ ಎಂದು ಕೂಗಾಡಿದ್ದಾರೆ. ಇದು ಮಾತಿನ ಚಕಮಕಿಗೆ ಕಾರಣವಾಗಿ ಅಂತಿಮವಾಗಿ ಗಲಾಟೆಯಲ್ಲಿ ಮುಗಿದಿದೆ.

bellary
bellary
author img

By

Published : Apr 27, 2021, 10:10 PM IST

Updated : Apr 27, 2021, 10:51 PM IST

ಬಳ್ಳಾರಿ: ಮಹಾನಗರ ಪಾಲಿಕೆ ಚುನಾವಣೆ ವಿಚಾರವಾಗಿ ಎರಡು ಪಕ್ಷಗಳ ನಡುವೆ ಗಲಾಟೆ ನಡೆದು ಇಬ್ಬರಿಗೆ ಗಾಯವಾಗಿರುವ ಘಟನೆ ರೇಡಿಯೋ ಪಾರ್ಕ್ ವೃತ್ತದ ಬಳಿ ನಡೆದಿದೆ.

ರೇಡಿಯೋ ಪಾರ್ಕ್​ನಲ್ಲಿ ಪಟಾಕಿ ಸಿಡಿಸಿದಕ್ಕೆ ಎರಡು ಪಕ್ಷಗಳ ನಡುವೆ ಗಲಾಟೆ ನಡೆದಿದ್ದು, ಬಿಜೆಪಿಯ ತರುಣ್ (18) ಮತ್ತು ಅರವಿಂದ್ (30) ಇಬ್ಬರಿಗೆ ಮುಖಕ್ಕೆ ಮತ್ತು ಕೈಕಾಲುಗಳಿಗೆ ಹೊಡೆದಿದ್ದಾರೆ ಎಂದು ದೂರಲಾಗಿದೆ.

ಕಾಂಗ್ರೆಸ್​​​ನ ಮುಖಂಡರು ಮತ್ತು ಸದಸ್ಯರು ರೇಡಿಯೋ ಪಾರ್ಕ್​ನ ವೃತ್ತದಲ್ಲಿ ಪಟಾಕಿ ಸಿಡಿಸಿ, ನಾವು ಜಯಗಳಿಸಿದ್ದೇವೆ ಎಂದು ಕೂಗಾಡಿದ್ದಾರೆ. ಇದು ಮಾತಿಗೆ ಬೆಳೆದು ಗಲಾಟೆಯಾಗಿದೆ ಎಂದು ಸ್ಥಳದಲ್ಲಿದ್ದವರು ಮಾಹಿತಿ ನೀಡಿದ್ದಾರೆ.

ಚುನಾವಣೆ ವಿಚಾರವಾಗಿ ಎರಡು ಪಕ್ಷಗಳ ನಡುವೆ ಗಲಾಟೆ

ಗಲಾಟೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಆಗಮಿಸಿ ಲಾಟಿ ಬೀಸಿದ್ದಾರೆ. ಈ ಸಮಯದಲ್ಲಿ ಮಾಜಿ ಎ.ಪಿ.ಎಂ.ಸಿ ಅಧ್ಯಕ್ಷ ನಾಗರಾಜ್ ಮಾತನಾಡಿ, ಈ ಗಲಾಟೆಯಲ್ಲಿ ಕಾಂಗ್ರೆಸ್​ನ ಅಕ್ಬರ್ ಮತ್ತು ಅವರ ಅಕ್ಕನ ಮಕ್ಕಳು, ಇಕ್ಬಾಲ್ ಮತ್ತು ಅಬ್ಬು , ಜಾಫರ್ ಮತ್ತು ಎಂ.ಎಲ್.ಎ ಅವರ ಕೈವಾಡವಿದೆ ಎಂದು ಆರೋಪಿಸಿದರು. ಇನ್ನು ಸ್ಥಳದಲ್ಲಿ ಸಿಪಿಐ ಚಂದನ್ ಗೋಪಾಲ, ವಾಸು ಕುಮಾರ್ ಮತ್ತು ಡಿ.ಎ.ಆರ್ ಪೊಲೀಸ್ ಸಿಬ್ಬಂದಿಗಳು ಮತ್ತು ಕೌಲ್​ ಬಜಾರ್ ಠಾಣೆಯ ಪೊಲೀಸರು ಹಾಜರಿದ್ದರು.

ಇದನ್ನೂ ಓದಿ: ರಾಜ್ಯದ ಕೋವಿಡ್ ಪರಿಸ್ಥಿತಿ ಸಂಬಂಧ ಮಹತ್ವದ ವಿಚಾರಗಳ ಚರ್ಚೆ ನಡೆಸಿದ ಸುರ್ಜೆವಾಲಾ - ಡಿಕೆಶಿ

Last Updated : Apr 27, 2021, 10:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.