ಬಳ್ಳಾರಿ: ಮೆಣಸಿನಕಾಯಿ ಸೇರಿದಂತೆ ಕೃಷಿ ಬೆಳೆಗಳಿಗೆ ಸಿಂಪಡಿಸಲು ಕೊಂಡೊಯ್ಯುತ್ತಿದ್ದ ಹತ್ತಾರು ಲೀಟರ್ನಷ್ಟು ನಕಲಿ ಕ್ರಿಮಿನಾಶಕ ಔಷಧಿಯನ್ನು ಕೃಷಿ ಇಲಾಖೆ ಜಪ್ತಿ ಮಾಡಿಕೊಂಡಿದ್ದು, ಈ ಕುರಿತು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಳ್ಳಾರಿಯ ದೇವಿನಗರದ ನಿವಾಸಿ ನೆಟ್ಟಕಲ್ಲಪ್ಪ ಎಂಬವರಿಂದ 20 ಲೀಟರ್ನಷ್ಟು ಕ್ರಿಮಿನಾಶಕ ವಶಪಡಿಸಿಕೊಳ್ಳಲಾಗಿದೆ. ನೆಟ್ಟಕಲ್ಲಪ್ಪ ಅವರು ಲೀಟರ್ ಬಾಟಲ್ಗೆ ಕೇವಲ 100 ರೂಪಾಯಿಗೆ ಮಾರಾಟ ಮಾಡುತ್ತಿದ್ದರು ಎಂಬ ಆರೋಪ ಕೇಳಿ ಬಂದ ಪರಿಣಾಮ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
1,550 ಬಾಯರ್ ಪೇಮ್ ಹುಳು, ಡೀ ನೋಷಿಲ್, 75 ಎಂಲ್ ಟ್ರೇಸರ್, 1400 ಡೆಲಿಗೇಟ್, 1975 ಹುಳು ಮುದುರು, ಹುಲ್ಲಿನ ಮದ್ದು 350, ಸೆಕ್ಷನ್ ಮೆಕ್ಕೆಜೋಳ ಎಂಬ ಕ್ರಿಮಿನಾಶಕ ಔಷಧಿಯನ್ನು ಜಪ್ತಿಗೊಳಿಸಲಾಗಿದೆ.
ಈ ನಕಲಿ ಕ್ರಿಮಿನಾಶಕ ಔಷಧಿಗಳನ್ನು ವಿಧಿವಿಧಾನ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುವುದು. ವರದಿಯನ್ನಾಧರಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೋರ್ಟಿವೋ ಅಗ್ರಿ ಸೈನ್ಸ್ ಕಂಪನಿಯ ಏರಿಯಾ ಮ್ಯಾನೇಜರ್ ಪ್ರಕಾಶ ಬಂಗಾರಪ್ಪ ದೂರಿನಲ್ಲಿ ತಿಳಿಸಿದ್ದಾರೆ.