ಬಳ್ಳಾರಿ: ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳ ಸಂಘದ ಅಧ್ಯಕ್ಷ ಶ್ರೀನಿವಾಸ ಪಾಟೀಲ್, ಇಂದು ಗಣಿನಾಡಿನ ಅಧಿದೇವತೆ ಶ್ರೀ ಕನಕ ದುರ್ಗಮ್ಮಗೆ ವಿಶೇಷ ಪೂಜೆ ಮಾಡಿಸಿದರು.
ತಮ್ಮ ವಿಶೇಷ ಪೂಜೆ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಶ್ರೀನಿವಾಸ್ ಪಾಟೀಲ್, ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಸ್ಥಿರವಾಗಿ ಇರಲಿ ಎನ್ನುವ ಉದ್ದೇಶದಿಂದ ನಗರದ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ದೇವಿಗೆ ಕುಂಕುಮ ಅರ್ಚನೆ, ಎಲೆ ಪೂಜೆ, ಅಭಿಷೇಕ ಮಾಡಿಸಿರುವುದಾಗಿ ತಿಳಿಸಿದರು.
ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಬಹುಮತದಿಂದ ಗೆಲ್ಲಲಿ ಮತ್ತು ಮುಂದಿನ ಮೂರೂವರೆ ವರ್ಷಗಳ ಕಾಲ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸದೃಢವಾಗಿ ರಾಜ್ಯದ ಅಭಿವೃದ್ಧಿಯ ದೃಷ್ಟಿಯಿಂದ ಮುನ್ನಡೆಯಲಿ ಎನ್ನುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಮಾಡಿದ್ದೇವೆ ಎಂದು ತಿಳಿಸಿದರು.
ಈ ವೇಳೆ ಶ್ರೀನಿವಾಸ್ ಪಾಟೀಲ್, ಬಿಜೆಪಿ ಮುಖಂಡರಾದ ರಾಮಚಂದ್ರಯ್ಯ, ಸುಮರೆಡ್ಡಿ, ಪಲ್ಲೇದ ದೊಡ್ಡಪ್ಪ, ಜನಾರ್ದನ, ಗೋವರ್ಧನ, ಶಿವಕುಮಾರ್, ಜಡೇಶ್ ಇದ್ದರು.