ಬಳ್ಳಾರಿ: ಹಿಂದೂಗಳನ್ನು ಮುಗಿಸೋಕೆ ಒವೈಸಿ ಸಂಘಟನೆಯವರು ಹದಿನೈದು ನಿಮಿಷ ಕೊಡಿ ಅಂತಾರೆ. ಆದ್ರೆ ನಮಗೆ ಆ ಹದಿನೈದು ನಿಮಿಷ ಕೂಡಾನೂ ಬ್ಯಾಡ. ಐದು ನಿಮಿಷ ಕೊಟ್ರೆ ಸಾಕು ಎಂದು ಬಳ್ಳಾರಿ ನಗರ ಶಾಸಕ ಸೋಮಶೇಖರ ರೆಡ್ಡಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಾಪೂಜಿ ನಗರದಲ್ಲಿಂದು ಮಹಾಶಿವರಾತ್ರಿ ರಥೋತ್ಸವದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮೂಲ್ಯ ಸೇರಿದಂತೆ ದೇಶದ್ರೋಹಿ ಘೋಷಣೆಯನ್ನು ಕೂಗೋ ಎಲ್ಲರನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿ ವಿಮಾನದಲ್ಲಿ ಹಾಕಿಕೊಂಡು ಕರಾಚಿಯಲ್ಲಿ ಬಿಟ್ಟು ಬರಬೇಕು. ಅವರು ಭಾರತ ಮಾತಾಕೀ ಜೈ ಎನ್ನುವವರೆಗೆ ಬಿಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಮೂಲ್ಯ ಅವರಿಗೆ ದೇಶದ್ರೋಹಿಗಳು ಪ್ರಚೋದನೆ ನೀಡುತ್ತಿದ್ದಾರೆ. ಹಾಗಾಗಿ, ದೇಶದ್ರೋಹಿ ಘೋಷಣೆ ಕೂಗಿದ್ದಾಳೆ. ಈ ದೇಶದಲ್ಲಿ ದೇಶದ್ರೋಹಿಗಳಿರಬಾರದು. ದೇಶಪ್ರೇಮಿಗಳೇ ಇರಬೇಕು ಎಂದರು.