ಹೊಸಪೇಟೆ: ದುಡ್ಡುಕೊಟ್ಟು ಮತ ಪಡೆಯುವವರಿಗೆ ಜನರ ಸಮಸ್ಯೆಗಳು ಅರಿವಾಗುವುದಿಲ್ಲ. ಅಂಥವರ ವಿರುದ್ಧ ವಿಜಯನಗರ ಕ್ಷೇತ್ರದಲ್ಲಿ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹೆದರಿಕೆಯಾಗುತ್ತದೆ ಎಂದು ಮಾಜಿ ಶಾಸಕ ಎಂ.ಎನ್.ನಬಿ ಹೇಳಿದರು.
ರೈನ್ಬೋ ಭವನದಲ್ಲಿ ನಡೆದ ಜೆಡಿಎಸ್ ತಾಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮತಗಳನ್ನು ದುಡ್ಡಿಗೆ ಮಾರಾಟ ಮಾಡಿಕೊಳ್ಳಬೇಡಿ. ನಿಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳುವವರಿಗೆ ಹಾಕಬೇಕು ಎಂದು ಮನವಿ ಮಾಡಿದರು.
ನಾವು-ನೀವೆಲ್ಲಾ ಅರಮನೆಯಲ್ಲಿ ಬೆಳೆದವರಲ್ಲ. ಸರಳ ಜೀವನ ನಡೆಸುತ್ತಿದ್ದೇವೆ. ಆದ್ದರಿಂದ ಹೊಸಪೇಟೆ ಅಭಿವೃದ್ಧಿಗೆ ಹಾಗೂ ಜನರ ಸೇವೆ ಸಲ್ಲಿಸಲು ಒಂದು ಅವಕಾಶ ನೀಡಿ ಎಂದು ಮನವಿ ಮಾಡಿದರು.