ಹೊಸಪೇಟೆ: ತಾಲೂಕಿನ ಅನೇಕ ರೈತರು ಕಬ್ಬನ್ನು ಬೆಳೆಯುತ್ತಿದ್ದು, ಮಾರಾಟ ಮಾಡಲು ಯಾವುದೇ ಸಕ್ಕರೆ ಕಾರ್ಖಾನೆಗಳಿಲ್ಲ. ಇದ್ದ ಕಾರ್ಖಾನೆಯನ್ನು ಸಹ ಮುಚ್ಚಲಾಗಿದೆ. ಕೂಡಲೇ ಕಬ್ಬು ಕಾರ್ಖಾನೆ ಮಂಜೂರು ಮಾಡಿ ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಕಾಳಿದಾಸ ಆಗ್ರಹಿಸಿದ್ದಾರೆ.
ನಗರದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸಪೇಟೆ ತಾಲೂಕಿನ ಮತ್ತು ಇತರೆ ತಾಲೂಕಿನ ರೈತರು ಕಬ್ಬನ್ನು ಅತಿ ಹೆಚ್ಚಾಗಿ ಬೆಳೆಯುತ್ತಿದ್ದಾರೆ. ಅವರಿಗೆ ಬೆಂಬಲ ಬೆಲೆಯನ್ನು ನಿಗದಿ ಮಾಡಿ, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಬೇಕು. ವಿಜಯನಗರ ಜಿಲ್ಲಾ ಕೇಂದ್ರವನ್ನಾಗಿ ಮಾಡಬೇಕು ಎಂದು ಹೇಳಿದರು.
ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಬೆಂಬಲ ನೀಡುತ್ತಿರುವವರನ್ನು ಟಿಕೀಸುವುದು ಸರಿಯಲ್ಲ. ಆಡಳಿತದ ದೃಷ್ಟಿಯಿಂದ ಜಿಲ್ಲೆಯನ್ನಾಗಿ ಮಾಡಿ ಎಂದು ಜನತೆ ಕೇಳುತ್ತಿದ್ದಾರೆ. ಆದರೆ ಬಳ್ಳಾರಿಯ ಜನನಾಯಕರು ಬೇಡ ಎನ್ನುವುದು ಎಷ್ಟು ಸರಿ. ಈ ಕುರಿತಂತೆ ಅ. 24 ರಂದು ವಿಜಯನಗರ ಸಾಮ್ರಾಜ್ಯದ ಹಂಪೆಯಿಂದ ಹೊಸಪೇಟೆಯವರಗೆ ಪಾದಯಾತ್ರೆ ಮಾಡುತ್ತೇವೆ ಎಂದು ತಿಳಿಸಿದರು.