ETV Bharat / city

ಮನೆಯಲ್ಲಿಯೇ ರಂಜಾನ್​ ಆಚರಿಸಿ..ಮುಸ್ಲಿಂ ಬಾಂಧವರಲ್ಲಿ ಡಿವೈಎಸ್ಪಿ ಕೆ.ರಾಮರಾವ್ ಮನವಿ - ಬಳ್ಳಾರಿ ಸುದ್ದಿ

ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ಸಂಬಂಧ ಕರೆದಿದ್ದ ಶಾಂತಿ ಸಭೆಯಲ್ಲಿ ಬಳ್ಳಾರಿ ಡಿವೈಎಸ್ಪಿ ಕೆ.ರಾಮರಾವ್ ಮಾತನಾಡಿ, ರಂಜಾ‌ನ್ ಆಚರಣೆಯನ್ನ ಮನೆಯಲ್ಲಿಯೇ ಆಚರಣೆ ಮಾಡಿ ಎಂದು ಮನವಿ ಮಾಡಿದ್ದಾರೆ.

Ramadan Celebration at Home..DYSP K. Ramarao appeals to Muslim
ರಂಜಾನ್​ ಹಬ್ಬ ಮನೆಯಲ್ಲಿಯೇ ಆಚರಿಸಿ..ಮುಸ್ಲಿಂ ಬಾಂಧವರಲ್ಲಿ ಡಿವೈಎಸ್ಪಿ ಕೆ.ರಾಮರಾವ್ ಮನವಿ
author img

By

Published : Apr 22, 2020, 3:34 PM IST

ಬಳ್ಳಾರಿ: ರಂಜಾ‌ನ್ ಆಚರಣೆಯನ್ನ ಮನೆಯಲ್ಲಿಯೇ ಆಚರಿಸಿ ಎಂದು ಡಿವೈಎಸ್ಪಿ ಕೆ.ರಾಮರಾವ್ ಮುಸ್ಲಿಂ ಬಾಂಧವರಲ್ಲಿ ಮನವಿ ಮಾಡಿದ್ದಾರೆ.

ರಂಜಾನ್​ ಹಬ್ಬ ಮನೆಯಲ್ಲಿಯೇ ಆಚರಿಸಿ..ಮುಸ್ಲಿಂ ಬಾಂಧವರಲ್ಲಿ ಡಿವೈಎಸ್ಪಿ ಕೆ.ರಾಮರಾವ್ ಮನವಿ

ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ಸಂಬಂಧ ಕರೆದಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಭೀತಿ ಹಿನ್ನಲೆ,ಈ ಬಾರಿ ರಂಜಾನ್ ಆಚರಣೆ ವೇಳೆ ಸಾಮೂಹಿಕ ಪ್ರಾರ್ಥನೆ ಮತ್ತು ಮಸೀದಿಗಳಲ್ಲಿ ನಮಾಜ್​ಗೆ ಅವಕಾಶವಿಲ್ಲ. ಅವರವರ ಮನೆಗಳಲ್ಲೇ ಹಬ್ಬ ಆಚರಣೆ ಮಾಡಿ,ಸರ್ಕಾರ ಜಾರಿ ಮಾಡಿರುವ ಕಾನೂನುಗಳನ್ನ ಕಟ್ಟುನಿಟ್ಟಾಗಿ ಪಾಲಿಸಲು ಮುಂದಾಗಬೇಕು. ಕೊರೊನಾ ವೈರಸ್ ಸದ್ಯ ಅಪಾಯಕಾರಿಯಾಗಿದೆ. ಸದ್ಯ ಯಾವುದೇ ರೀತಿಯ ಬಹಿರಂಗ ಆಚರಣೆ ಹಾಗೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಈ ಸಂಬಂಧ ಸರ್ಕಾರದಿಂದ ಬರುವ ಮಾರ್ಗಸೂಚಿಗಳನ್ನು ತಮ್ಮ ಗಮನಕ್ಕೆ ತರಲಾಗುತ್ತದೆ ಎಂದರು.

ಬಳ್ಳಾರಿ ತಹಶೀಲ್ದಾರ್ ನಾಗರಾಜ್ ಮಾತನಾಡಿ, ಕೊರೊನಾ ವೈರಸ್ ಒಂದು ಸಾಂಕ್ರಾಮಿಕ ರೋಗ. ಹೀಗಾಗಿ ರಂಜಾನ್ ಹಬ್ಬವನ್ನ ತಮ್ಮ ಮನೆಗಳಲ್ಲಿ ಆಚರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಹೊರ ಬರಬೇಡಿ. ರೋಗವನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಓಡಿಸಬೇಕೇ ಹೊರತು, ಬೇರೆ ಯಾವುದು ಔಷಧಿ ಇಲ್ಲ. ತಮ್ಮ ಕುಟುಂಬದ ಉಳಿವಿಗಾಗಿ ಸರ್ಕಾರದ ನಿಯಮ ಪಾಲನೆ ಮಾಡಿ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.