ETV Bharat / city

ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಸಚಿವ ಆನಂದಸಿಂಗ್​ಗೆ ಹೋರಾಟಗಾರರ ಮುತ್ತಿಗೆ

ಯಾವುದೇ ಕಾರಣಕ್ಕೂ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡದಂತೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟಗಾರರು, ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಒತ್ತಾಯಿಸಿದ್ದಾರೆ.

protesters-laid-siege-to-minister-anand-singh-in-protest-of-the-division-of-bellary-districtprotesters-laid-siege-to-minister-anand-singh-in-protest-of-the-division-of-bellary-district
ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಸಚಿವ ಆನಂದಸಿಂಗ್​ರನ್ನ ಮುತ್ತಿಗೆ ಹಾಕಿದ ಹೋರಾಟಗಾರರು
author img

By

Published : Dec 23, 2020, 1:43 PM IST

ಬಳ್ಳಾರಿ: ಜಿಲ್ಲೆಯ ವಿಭಜನೆ ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟಗಾರರು ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರಿಗೆ ಮುತ್ತಿಗೆ ಹಾಕಿ, ಯಾವುದೇ ಕಾರಣಕ್ಕೂ ಜಿಲ್ಲೆಯ ವಿಭಜನೆ ಮಾಡದಂತೆ ಆಗ್ರಹಿಸಿದ್ದಾರೆ.

ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಸಚಿವ ಆನಂದಸಿಂಗ್​ಗೆ ಮುತ್ತಿಗೆ ಹಾಕಿದ ಹೋರಾಟಗಾರರು

ಬಳ್ಳಾರಿ ಜಿಲ್ಲೆ ಗಡಿ ಪ್ರದೇಶದಲ್ಲಿದ್ದು, ಮುಂದೊಂದು ದಿನ ಬೆಳಗಾವಿಯ ಹಾಗೆ ಆಗುವುದಕ್ಕೆ ಅವಕಾಶ ಮಾಡಿಕೊಡಬೇಡಿ. ಜಿಲ್ಲೆಯನ್ನ ಒಡೆಯಬೇಡಿ. ತಮ್ಮಿಂದ ಮಾತ್ರ ಜಿಲ್ಲೆಯ ವಿಭಜನೆ‌ ಆಗುವುದನ್ನು ತಪ್ಪಿಸಲು ಸಾಧ್ಯ. ಸಾಧ್ಯವಾದರೇ ತಮ್ಮ ಕಾಲು ಹಿಡಿಯುತ್ತೇವೆ. ಬೇಕಾದರೆ ವಿಜಯ ನಗರ ಜಿಲ್ಲೆ ಅಂತ ನಾಮಕರಣ ಮಾಡಿ ಎಂದು ಒತ್ತಾಯಿಸಿದರು.

ಓದಿ: ನ್ಯೂ ಇಯರ್​ ಪಾರ್ಟಿ ಇರಲ್ಲ: ಇಂದಿನಿಂದ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ

ಬಳಿಕ ಮಾತನಾಡಿದ ಸಚಿವ ಆನಂದ್ ಸಿಂಗ್ , ಪಶ್ಚಿಮ ತಾಲೂಕುಗಳ ಅಹವಾಲು ಕೂಡ ಆಲಿಸುತ್ತೇವೆ. ಆ ಕಡೆಯಿಂದ‌ ಜಿಲ್ಲಾ ಕೇಂದ್ರವಾಗಿರುವ ಬಳ್ಳಾರಿಗೆ ಆಡಳಿತಾತ್ಮಕವಾಗಿ ಕೆಲಸ ಮಾಡಿಕೊಳ್ಳುವುದಕ್ಕೆ ಬರಲು‌ ಕಷ್ಟವಾಗುತ್ತದೆ. ಸಣ್ಣ ಜಿಲ್ಲೆಗಳು ಆಗುವುದರಿಂದ ಅಭಿವೃದ್ಧಿ ಸಾಧ್ಯವಾಗುತ್ತೆ. ತಮ್ಮ ಅಹವಾಲುಗಳೇನೆ ಇದ್ದರೂ ಆಕ್ಷೇಪಣೆಗೆ ಅವಕಾಶವಿದೆ. ಇಂದು ಮಧ್ಯಾಹ್ನ ಅತಿಥಿಗೃಹದಲ್ಲಿ ತಮ್ಮೊಂದಿಗೆ ಸಭೆ ನಡೆಸಿ ತಮ್ಮ ಅಹವಾಲುಗಳನ್ನ ಆಲಿಸಲಾಗುವುದು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.