ETV Bharat / city

ಪೌರತ್ವ ತಿದ್ದುಪಡಿ ಕಾಯ್ದೆ ಖಂಡಿಸಿ ಡಿ.19ರಂದು ಪ್ರತಿಭಟನೆ : ಯು ಬಸವರಾಜ

ಕೇಂದ್ರ ಸರಕಾರ ಜಾರಿಗೆ ತಂದಿರುವ ಭಾರತ ಪೌರತ್ವ ತಿದ್ದುಪಡಿ ಕಾಯ್ದೆ ಖಂಡಿಸಿ ಡಿಸೆಂಬರ್​ 19 ರಂದು ದೇಶಾದ್ಯಂತ ಸಿಪಿಐಎಂ ಪ್ರತಿಭಟನೆ ಮಾಡುತ್ತದೆ ಎಂದು ಭಾರತ ಕಮ್ಯೂನಿಷ್ಟ್​ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ತಿಳಿಸಿದರು.

author img

By

Published : Dec 15, 2019, 7:52 PM IST

u basavaraj
ಯು ಬಸವರಾಜ

ಹೊಸಪೇಟೆ : ಬಿಜೆಪಿಯ ಮುಖ್ಯ ಉದ್ದೇಶ ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿಸುವುದು. ಇದು ಆರ್ ಎಸ್ ಎಸ್ ರಾಜಕೀಯ ಕುತಂತ್ರ. ಭಾರತ ಪ್ರಜಾ ರಾಜ್ಯ, ಇಲ್ಲಿ ಯಾರು ಬೇಕಾದರು ಜೀವಿಸಬಹುದು ಆದರೆ ಕೇಂದ್ರ ಸರಕಾರ ಮುಸ್ಲಿಂ ಧರ್ಮವನ್ನು ಟಾರ್ಗೇಟ್ ಮಾಡಿದೆ ಎಂದು ಭಾರತ ಕಮ್ಯೂನಿಸ್ಟ್​ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು. ಬಸವರಾಜ ಆರೋಪಿಸಿದರು.

ನಗರದ ಭಾರತ ಕಮ್ಯೂನಿಸ್ಟ್​ ಪಕ್ಷದ ಕಚೇರಿಯಲ್ಲಿಂದು ಕೇಂದ್ರ ಸರಕಾರ ಭಾರತ ಪೌರತ್ವ ಕಾನೂನು ತಿದ್ದುಪಡಿ ಕುರಿತು ಮಾತನಾಡಿದ ಅವರು, ಸಂಸತ್ತಿನ ಎರಡು ಸದನಗಳು ಸಿಎಬಿಯನ್ನು ಪಾಸು ಮಾಡಿವೆ. ಈ ಕಾಯ್ದೆಯ ಪ್ರಕಾರ ಡಿಸೆಂಬರ್ 31, 2014ರ ಪೂರ್ವ ಅಪಘಾನಿಸ್ಥಾನ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್ ಹಾಗೂ ಜೈನ್ ಧರ್ಮಗಳ ಜನ ಸಮುದಾಯಗಳಿಗೆ ಕಾನೂನು ಬದ್ಧ ಪೌರತ್ವವನ್ನು ನೀಡುತ್ತದೆ ಎಂದು ಹೇಳುತ್ತದೆ. ಆದರೆ ಮುಸ್ಲಿಂ ಧರ್ಮದವರನ್ನು ವಲಸೆ ಬಂದವರು ಎಂದು ಹೇಳುತ್ತಿದ್ದಾರೆ. ಅದು ಸರಿಯಲ್ಲ ಎಂದು ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ನಡೆಸಿದರು.

ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಖಂಡಿಸಿ ಪ್ರತಿಭಟನೆ

ಧರ್ಮ, ಜಾತಿ, ಮತ, ಪಂಥ, ಭಾಷೆ, ಲಿಂಗ, ಪ್ರದೇಶ ಹಾಗೂ ಲಿಂಗದ ಆಧಾರದ ಮೇಲೆ ತಾರತಮ್ಯವನ್ನು ‌ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೆ ಕೇಂದ್ರ ಸರಕಾರ ಧರ್ಮದ ಆಧಾರದ ಮೇಲೆ ತಾರತಮ್ಯವನ್ನು ಮಾಡುತ್ತಿದೆ. ಇದು ಸಂವಿಧಾನ ವಿರೋಧಿ ನೀತಿಯಾಗಿದೆ. ಇದನ್ನು ಖಂಡಿಸಿ ಡಿಸೆಂಬರ್​ 19 ರಂದು ದೇಶಾದ್ಯಂತ ಸಿಪಿಐಎಂ ಪ್ರತಿಭಟನೆಯನ್ನು ಮಾಡುತ್ತದೆ ಎಂದು ತಿಳಿಸಿದರು.

ಸಿಎಬಿ ದೇಶದಲ್ಲಿ ಕೋಮು ಗಲಭೆಯನ್ನು ಪ್ರಚೋದನೆ ಮಾಡುತ್ತದೆ. ಸಾಮಾಜಿಕ ಸಾಮರಸ್ಯ ಹಾಳಾಗುತ್ತದೆ. ದೇಶದ ಐಕ್ಯತೆಗೆ ಹಾಗೂ‌ ಸಮಗ್ರತೆಗೆ ಹಾನಿಯುಂಟು ಮಾಡುತ್ತದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು‌ ಅಮಿತ್​ ಶಾ ಸರಕಾರ ಹಾಗೂ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೋರಟಿದ್ದಾರೆ ಎಂದು ಕಿಡಿಕಾರಿದರು.

Intro: ಸಂವಿಧಾನ ವಿರೋಧಿ ಪೌರತ್ವ ತಿದ್ದುಪಡಿ ಹಿಂಪೆಡೆಯಿರಿ : ಯು ಬಸವರಾಜ.
ಹೊಸಪೇಟೆ : ಭಾರತೀಯ ಜನತಾ ಬಕ್ಷದ ಮುಖ್ಯ ಉದ್ದೇಶ ಎಂದರೆ ಭಾರತ ಹಿಂದುಗಳ ದೇಶವಾಗಬೇಕು.ಮುಸ್ಲಿಂ ಧರ್ಮದ ಜನಾಂಗವು ಇರಬಾರದು. ಇದು ಆರ್ ಎಸ್ ಎಸ್ ರಾಜಕೀಯ ಕುತಂತ್ರವಾಗಿದೆ‌ . ಭಾರತವು ಪ್ರಜಾ ರಾಜ್ಯವಾಗಿದೆ ಇಲ್ಲಿ ಯಾರ ಬೇಕಾದರು ಮಾತನಾಡಬಹು ಆದರೆ ಕೇಂ್ದರ ಸರಕಾರವು ಮುಸ್ಲಿಂ ಧರ್ಮದವರನ್ನು ಟಾರ್ಗೇಟ್ ಮಾಡಿದೆ ಇದನ್ನು ನಾವು ಪ್ರತಿಭಟನೆಯ ಮೂಲಕ ಖಂಡಿಸುತ್ತೇವೆ ಎಂದರು.

Body:ನಗರದ ಭಾರತ ಕಮ್ಯನಿಷ್ಟ ಪಕ್ಷದ ಕಛೇರಿಯಲ್ಲಿ ಇಂದು ಕೇಂದ್ರ ಸರಕಾರ ಭಾರತ ಪೌರತ್ವ ಕಾನೂನು ತಿದ್ದುಪಡೆಯನ್ನು ಮಾಡುವುದು ಸರಿಯಲ್ಲ ಆ ಕಾಯ್ದೆಯನ್ನು ಹಿಂಪಡೆಯಬೇಕೆಂದು ಭಾರತ ಕಮ್ಯನಿಷ್ಟ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು ಬಸವರಾಜ ಮಾತನಾಡಿದರು.

ಸಂಸತ್ತಿನ ಎರಡು ಸದನಗಳು ಸಿಎಬಿಯನ್ನು ಪಾಸು ಮಾಡಿವೆ. ಈ ಕಾಯ್ದೆಯು ಡಿಸೆಂಬರ್ 31,2014ರ ಪೂರ್ವ ಅಪಘಾನಿಸ್ಥಾನ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದ ಹಿಂದೂ ,ಸಿಖ್ , ಬೌದ್ಧ,ಕ್ರಿಶ್ಚಿಯನ್ ಹಾಗೂ ಜೈನ್ ಧರ್ಮಗಳ ಜನ ಸಮುದಾಯಗಳನ್ನು ಕಾನೂನು ಬದ್ಧ ಪೌರತ್ವವನ್ನು ನೀಡುತ್ತದೆ ಎಂದು ಹೇಳುತ್ತದೆ. ಆದರೆ ಮುಸ್ಲಿಂ ಧರ್ಮದವರನ್ನು ವಲಸೆ ಬಂದವರು ಎಂದು ಹೇಳುತ್ತಿದ್ದಾರೆ ಅದು ಸರಿ ಎಂದು ಕೇಂದ್ರ ಸರಕಾರದ ವಿರುದ್ದ ವಾಗ್ದಾಳಿ ಮಾಡಿದರು.

ಸಂವಿಧಾನ ಕಾನೂನಿನ‌ ಮುಂದೆ ಎಲ್ಲರು ಸರಿ ಸಮಾನರು ಎಂದು ಹೇಳುತ್ತಿದೆ. ಧರ್ಮ ಜಾತಿ ಮತ ಪಂಥ ಭಾಷೆ ಲಿಂಗ ಪ್ರದೇಶ ಹಾಗೂ ಲಿಂಗದ ಆದಾರದ ಮೇಲೆ ತಾರತಮ್ಯವನ್ನು ‌ಮಾಡಬಾರದು ಎಂದು ಸಂವಿಧಾನ ಹೇಳುತ್ತದೆ. ಆದರೆ ಕೇಂದ್ರ ಸರಕಾರ ಧರ್ಮದ ಆದಾರದ ಮೇಲೆ ತಾರತಮ್ಯವನ್ನು ಮಾಡುತ್ತಿದೆ. ಇದು ಸಂವಿಧಾನ ವಿರೋಧ ನೀತಿಯಾಗಿದೆ. ಇದನ್ನು ಖಂಡಿಸಿ ಡಿಸೆಂಬರ 19 ರಂದು ದೇಶಾದ್ಯಂತ ಸಿಪಿ ಐ ಎಂ ಪಕ್ಷ ತೀವ್ರ ಖಂಡಿಸುತ್ತದೆ ಮತ್ತು ಪ್ರತಿಭಟಬೆಯನ್ನು ಮಾಡುತ್ತದೆ ಎಂದರು.

ದೇಶದಲ್ಲಿ ಇದು ಕೋಮು ಗಲಭೆಯನ್ನು ಪ್ರಚೋದನೆ ಮಾಡುತ್ತದೆ.ಸಾಮಾಜಿಕ ಸಾಮರಸ್ಯ ಹಾಳಾಗುತ್ತದೆ.ದೇಶದ ಐಕ್ಯತೆಗೆ ಹಾಗೂ‌ ಸಮಗ್ರತೆಗೆ ಅಪಾಯಕಾರಿ ಹಾನಿಯುಂಟು ಮಾಡತ್ತದೆ. ಎನ್ಆರ್ ಸಿ ದೇಶಕ್ಕೆ ವಿಸ್ತರಿಸಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು‌ ಅಮಿತ ಶಾ ಸರಕಾರದ ಹಾಗೂ ಪ್ರಜಾಪ್ರಭುತ್ವದ ಬುಡ ಮೇಲು ಮಾಡುಲು ಹೋರಟಿದ್ದಾರೆ ಎಂದು ಗರಂ ಆದರು.

Conclusion:KN_HPT_4_SAMVIDHANA_VIRODHA_MASUDETIDDUPADE_SCRIPT_KA10028
bite : ಯು ಬಸವರಾಜ ಭಾರತ ಕಮ್ಯುನಿಷ್ಟ ಪಕ್ಷದ ರಾಜ್ಯ ಕಾರ್ಯದರ್ಶಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.