ETV Bharat / city

ಹೊಸಪೇಟೆ: ಲಗ್ನ ಪತ್ರಿಕೆಯಲ್ಲಿ 'ಬೇಟಿ ಬಚಾವೋ ಬೇಟಿ ಪಢಾವೋ' ಸಂದೇಶ

author img

By

Published : Jan 23, 2020, 10:10 AM IST

Updated : Jan 23, 2020, 11:22 AM IST

ವ್ಯಕ್ತಿಯೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯ ಘೋಷ ವಾಕ್ಯ ಮುದ್ರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

KN_BLY_1_CENTERAL_GOVT_SCH_IN_WEDDING_CARD_7203310
"ಬೇಟಿ ಬಚಾವೋ ಬೇಟಿ ಪಡಾವೋ", ಗಣಿನಾಡಿನ ಲಗ್ನಪತ್ರಿಕೆಯಲಿ ಕೇಂದ್ರ ಸರ್ಕಾರ ಯೋಜನೆ ಮುದ್ರಣ

ಬಳ್ಳಾರಿ: ವ್ಯಕ್ತಿಯೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯ ಘೋಷ ವಾಕ್ಯ ಮುದ್ರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾರೆ.

ಸಾಮಾನ್ಯವಾಗಿ ಲಗ್ನ ಪತ್ರಿಕೆಗಳನ್ನು ವಿಭಿನ್ನವಾಗಿ ಮುದ್ರಿಸಿರೋದನ್ನ ನೋಡಿದ್ದೇವೆ. ಕೆಲವರು ತಮ್ಮ ಶ್ರೀಮಂತಿಕೆಯನ್ನು ತೋರಿಸುವ ಸಲುವಾಗಿ ಡಿಜಿಟಲೀಕರಣದ ಸ್ಪರ್ಶ ನೀಡಿ, ಲಕ್ಷಾಂತರ ರೂ.ಗಳ ಲಗ್ನ ಪತ್ರಿಕೆಗಳನ್ನು ಮುದ್ರಿಸುತ್ತಾರೆ. ಆದರೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿಗಳಾದ ಕೃಷ್ಣಾರಾವ್ ಮತ್ತು ಜ್ಯೋತಿ ಕುಲಕರ್ಣಿ ಎಂಬುವರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾದ 'ಬೇಟಿ ಬಚಾವೋ ಬೇಟಿ ಪಢಾವೋ' ಎಂಬ ಸಂದೇಶ ಪ್ರಿಂಟ್ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಜನವರಿ 27ರಂದು ಅನುಷಾ ಹಾಗೂ ನಿತಿನ್ ಎಂಬುವವರ ವಿವಾಹ ನಡೆಯಲಿದ್ದು, ದಂಪತಿ ತಮ್ಮ ಮುದ್ದಿನ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ 'ಬೇಟಿ ಬಚಾವೋ ಬೇಟಿ ಪಢಾವೋ' ಸಂದೇಶವನ್ನು ಪ್ರಿಂಟ್ ಮಾಡಿಸಿದ್ದಾರೆ. ಈ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಇನ್ನು ಈ ದಂಪತಿಗೆ ಹೆಣ್ಣುಮಕ್ಕಳ ಮೇಲೆ ತುಂಬಾ ಪ್ರೀತಿ ಇರುವ ಕಾರಣ ತಮ್ಮ ಮಗಳನ್ನು ಬೆಳೆಸಿದ ರೀತಿಯಲ್ಲಿ ಬೇರೆಯವರು ಬೆಳಸಬೇಕು ಎನ್ನುವ ಉದ್ದೇಶದಿಂದ ಲಗ್ನ ಪತ್ರಿಕೆಯಲ್ಲಿ ಈ ರೀತಿಯಾಗಿ ಪ್ರಿಂಟ್ ಮಾಡಿಸಿದ್ದಾರಂತೆ.

Intro:ಗಣಿನಾಡಿನ ಲಗ್ನಪತ್ರಿಕೆಯಲಿ ಕೇಂದ್ರ ಸರ್ಕಾರ ಯೋಜನೆ ಮುದ್ರಣ: ಬೇಟಿ ಬಚಾವ್ ಬೇಟಿ ಪಡಾವ್……
ಬಳ್ಳಾರಿ: ಸಾಮಾನ್ಯವಾಗಿ ಲಗ್ನಪತ್ರಿಕೆಗಳನ್ನು ವಿಭಿನ್ನವಾಗಿ ಮುದ್ರಿಸಿರೋದನ್ನ ನಾವು- ನೀವೆಲ್ಲಾ ಕಂಡಿದ್ದೇವೆ. ಇನ್ನೂ
ಕೆಲವರು ತಮ್ಮ ಶ್ರೀಮಂತಿಕೆಯನ್ನು ಎತ್ತಿ ತೋರಿಸೊ ಸಲುವಾಗಿ ಡಿಜಿಟಲೀಕರಣದ ಸ್ಪರ್ಶ ನೀಡಿ, ಲಕ್ಷಾಂತರ ರೂ.ಗಳನ್ನು ವ್ಯಯಿಸಿ ಈ ಲಗ್ನಪತ್ರಿಕೆಗಳನ್ನು ಮುದ್ರಿಸುತ್ತಾರೆ. ಆದ್ರೆ, ಇಲ್ಲೊಬ್ಬರು ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ ಕೇಂದ್ರ ಸರ್ಕಾರ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಿಂಟ್ ಮಾಡುವ ಮೂಲಕ ಭಾರಿ ಸುದ್ದಿಗೆ ಗ್ರಾಸವಾಗಿದ್ದಾರೆ. ತಮ್ಮ ಮಗಳ ಲಗ್ನ ಪತ್ರಿಕೆಯಲ್ಲಿ 'ಬೇಟಿ ಬಚಾವ್ ಬೇಟಿ ಪಾಡಾವ್' ಎಂಬ ಘೋಷವಾಕ್ಯವನ್ನು
ಹಾಕಿ‌ ಪ್ರಿಂಟ್ ಮಾಡಿಸಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ನಿವಾಸಿಗಳಾದ ಕೃಷ್ಣಾರಾವ್ ಮತ್ತು ಜ್ಯೋತಿ ಕುಲಕರ್ಣಿ ಎಂಬುವರು ತಮ್ಮ ಮಗಳಾದ ಅನುಷಾ ಅವರ ಮದುವೆಯನ್ನು ಜನವರಿ 27ರಂದು ನಿಗದಿಪಡಿಸಿದ್ದು. ತಮ್ಮ ಮುದ್ದಿನ ಮಗಳ ಮದುವೆ ಆಮಂತ್ರಣ ಪತ್ರಿಕೆಯಲ್ಲಿ 'ಬೇಟಿ ಬಚಾವ್ ಬೇಟಿ ಪಡಾವ್' ಹಿಂಬರಹ ಪ್ರಿಂಟ್ ಮಾಡಿಸಿದ್ದು , ಈ ಲಗ್ನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
Body:ಜನವರಿ 27ರಂದು ಮಗಳ ಮದುವೆಯನ್ನು ಬೆಳಗಾವಿ ಮೂಲದ ನಿತಿನ್ ಎಂಬವವರ ಜೊತೆ ನಡೆಯಲಿದ್ದು, ತಮ್ಮ ಮುದ್ದಿನ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಲು ನಿಶ್ಚಯಿಸಿದ್ದಾರೆ.ಇನ್ನು ಈ ಇಬ್ಬರೂ ದಂಪತಿಗಳಿಗೆ ಹೆಣ್ಮಕ್ಕಳು ಎಂದ್ರೆ ತುಂಬಾನೇ ಇಷ್ಟ ಅಂತೆ. ಹೀಗಾಗಿ, ತಮ್ಮ ಮಗಳನ್ನು ಬೆಳೆಸಿದ ರೀತಿಯಲ್ಲಿ ಬೇರೆ ಯವರು ಬೆಳಸಬೇಕು ಎನ್ನುವ ಉದ್ದೇಶದಿಂದ ಲಗ್ನ ಪತ್ರಿಕೆಯಲ್ಲಿ ಈ ರೀತಿಯಾಗಿ ಪ್ರಿಂಟ್ ಮಾಡಿಸಿದ್ದಾರಂತೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_1_CENTERAL_GOVT_SCH_IN_WEDDING_CARD_7203310
Last Updated : Jan 23, 2020, 11:22 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.